Panchanga: ತುಲಾ ರಾಶಿಯವರಿಗೆ ಹಣಕಾಸಿನ ಅನುಕೂಲ, ನಿಮ್ಮ ಮಾತಿನಿಂದ ತೊಡಕಾಗುವ ಸಾಧ್ಯತೆ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಚತುರ್ದಶಿ ತಿಥಿ, ಪುಷ್ಯ ನಕ್ಷತ್ರ.

ಮಂಗಳವಾರ ಚತುರ್ದಶಿ ಇರುವುದರಿಂದ ತುಂಬಾ ಉತ್ತಮವಾದ ಕಾಲವಾಗಿದೆ. ಈ ದಿನ ದುರ್ಗಾ ಪರಮೇಶ್ವರಿ ಆರಾಧನೆ ಮಾಡಿ. ಈ ದಿನ ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿ ಇದ್ದು, ಹಣಕಾಸಿನ ಅನುಕೂಲವಿದೆ. ನಿಮ್ಮ ಮಾತಿನಿಂದ ನಿಮಗೇ ತೊಂದರೆಯಾಗುವ ಸಾಧ್ಯತೆಯೂ ಇದೆ. ವಿದ್ಯಾರ್ಥಿಗಳಿಗೆ ಈ ದಿನ ತೊಡಕಿದೆ. ಇಂದು ಈ ರಾಶಿಯವರು ಸರಸ್ವತಿ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ ನಾಗ್: ಚಿತ್ರರಂಗದ ನೆನಪಿನ ಬುತ್ತಿ ಬಿಚ್ಚಿಟ್ಟ ಖ್ಯಾತ ನಟ

Related Video