ಋಷಿಮುನಿ ಅವತಾರದಲ್ಲಿ ರಾಕಿ ಮಿಂಚಿನ ಸಂಚಲನ: ಯಶ್ ಯಾವೆಲ್ಲಾ ಲುಕ್‌ನಲ್ಲಿ ಹೇಗೆಲ್ಲಾ ಕಾಣಿಸ್ತಾರೆ ?

ಪ್ಯಾನ್ ಇಂಡಿಯಾದ 'ದಶವತಾರಿ' ನಟ ಯಶ್!
ಅಘೋರಿಯಾಗೂ ಮನಸ್ಸು ಭಸ್ಮ ಮಾಡ್ತಾರೆ ಯಶ್!
ರಾಮ, ರಾವಣನ ಅವತಾರದಲ್ಲಿ ಬಂದಿದ್ದ ರಾಕಿ.!

First Published Jul 3, 2023, 8:56 AM IST | Last Updated Jul 3, 2023, 8:56 AM IST

ರಾಕಿಂಗ್ ಸ್ಟಾರ್ ಯಶ್ ಪಕ್ಕಾ ಮಾಸ್ ಹೀರೋ. ಅಷ್ಟೆ ಅಲ್ಲ ಲವರ್ ಬಾಯ್, ಹಳ್ಳಿ ಹೈದ, ಮಿಡ್ಲ್ ಕ್ಲಾಸ್ ಹುಡುಗ, ಕಾಲೇಜ್ ಕುವರ, ಪೊಲೀಸ್ ಅವತಾರ ಬ್ಯುಸಿನೆಸ್ ಮ್ಯಾನ್, ಪಕ್ಕಾ ಲೋಕಲ್ ಬಾಯ್ ಅಬ್ಬಬ್ಬ ಯಶ್‌ಗೆ ಯಾವ್ ಪಾತ್ರಗಳು ಸೂಟ್ ಆಗಲ್ಲ ಹೇಳಿ. ಎಲ್ಲಾ ಪಾತ್ರಕ್ಕೂ ಒಗ್ಗಿಕೊಳ್ಳು ಮ್ಯಾನರಿಸಂ ರಾಕಿಯದ್ದು. ಇದನ್ನೆಲ್ಲಾ ನೋಡಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಯಶ್ರನ್ನ ರೆಟ್ರೋ ಸ್ಟೈಲ್‌ನಲ್ಲಿ ಮಾಸ್ ಆಗಿ ತೋರಿಸಿ ಗೆದ್ದು ಬಿಟ್ರು. ಆದ್ರೆ ರಾಕಿ ಫ್ಯಾನ್ಸ್ ಹಾಗಲ್ಲ. ನಿರ್ದೇಶಕ ಪ್ರಶಾಂತ್ ನೀಲ್‌ಗಿಂತಲೂ ನಾವು ಒಂದು ಕೈ ಮುಂದೆ ಎನ್ನುತ್ತಾ ರಾಕಿಯನ್ನ ಈಗ ದಶವತಾರಿಯನ್ನಾಗಿ ಮಾಡ್ಬಿಟ್ಟಿದ್ದಾರೆ. ಯಶ್ ಯಾವೆಲ್ಲಾ ಲುಕ್‌ನಲ್ಲಿ ಹೇಗೆಲ್ಲಾ ಕಾಣಿಸ್ತಾರೆ ಅಂತ ಒಂದಿಷ್ಟು ಫೋಟೋಗಳನ್ನ ಡಿಸೈನ್ ಮಾಡಿ ಹರಿ ಬಿಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ: Horoscope Today: ಈ ದಿನ ಗುರು ಪೂರ್ಣಿಮಾ ಇದ್ದು, ಇದರ ವಿಶೇಷತೆ ಏನು, ಯಾಕೆ ಆಚರಿಸುತ್ತಾರೆ ?