ಕರಗ ಕಾಪಾಡೋ ಕೈವ..ಕೈವನ ಲವ್ವಲ್ಲಿ ಸಲ್ಮಾ: ಧನ್ವೀರ್-ಮೇಘಾ ಶೆಟ್ಟಿಗೆ ಇದು ಮೂರನೇ ಸಿನಿಮಾ !
ಧರ್ಮರಾಯ ದೇವಾಲಯದಿಂದ ದರ್ಗಾದವರೆಗೆ
ಟ್ರೆಂಡ್ ಸೆಟ್ ಮಾಡೋಕೆ ಸಿದ್ದವಾದ ಕೈವ ಸಿನಿಮಾ
ಡಿ.8 ಕ್ಕೆ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ ಕೈವ
ತಿಗಳ ಪೇಟೆ ಪೈಲ್ವಾನರ ಬೀದಿಯಲ್ಲಿ ಅರಳಿದ ಕತೆ
ಸ್ಯಾಂಡಲ್‌ವುಡ್‌ನಲ್ಲಿ ಹೊಸಾ ಟ್ರೆಂಡ್ ಸೆಟ್ಮಾಡೋಕೆ ಸಜ್ಜಾಗಿದೆ ಕೈವ ಸಿನಿಮಾ(Kaiva movie). ಒಂದು ಆ ದಿನಗಳು ಒಂದು ಬೆಲ್ ಬಾಟಂ ಒಂದು ಹೆಡ್ಬುಷ್ ನಂತಹ ಸಿನಿಮಾದಂತೆ. ಆದರೆ ಇನ್ನೂ ಒಂದು ನೆಕ್ಸ್ಟ್ ಲೆವೆಲ್‌ಗೆ ಹೋಗೋ ಸೂಚನೆ ಕೊಟ್ಟಿದೆ ಕೈವ. 'ಶೋಕ್ದಾರ್' ಧನ್ವೀರ್ ಗೌಡ(Dhanveer) 'ಬಜಾರ್', 'ಬೈ ಟು ಲವ್' ನಂತರದಲ್ಲಿ 'ವಾಮನ' ಸಿನಿಮಾ ಕೈಗೆತ್ತಿಕೊಂಡಿದ್ದರು. 'ಬೈ ಟು ಲವ್' ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಅವರು ನಟಿಸಿರೋ ಮತ್ತು ಶುಕ್ರವಾರ ತೆರೆಕಾಣುತ್ತಿರೋ ಸಿನಿಮಾ ಕೈವ. ಆ ಸಿನಿಮಾವನ್ನು ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡಿದ್ದಾರೆ. 1983ರಲ್ಲಿ ತಿಗಳರ ಪೇಟೆಯಲ್ಲಿ(Tigalara pete) ನಡೆದ ಸತ್ಯ ಘಟನೆಯೇ ಸಿನಿಮಾ ಆಗಿದ್ದು ಕೈವಾ ಪಾತ್ರಧಾರಿ ಇನ್ನೂ ಬದುಕಿದ್ದಾರೆ ಅನ್ನೋದು ಅಷ್ಟೆ ಸತ್ಯ. ಸದ್ಯ ಸ್ಯಾಂಡಲ್‌ವುಡ್‌ನ ಸೆನ್ಸೇಷನ್ ಹುಟ್ಟುಹಾಕಿರೋ ಕೈವಾ ರಾಜ್ಯಾಧ್ಯಂತ ಡಿ.8ಕ್ಕೆ ತೆರೆಕಾಣುತ್ತಿದೆ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್ ಲಕ್ಕಿಗೆ ಡಿಸೆಂಬರ್ ತಿಂಗಳೇ ಲಕ್ಕಿ! ಡಿಸೆಂಬರ್ ಮೇಲೆ ಯಶ್‌ಗೆ ಯಾಕಿಷ್ಟು ನಂಬಿಕೆ..?