Yash-Radhika: ಯಶ್-ರಾಧಿಕಾ ಕಿತ್ತಾಡಿಕೊಳ್ಳುತ್ತಾರಾ..? ಅಭಿಮಾನಿಯ ಪ್ರಶ್ನೆಗೆ ನಟಿ ಉತ್ತರ ಏನು..?

ಇದೀಗ ನಟಿ ರಾಧಿಕಾ ಪಂಡಿತ್ ತಮ್ಮ ಹಾಗೂ ಯಶ್ ಜೊತೆಗಿನ ದಾಂಪತ್ಯದ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳ ಜೊತೆ ‘Ask Me Anything’ ಸೆಷನ್ ನಡೆಸಿರೋ ರಾಧಿಕಾ ಪಂಡಿತ್ ಯಶ್ ಜೊತೆಗಿನ ಹಲವು ವಿಚಾರಗಳ ಹೇಳಿದ್ದಾರೆ. 

First Published May 31, 2024, 11:24 AM IST | Last Updated May 31, 2024, 11:25 AM IST

ಯಶ್ (Yash) ಹಾಗೂ ರಾಧಿಕಾ(Radhika pandith) ಓಪನ್ ಆಗಿ ಯಾವಾಗಲೂ ಕಿತ್ತಾಡಿಕೊಂಡಿಲ್ಲ, ಹಾಗಂತ ಇವರ ಮಧ್ಯೆ ಕಿತ್ತಾಟ ನಡೆಯುವದೇ ಇಲ್ಲ ಎಂದಲ್ಲ. ಎಲ್ಲಾ ಸಂಸಾರಗಳಲ್ಲಿ ಇರುವಂತೆ ಇವರ ಮನೆಯಲ್ಲೂ ಜಗಳ ಆಗುತ್ತದೆ. ಈ ಬಗ್ಗೆ ರಾಧಿಕಾ ಮಾತನಾಡಿದ್ದಾರೆ. 10 ವರ್ಷಗಳಿಂದ ಫೈಟ್ ಜಗಳವೇ ಆಡದೇ ಹೇಗೆ ಸಂಸಾರ(Marital bonding) ನಡೆಸುತ್ತಿದ್ದೀರಿ? ನಮಗೂ ಟಿಪ್ಸ್ ಕೊಡಿ’ ಎಂದು ರಾಧಿಕಾಗೆ ಫ್ಯಾನ್ಸ್(Fans) ಕೇಳಿದ್ದಾರೆ. ‘ನಾವೂ ಜಗಳ ಹಾಗೂ ವಾದಗಳನ್ನು ಮಾಡುತ್ತೇವೆ. ಎಲ್ಲಾ ಸಂಬಂಧಗಳಲ್ಲೂ ಅದು ಸಾಮಾನ್ಯ. ಜಗಳ ಆಗುತ್ತದೆ ಅನ್ನೋದು ಮುಖ್ಯವಲ್ಲ, ಅದನ್ನು ಹೇಗೆ ಸರಿಪಡಿಸಿಕೊಳ್ಳುತ್ತೀರಿ ಅನ್ನೋದು ಮುಖ್ಯ. ಇದರಿಂದ ಸಂಬಂಧ ಮತ್ತಷ್ಟು ಗಟ್ಟಿ ಆಗುತ್ತದೆ’ ನಮ್ಮಿಬ್ಬರ ಸಂಬಂದ ಗಟ್ಟಿಯಾಗಿರಲು ಗೆಳೆತನವೇ ಕಾರಣ ಎಂದಿದ್ದಾರೆ ರಾಧಿಕಾ. ನಟಿ ರಾಧಿಕಾ ಚಿತ್ರರಂಗದ ಜೊತೆಗಿನ ನಂಟನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ಆದ್ರು ನಟನೆಯಿಂದ ದೂರ ಇದ್ದಾರೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ. ಹೀಗಾಗಿ ನೀವು ಮತ್ತೆ ನಟನೆಗೆ ಮರಳೋದು ಯಾವಾಗ ಎಂದು ಕೇಳಿದ್ದಾರೆ. ಇದಕ್ಕೆ ರಾಧಿಕಾ ‘ಸರಿಯಾದ ಸಮಯ ಬಂದಾಗ’ ಎಂದು ಉತ್ತರಿಸಿದ್ದಾರೆ. ಈ ಉತ್ತರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಇದೆ. ಒಟ್ಟಿನಲ್ಲಿ ರಾಧಿಕಾ ತನ್ನ ಫ್ಯಾನ್ಸ್ ಜೊತೆ ಹಲವು ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಟ್ಯಾಟೂ ಹಾಕಿಸಿಕೊಂಡ ಸುದೀಪ್ ಪುತ್ರಿ ! ಕುತ್ತಿಗೆ ಮೇಲೆ ಪೀಕು ಎಂದು ಬರೆಸಿಕೊಂಡ ಸಾನ್ವಿ! ಏನಿದರ ಅರ್ಥ?

Video Top Stories