Asianet Suvarna News Asianet Suvarna News

ಮೋಹಕ ತಾರೆ ನಟಿ ರಮ್ಯಾ ಬರ್ತ್ ಡೇ : ಅಭಿಮಾನಿಗಳಿಗೆ ಕೊಡ್ತಾರಾ ಸರ್ಪ್ರೈಸ್?

ಬರ್ತ್ ಡೇ ದಿನ ಅಭಿಮಾನಿಗಳಿಗೆ ಕೊಟ್ಟ ಸರ್ಪ್ರೈಸ್ ಏನು..?
ರಮ್ಯಾ ಲೈಫ್‌ನಲ್ಲಿ ಬಂದಿರೋ ಆ ಹೊಸ ಅತಿಥಿ ಯಾರು..?
ಉತ್ತರಾಖಾಂಡ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ರಮ್ಯಾ ಎಂಟ್ರಿ

First Published Nov 30, 2023, 12:49 PM IST | Last Updated Nov 30, 2023, 12:50 PM IST

ರಮ್ಯಾ  ಡಾಲಿ ಹೀರೋ ಆಗಿರೋ ಉತ್ತರಾಖಾಂಡ ಚಿತ್ರದಿಂದ(Uttarakaanda movie) ಮತ್ತೆ ಸಿನಿಮಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್‌ವುಡ್‌(Sandalwood) ಕ್ವೀನ್ ರಮ್ಯಾ(Ramya) ಮತ್ತೆ ಕಮ್ ಬ್ಯಾಕ್ ಮಾಡುತ್ತಿರೋದು ಅಭಿಮಾನಿಗಳಿಗೆ(Fans) ಥ್ರಿಲ್ ಮೂಡಿಸಿದೆ. ಅಭಿ,ಆಕಾಶ್, ಅಮೃತಧಾರೆ, ಆದಿ, ಸೇವಂತಿ ಸೇವಂತಿ,ಲಕ್ಕಿ, ಮುಸ್ಸಂಜೆ ಮಾತು, ಜೊತೆ ಜೊತೆಯಲಿ, ಸಂಜು ವೆಡ್ಸ್ ಗೀತಾ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿ ರಮ್ಯಾ ನಟಿಸಿದ್ದಾರೆ. ಎರಡು ದಶಕಗಳಿಂದ ಸ್ಯಾಂಡಲ್‌ವುಡ್‌ ಕ್ವೀನ್ ಆಗಿದ್ದಾರೆ. ತೆರೆ ಮೇಲೆ ರಮ್ಯಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ರಮ್ಯಾ ಹೊಸ ಲುಕ್‌ಗಾಗಿ ವೈಟ್ ಲಾಸ್ ಮಾಡಿಕೊಂಡು ತೆಳ್ಳಗಾಗಿದ್ದಾರೆ. ಸಣ್ಣಗಾದ ರಮ್ಯಾರನ್ನು ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗೆ ರಮ್ಯಾ ನಿರ್ಮಾಣದ ಸಿನಿಮಾ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದ ಪ್ರಚಾರಕ್ಕೂ ರಮ್ಯಾ ಬಂದಿರಲಿಲ್ಲ. ಅದಕ್ಕೆ ಕಾರಣ ಲುಕ್ ಈಗಲೇ ರಿವೀಲ್ ಮಾಡೋದು ಬೇಡವೆಂದು. ಹಾಗಾಗಿ ರಮ್ಯಾ ಇದೀಗ  ಉತ್ತರಾಖಾಂಡ ಚಿತ್ರದಿಂದ ತೆರೆಮೇಲೆ ಬರಲಿದ್ದು ರಮ್ಯಾ ಹೊಸಾ ಲುಕ್ ಬರ್ತ್ ಡೇಗೆ ರಿವೀಲ್ ಮಾಡುತ್ತಾರೆಂದು ಕಾದಿದ್ದಫ್ಯಾನ್ಸ್ ಗೆ ಕೊನೆಗೆ ಸಿಕ್ಕದ್ದು ರಮ್ಯಾ ಎರಡು ಮುದ್ದಾದ ನಾಯಿ ಮರಿಗಳ ಜೊತೆ ಆಟವಾಡೊ ದೃಶ್ಯ. ಈ ಮುದ್ದಾದ ನಾಯಿ ಮರಿಗಳು ನನ್ನ ಹೃದಯಕ್ಕೆ ಇನ್ನಷ್ಟು ಸಂಭವನನ್ನು ತಂದಿವೆ. ನಿಮಗೂ ಆ ಸಂತಸ  ಸಿಗಲಿದೆ ಎಂದು ಅಂದುಕೊಳ್ಳುತ್ತಿದ್ದೇನೆಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿನಯ್ ರಾಜ್‌ಕುಮಾರ್ ವಿಡಿಯೋದಲ್ಲಿದ್ದು, ರಮ್ಯಾ ವಿನಯ್ ಈ ಗಿಫ್ಟ್ ನೀಡಿದ್ರಾ? ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಅದೇನೆ ಇದ್ದರೂ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ರಮ್ಯಾ ಚೈತ್ರಕಾಲ ಶುರುವಾಗೊ ಸಮಯ ಹತ್ತಿರವಾಗಿದೆ. 

ಇದನ್ನೂ ವೀಕ್ಷಿಸಿ:  ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಶಿವರಾಜ್‌ ಕುಮಾರ್‌; ಗೀತಾ ಕಾಲಿಗೆ ನಮಸ್ಕರಿಸಿದ ವಿನೋದ್‌ ರಾಜ್‌!