ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ವಿವಾದ..! ಸೋಶಿಯಲ್ ಮೀಡಿಯಾ ಟ್ರೆಂಡ್ ಆದ ಪವಿತ್ರಾ ಗೌಡ..!

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಕಿತ್ತಾಡಿದ್ದು, ನಿಮ್ಗೆಲ್ಲಾ ಗೊತ್ತೇ ಇದೆ. ವಿಜಯಲಕ್ಷ್ಮಿ ತನ್ನ ಪತಿ ದರ್ಶನ್ ಜತೆ ಇರೋ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. 

Share this Video
  • FB
  • Linkdin
  • Whatsapp

ಕೆಲವೇ ನಿಮಿಷದಲ್ಲಿ ದರ್ಶನ್ ಜೊತೆ ಪವಿತ್ರಾ ಗೌಡ ಇರೋ ಹಲವು ಫೋಟೋಗಳನ್ನ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ರು ಪವಿತ್ರಾ ಗೌಡ. ಈ ಫೋಟೋಗಳು ದೊಡ್ಡ ವಿವಾದ ಸೃಷ್ಟಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ(Vijayalakshmi) ಹಾಗೂ ಪವಿತ್ರಾ ಗೌಡ(Pavitra Gowda) ಇವರಿಬ್ಬರು ಕಿತ್ತಾಡಿಕೊಂಡಿದ್ರು. ಇದೀಗ ನಟಿ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಟ್ರೆಂಡ್ ಆಗುತ್ತಿದ್ದಾರೆ. ಅದಕ್ಕೆ ಕಾರಣ ಪವಿತ್ರಾ ಗೌಡ ಹಂಚಿಕೊಂಡಿರೋ ಎರಡು ಫೋಟೋ. ನಟಿ ಪವಿತ್ರಾ ಗೌಡ ದರ್ಶನ್(Darshan) ಜತೆ ಇರೋ ಫೋಟೋಗಳನ್ನ ಹಂಚಿಕೊಂಡು ನಮ್ಮ ಸಂಬಂಧಕ್ಕೆ 10 ವರ್ಷ ಆಯ್ತು ಅಂತ ಬರೆದುಕೊಡಿದ್ರು. ಇದನ್ನ ನೋಡಿ ಕೆಂಡ ಮಂಡಲರಾಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಬೇರೆಯವರ ಗಂಡನ ಫೋಟೋವನ್ನ ಈ ರೀತಿ ಬಳಸಿಕೊಳ್ಳೋಕೆ ಈ ಹೆಂಗಸಿಗೆ ಎಷ್ಟು ಧೈರ್ಯ ಇದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಪವಿತ್ರಾ ಗೌಡಗೆ ಎಚ್ಚರಿಕೆ ಕೊಟ್ಟಿದ್ರು, ಆದ್ರೆ ಇದಕ್ಕೆ ಬಗ್ಗದ ಪವಿತ್ರಾ ಗೌಡ ತನಗೂ ಕಾನೂನು ಕ್ರಮ ಕೈಗೊಳ್ಳೋದು ಗೊತ್ತಿದೆ. ಎಚ್ಚರಿಕೆ ಇರಲಿ ಅಂತ ವಿಜಯಲಕ್ಷ್ಮಿಗೆ ಸೋಷಿಯಲ್ ಮೀಡಿಯಾದಲ್ಲೇ ಎಚ್ಚರಿಕೆ ಕೊಟ್ಟಿದ್ರು. ಅಲ್ಲಿಂದ ಈ ಕಿತ್ತಾಟವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಗಲಿ, ಪವಿತ್ರಾ ಗೌಡ ಆಗಲಿ ಮುಂದುವರೆಸಿರಲಿಲ್ಲ. ಆದರೆ ಪವಿತ್ರಾ ಗೌಡ ಮಾತ್ರ ಆಗಾಗ ಇನ್‌ಸ್ಟಾಗ್ರಾಂ ಕೆಲ ಫೋಟೋಗಳನ್ನ(Photos) ಶೇರ್ ಮಾಡಿತ್ತಿದ್ದಾರೆ. ಈಗ ಮತ್ತೆರಡು ಫೋಟೊ ಹಂಚಿಕೊಂಡಿದ್ದು, ಥೇಟ್‌ ದರ್ಶನ್‌ರಂತೆಯೇ ಕ್ಯಾಮರಾ ಹಿಡಿದು ಫೋಟೋಗ್ರಫಿ ಮಾಡಿದ್ದಾರೆ. ಈ ಫೋಟೊಗಳನ್ನು ನೋಡಿದ ದರ್ಶನ್ ಫ್ಯಾನ್ಸ್ ಗಮನ ಪವಿತ್ರಾ ಗೌಡ ಕೈಯ ಮೇಲಿರೋ ಟ್ಯಾಟು ಕಡೆಗೆ ತಿರುಗಿದೆ.

ಇದನ್ನೂ ವೀಕ್ಷಿಸಿ: ಇಮ್ರಾನ್‌ಗೆ 14 ವರ್ಷ, 3ನೇ ಪತ್ನಿಗೆ 7 ವರ್ಷ ಜೈಲು..! ಶಹಬಾಜ್ ಶರೀಫ್ ದಾಳಕ್ಕೆ ಇಮ್ರಾನ್ ವಿಕೆಟ್ ಆಗಿದ್ದು ಹೇಗೆ..?

Related Video