ಮೊಬೈಲ್‌ ಶಾಪ್‌ನಲ್ಲಿ ಭಕ್ತಿಗೀತೆ ಹಾಕಿದ್ದೇ ತಪ್ಪಾ? ಮುಸ್ಲಿಂ ಯುವಕರಿಂದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ !

ಮೊಬೈಲ್‌ ಶಾಪ್‌ನಲ್ಲಿ ಭಕ್ತಿಗೀತೆ ಹಾಕಿದ್ದಕ್ಕೆ ಕೆಲ ಮುಸ್ಲಿಂ ಯುವಕರು ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಸಿದ್ದಣ್ಣ ಗಲ್ಲಿ ಏರಿಯಾದಲ್ಲಿ ನಡೆದಿದೆ.

Share this Video
  • FB
  • Linkdin
  • Whatsapp

ಭಕ್ತಿಗೀತೆ ಹಾಕಿದ್ದಕ್ಕೆ ಮೊಬೈಲ್‌ ಶಾಪ್‌(Mobile Shop) ಮಾಲೀಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಸಿಲಿಕಾನ್‌ ಸಿಟಿಯಲ್ಲಿ ನಡೆದಿದೆ. ಮಾಲೀಕನ ಮೇಲೆ ಮುಸ್ಲಿಂ ಯುವಕರು(Muslim youths) ಹಲ್ಲೆ ನಡೆಸಿದ್ದಾರೆ. ಸಿದ್ದಣ್ಣ ಗಲ್ಲಿ ಏರಿಯಾದಲ್ಲಿ ಮಾಲೀಕ ಮೊಬೈಲ್‌ ಶಾಪ್‌ ನಡೆಸುತ್ತಿದ್ದ. ಮಸೀದಿ ಪಕ್ಕದಲ್ಲೇ ಮಾಲೀಕ ಮೊಬೈಲ್ ಶಾಪ್‌ ನಡೆಸುತ್ತಿದ್ದ. ನಮಾಜ್ ವೇಳೆ ಭಕ್ತಿಗೀತೆ ಆಫ್‌ ಮಾಡುವಂತೆ ಯುವಕರು ಧಮ್ಕಿ ಹಾಕಿದ್ದು, ಬಳಿಕ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲಸೂರು ಗೇಟ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರು ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ವಿಡಿಯೋ ನೋಡಿ: ದಂಡನಾಯಕರಿಗೆ ಅಷ್ಟ ದಿಗ್ಬಂಧನ..ಸಿದ್ದು, ಡಿಕೆಶಿ ಕೋಟೆ ಕಂಪನ..?

Related Video