ಬ್ಯಾಂಕಾಕ್‌ಗೆ ಹೋದ ಸ್ಪಂದನಾ ಬಾರದ ಲೋಕಕ್ಕೆ: ನೆನೆದು ಕಣ್ಣೀರಿಟ್ಟ ಮಾವ ಚಿನ್ನೇಗೌಡ , ಮೈದುನ ಮುರಳಿ

ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಾವಿನ ಸುದ್ದಿ ಕೇಳಿ ಜನ ಕಂಗಾಲಾಗಿದ್ದಾರೆ. ಕರ್ನಾಟಕ ರತ್ನ, ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್ ಅಗಲಿಕೆಯೇ ಇನ್ನೂ ಜನರ ಮನಸಿಂದ ಮಾಸಿಲ್ಲ. ಅಷ್ಟರಲ್ಲೇ ರಾಜ್ ಕುಟುಂಬದಲ್ಲಿ ಮತ್ತೊಂದು ದೊಡ್ಡ ಆಘಾತ ಕಣ್ಣೀರಿಡುವಂತೆ ಮಾಡಿದೆ.

Share this Video
  • FB
  • Linkdin
  • Whatsapp

ಚಂದನವನದ ಚಿನ್ನಾರಿ ಮುತ್ತ, ನಟ ವಿಜಯ ರಾಘವೇಂದ್ರ(Vijay Raghavendra ) ಪತ್ನಿ ಸ್ಪಂದನಾ (Spandana)ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ಸೋಮವಾರ ಸ್ಪಂದನಾ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ರು. ಪ್ರವಾಸದುದ್ದಕ್ಕೂ ಆರೋಗ್ಯವಾಗಿದ್ದ ಸ್ಪಂದನಾಗೆ ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ಲೋ ಬಿಪಿ(Low BP) ಕಾಣಿಸಿಕೊಂಡಿದೆ. ಬಳಿಕ ಆಸ್ಪತ್ರೆಗೆ ಕರೆದೊಯ್ದಾಗ, ಹೃದಯಾಘಾತದಿಂದ ಸ್ಪಂದನಾ ಇಹಲೋಕ ತ್ಯಜಿಸಿದ್ದಾರೆಂದು ವೈದ್ಯರು ಖಚಿತ ಪಡಿಸಿದ್ದಾರೆ. ಸ್ಪಂದನಾ ಹಠತ್ ಸಾವು ದೊಡ್ಡ ಶಾಕ್ ಕೊಟ್ಟಿದೆ. ಸ್ಫುರದ್ರೂಪಿಯಾಗಿದ್ದ ಸ್ಪಂದನಾ ಜೀವಕ್ಕೆ ತೂಕ ಇಳಿಕೆಯೇ(Weight loss) ಕುತ್ತಾಯ್ತಾ ಎಂಬ ಅನುಮಾನ ಬಲವಾಗಿದೆ. ಇತ್ತೀಚೆಗಷ್ಟೇ ಸ್ಪಂದನಾ ಜಿಮ್, ಡಯಟ್ ಮಾಡಿ ಬರೋಬ್ಬರಿ 16 ಕೆಜಿ ತೂಕ ಇಳಿಸಿದ್ರು. ಈ ದಿಢೀರ್ ತೂಕ ಇಳಿಕೆಯೇ ಸ್ಪಂದನಾ ಹೃದಯಾಘಾತಕ್ಕೆ ಕಾರಣವಾಗಿರುವಬಹುದು ಎನ್ನಲಾಗ್ತಿದೆ. ಆದ್ರೆ ಇದು ಊಹಪೋಹ ಎಂದು ಸ್ಪಂದನ ದೊಡ್ಡಪ್ಪರಾದ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಸ್ಪಂದನಾ ಬ್ಯಾಂಕಾಕ್‌ನಲ್ಲೇ ಮೃತಪಟ್ಟಿರುವ ಹಿನ್ನೆಲೆ, ಅಲ್ಲೇ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯೂ ನಡೆದಿದೆ. ಇಂದು ರಾತ್ರಿ ಸ್ಪಂದನಾ ಪಾರ್ಥಿವವನ್ನ ಬೆಂಗಳೂರಿಗೆ ತರಲಿದ್ದಾರೆ. ನಾಳೆ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ವೀಕ್ಷಿಸಿ: Today Horoscope: ಮಿಥುನ ರಾಶಿಯವರಿಗೆ ಈ ದಿನ ಶತ್ರುಭಾದೆ ಕಾಡಲಿದೆ..ಹಣಕಾಸಿನಲ್ಲಿ ಅನುಕೂಲ

Related Video