Asianet Suvarna News Asianet Suvarna News

ಟ್ಯಾಟೂ ಹಾಕಿಸಿಕೊಂಡ ಸುದೀಪ್ ಪುತ್ರಿ ! ಕುತ್ತಿಗೆ ಮೇಲೆ ಪೀಕು ಎಂದು ಬರೆಸಿಕೊಂಡ ಸಾನ್ವಿ! ಏನಿದರ ಅರ್ಥ?

ಸಾನ್ವಿ ಸುದೀಪ್.. ಕಿಚ್ಚ ಅಕ್ಕರೆಯ ಮಗಳು. ಸಾನ್ವಿ ಇತ್ತೀಚೆಗೆ ತನ್ನ ಸಂಗೀತಾಸಕ್ತಿಯನ್ನು ವ್ಯಕ್ತಿಪಡಿಸಿದ್ದರು. ಇದಿಗ ಸಾನ್ವಿ ತನ್ನ ಕುತ್ತಿಗೆ ಮೇಲೆ ಟ್ಯಾಟೂ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ.

ಸಾನ್ವಿ ಸುದೀಪ್(Sanvi Sudeep) ಕತ್ತಿನ(Neck) ಭಾಗದಲ್ಲಿ ‘ಪೀಕು’(Piku) ಎಂದು ಟ್ಯಾಟೂ(Tattoo) ಹಾಕಿಸಿಕೊಂಡಿದ್ದಾರೆ. ಪೀಕು ಎಂದರೆ ಹಿಂದಿ ಸಿನಿಮಾದ ಹೆಸರಲ್ಲ. ಪೀಕು, ಸಾನ್ವಿಯ ತಾಯಿ ಪ್ರಿಯಾ ಸುದೀಪ್‌ರ ಅಡ್ಡ ಹೆಸರು. ಪ್ರಿಯಾ ಸುದೀಪ್‌ರನ್ನು(Priya Sudeep) ಅವರ ತಾತ ಮುದ್ದಾಗಿ ಪೀಕು ಎಂದೇ ಕರೆಯುತ್ತಿದ್ದರಂತೆ. ಹಾಗಾಗಿ ತಾಯಿಯ ಅಡ್ಡ ಹೆಸರನ್ನು ಟ್ಯಾಟೂ ಮಾದರಿಯಲ್ಲಿ ಸಾನ್ವಿ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಸಾನ್ವಿ. ವಿಡಿಯೋಕ್ಕೆ ಹಲವಾರು ಲೈಕ್, ಕಮೆಂಟ್‌ಗಳು ಬಂದಿವೆ. ಟ್ಯಾಟೂ ವಿಡಿಯೋ ಹಂಚಿಕೊಂಡಿರುವ ಸಾನ್ವಿ‘ನೀವೆಲ್ಲ ಏನಾದರೂ ಅಂದುಕೊಳ್ಳುವ ಮೊದಲು ನಾನೇ ಹೇಳುಬಿಡುತ್ತೇನೆ. ‘ಪೀಕು’ ಎಂಬುದು ಅಡ್ಡ ಹೆಸರು. ನನ್ನ ತಾಯಿಯನ್ನು ಅವರ ತಾತ ಪೀಕು ಎಂದೇ ಕರೆಯುತ್ತಿದ್ದರು’ ಎಂದು ಸ್ಟೋರಿ ಹಾಕಿಕೊಂಡಿದ್ದಾರೆ ಸಾನ್ವಿ ಸುದೀಪ್. ಸಾನ್ವಿ ತಾಯಿ ಪ್ರೀತಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.  ಸಾನ್ವಿ ಸೋದರತ್ತೆ ಮಗ ಸಂಚಿತ್ ಸಾಗರ್ ಸಿನಿಮಾಗೂ ಸಾನ್ವಿ ಹಾಡೊಂದನ್ನು ಹಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  63ನೇ ಹುಟ್ಟುಹಬ್ಬ ಆಚರಿಸಿಕೊಂಡ ರವಿಚಂದ್ರನ್ !ಹೊಸ ‘ಪ್ರೇಮಲೋಕ’ ಸೃಷ್ಟಿಸೋ ಭರವಸೆ ಕೊಟ್ಟ ರವಿಮಾಮ!