ಇಮ್ರಾನ್‌ಗೆ 14 ವರ್ಷ, 3ನೇ ಪತ್ನಿಗೆ 7 ವರ್ಷ ಜೈಲು..! ಶಹಬಾಜ್ ಶರೀಫ್ ದಾಳಕ್ಕೆ ಇಮ್ರಾನ್ ವಿಕೆಟ್ ಆಗಿದ್ದು ಹೇಗೆ..?

ಇಮ್ರಾನ್‌ಗೆ ‘ಸೈಫೆರ್’ಕಂಟಕ,ಬೀಬಿಗೆ ‘ಇದ್ದತ್’ ಸಂಕಷ್ಟ..!
ಇಮ್ರಾನ್ ಖಾನ್‌ಗೆ 5 ದಿನದಲ್ಲಿ 3 ಶಿಕ್ಷೆ ವಿಧಿಸಿದ ಪಾಕ್ ಕೋರ್ಟ್!
ಇಸ್ಲಾಂನ ಇದ್ದತ್ ನಿಯಮ ಉಲ್ಲಂಘಿಸಿ ಮದುವೆಯಾಗಿದ್ದ ಇಮ್ರಾನ್

First Published Feb 5, 2024, 9:33 AM IST | Last Updated Feb 5, 2024, 9:34 AM IST

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ಇಸ್ಲಾಮಾಬಾದ್‌ನ(Islamabad) ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ತೋಷಖಾನಾ ಪ್ರಕರಣದಲ್ಲಿ(Toshakhana case) 14 ವರ್ಷಗಳ ಜೈಲು(Jail) ಶಿಕ್ಷೆ ವಿಧಿಸಿದೆ. ಅವರ ಮೂರನೇ ಪತ್ನಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸದ್ಯ ದೇಶ ಲೂಟಿ ಮಾಡಿದ ಇಮ್ರಾನ್‌ ಖಾನ್‌ಗೆ ಜೈಲೇ ಫಿಕ್ಸ್‌ ಆದಂತೆ ಆಗಿದೆ. ಪಾಕಿಸ್ತಾನವು(Pakistan) ಹಲವು ಬಿಕ್ಕಟ್ಟುಗಳ ಸುಳಿಯಲ್ಲಿ ಸಿಲುಕಿದ್ದು, ಅದನ್ನು ಛಿದ್ರಗೊಳಿಸುವ ಅಪಾಯವಿದೆ. ಅದರ ಆರ್ಥಿಕತೆಯು ಹದಗೆಟ್ಟಿದೆ. ಅದರ ರಾಜಕೀಯ ಆಳವಾಗಿ ಮತ್ತು ಕಟುವಾಗಿ ವಿಭಜನೆಯಾಗಿದೆ. ಅದರ ಪ್ರಜಾಪ್ರಭುತ್ವವು ಹದಗೆಟ್ಟಿದೆ ಮತ್ತು ಅದರ ಅತ್ಯಂತ ಜನಪ್ರಿಯ ರಾಜಕಾರಣಿ ಜೈಲಿನಲ್ಲಿದೆ. ದೇಶವು ಒಳಗಿನಿಂದ ಮತ್ತು ಹೊರಗಿನಿಂದ ಸವಾಲುಗಳನ್ನು ಎದುರಿಸುತ್ತಿದೆ, ಅದು 75 ವರ್ಷ ವಯಸ್ಸಿನ ರಾಷ್ಟ್ರದ ಕುಸಿತಕ್ಕೆ ಕಾರಣವಾಗಬಹುದು.

ಇದನ್ನೂ ವೀಕ್ಷಿಸಿ:  Elon Musk: ಎಲನ್ ಮಸ್ಕ್ ಎಡವಿದ್ದೆಲ್ಲಿ..? ವಿಶ್ವ ವಿಜ್ಞಾನಿಗಳ ಪ್ರಶ್ನೆಗಳೇನು..?

Video Top Stories