Horoscope Today: ಈ ದಿನ ಗುರು ಪೂರ್ಣಿಮಾ ಇದ್ದು, ಇದರ ವಿಶೇಷತೆ ಏನು, ಯಾಕೆ ಆಚರಿಸುತ್ತಾರೆ ?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಸೋಮವಾರ, ಪೌರ್ಣಮಿ ತಿಥಿ, ಮೂಲ ನಕ್ಷತ್ರ.
ಇಂದು ಗುರು ಪೂರ್ಣಿಮಾ ಇದ್ದು, ತುಂಬಾ ವಿಶಿಷ್ಟವಾದ ದಿನವಾಗಿದೆ. ದೇವರ ನಂತರ ಗುರುವೇ ತುಂಬಾ ಮುಖ್ಯ. ಸಮಾಜದ ಮತ್ತು ಅದರ ನಿರ್ಮಾಣ ಪ್ರಕ್ರಿಯೆಯ ಅವಿಭಾಜ್ಯ ಅಂಗವೆಂದರೇ ಅದು ಗುರು. ಗುರು ಪ್ರತಿಯೊಬ್ಬರಿಗೂ ದೇವರ ಸಮಾನವಾಗಿದ್ದಾರೆ. ಚಾಂದ್ರಮಾನ ಮಾಸದ ಆಷಾಢದಲ್ಲಿ ಶುಕ್ಲ ಪಕ್ಷದಲ್ಲಿ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ.
ಇದನ್ನೂ ವೀಕ್ಷಿಸಿ: ಹಣ ಡ್ರಾ ಮಾಡುವಾಗ ಎಚ್ಚರ...ಎಚ್ಚರ !: ಮಹಿಳೆ ಬಳಿ ಇದ್ದ 1 ಲಕ್ಷ ಲೂಟಿ, ಕೃತ್ಯ ಸಿಸಿಟಿವಿಯಲ್ಲಿ ಸೆರೆ