ಟಾಲಿವುಡ್ ದಿಗ್ಗಜ ಪ್ರಭಾಸ್‌ಗೆ ಅನಾರೋಗ್ಯ: 'ಬಾಹುಬಲಿ'ಗೆ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ..!

ನೀಲ್‌ರ ಸಲಾರ್‌ಗೆ ಎದುರಾಗುತ್ತಾ ಸಂಕಷ್ಟ..?
ಸಲಾರ್ ಪ್ರಮೋಷನ್ ಶುರುಮಾಡಿಲ್ಲ ಯಾಕೆ..?
ನಟ ಪ್ರಭಾಸ್‌ಗೆ ಮೊಣಕಾಲಿಗೆ ಆಪರೇಷನ್..!

Share this Video
  • FB
  • Linkdin
  • Whatsapp

ಡಾರ್ಲಿಂಗ್ ಪ್ರಭಾಸ್ ಸಿನಿ ಜಗತ್ತಿನಲ್ಲಿ ಬರೋಬ್ಬರಿ 20 ವರ್ಷ ಸವೆಸಿರೋ ಈ ಬಾಹುಬಲಿಗೆ ಈಗ ದೊಡ್ಡ ಚಾಲೆಂಜ್ ಒಂದು ಎದುರಾಗಿದೆ. ಆ ಚಾಲೇಂಜ್ ಏನು ಅಂತ ಕೇಳಿದ್ರೆ, ಪ್ರಭಾಸ್(Prabhas) ಫ್ಯಾನ್ಸ್ ಎದೆ ಗಡ್ಡಿ ಮಾಡ್ಕೋಬೇಕು. ಡಾರ್ಲಿಂಗ್ ಪ್ರಭಾಸ್ ಟಾಲಿವುಡ್ ಸಿನಿ ಜಗತ್ತಲ್ಲಿ ಉದಯಿಸಿರೋ ಮತ್ತೊಬ್ಬ ಸೂಪರ್ ಸ್ಟಾರ್. ತೆಲುಗು ದಿಗ್ಗಜ ನಟರ ಸಾಲಿನಯಲ್ಲಿ ನಿಂತಿರೋ ಡಾರ್ಲಿಂಗ್, ಈಗ ಸಲಾರ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ರು. ಆದ್ರೆ ಅಷ್ಟರಲ್ಲಾಗ್ಲೆ ಪ್ರಭಾಸ್‌ಗೆ ದೊಡ್ಡ ಸಂಕಷ್ಟ ಎದುರಾಗಿದೆ. ಪ್ರಭಾಸ್ ಅನಾರೋಗ್ಯಕ್ಕೆ(Ill Health) ತುತ್ತಾಗಿದ್ದಾರೆ. ಕಳೆದ ಇಪ್ಪತ್ತು ವರ್ಷದಿಂದ ಚಿತ್ರರಂಗದಲ್ಲಿ ದುಡಿದು ದಣಿದಿರೋ ಈ ಬಾಹುಬಲಿಯ ಬಾಹುಗಳಿಗೆ ಈಗ ರೆಸ್ಟ್ ಬೇಕಾಗಿದೆ. ಇದೇ ಕಾರಣಕ್ಕೆ ಪ್ರಭಾಸ್ ಈಗ ಅಮೆರಿಕಾದಲ್ಲಿ(America) ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಡಾರ್ಲಿಂಗ್ ಪ್ರಭಾಸ್ ಪ್ಯಾನ್ ಇಂಡಿಯಾದ ಆ್ಯಕ್ಷನ್ ಹೀರೋ. ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿರೋ ಡಾರ್ಲಿಂಗ್ ಬ್ಯುಸಿ ಶೆಡ್ಯೂಲ್‌ನಲ್ಲಿ ಓಡಾಟದ ಜೊತೆ ಜಿಮ್ ಮಾಡಿ ಈಗ ಮೊಣಕಾಲಿನ ನೋವಿನಿಂದ(Knee pain) ಬಳಲುತ್ತಿದ್ದಾರೆ. ಹೆಕ್ಟಿಕ್ ಶೆಡ್ಯೂಲ್‌ನಲ್ಲಿ ವರ್ಕ್ ಮಾಡುತ್ತಿದ್ದ ಪ್ರಭಾಸ್‌ಗೆ ಮೊಣಕಾಲಿನ ನೋವಿನ ಜೊತೆಗೆ ಕೆಲ ಆರೋಗ್ಯ ಸಮಸ್ಯೆಗಳು ಇವೆ. ಇದನ್ನೆಲ್ಲಾ ಪರಿಹರಿಸಿಕೊಳ್ಳಲು ಸಿನಿಮಾ ಕೆಲಸದಿಂದ ಬಿಗ್ ಬ್ರೇಕ್ ಬಯಸಿದ್ದಾಂತೆ ಯಂಗ್ ರೆಬಲ್ ಸ್ಟಾರ್. ಹೀಗಾಗಿ ಈಗ ಮುಂದಿನ ತಿಂಗಳು ರಿಲೀಸ್ ಆಗೋ ಸಲಾರ್ ಕಥೆ ಏನು ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Panchanga: ತುಲಾ ರಾಶಿಯವರಿಗೆ ಹಣಕಾಸಿನ ಅನುಕೂಲ, ನಿಮ್ಮ ಮಾತಿನಿಂದ ತೊಡಕಾಗುವ ಸಾಧ್ಯತೆ

Related Video