ಸ್ಯಾಂಡಲ್‌ವುಡ್‌ ಲಕ್ಕಿಗೆ ಡಿಸೆಂಬರ್ ತಿಂಗಳೇ ಲಕ್ಕಿ! ಡಿಸೆಂಬರ್ ಮೇಲೆ ಯಶ್‌ಗೆ ಯಾಕಿಷ್ಟು ನಂಬಿಕೆ..?

ಒಬ್ಬೊಬ್ರದ್ದು ಒಂದೊಂದು ನಂಬಿಕೆ ಇರುತ್ತೆ. ಯಾವ್ದೇ ಕೆಲಸಕ್ಕೆ ಕೈ ಹಾಕ್ಬೇಕಾದ್ರು ಆ ನಂಬಿಕೆ ಮೇಲೆ ಹೆಜ್ಜೆ ಇಡ್ತಾರೆ. ಅದೇ ತರ ನ್ಯಾಷನಲ್ ಸ್ಟಾರ್ ಯಶ್ ಕೂಡ ಅದೇ ನಂಬಿಕೆಯಿಂದಲೇ ಯಾವಾಗ್ಲೂ ಹೊಸ ಹೆಜ್ಜೆ ಇಡ್ತಾರೆ. ಅದೇ ಡಿಸೆಂಬರ್ ಮೇಲಿನ ನಂಬಿಕೆ.

First Published Dec 7, 2023, 9:07 AM IST | Last Updated Dec 7, 2023, 9:07 AM IST

ನ್ಯಾಷನಲ್ ಸ್ಟಾರ್ ಯಶ್ ಕನ್ನಡದಲ್ಲಿ ಲಕ್ಕಿ ಅನ್ನೋ ಸಿನಿಮಾ ಮಾಡಿದ್ರು. ರಮ್ಯಾ ಜೊತೆ ಡುಯೆಟ್ ಹಾಕಿದ್ದು ನಿವೆಲ್ಲಾ ನೋಡಿರ್ತೀರಾ. ಇದೇ ಲಕ್ಕಿಗೆ ಡಿಸೆಂಬರ್ ತಿಂಗಳು ಲಕ್ಕಿ ಅಂದ್ರೆ ನೀವು ನಂಬಲೇ ಬೇಕು. ಯಶ್(Rocking Star Yash) ಯಾವ್ ಕೆಲಸ ಮಾಡಿದ್ರು ಅದಕ್ಕೆ ಡಿಸೆಂಬರ್ ತಿಂಗಳಲ್ಲೇ ಮಹೂರ್ತ ಫಿಕ್ಸ್ ಮಾಡಿಕೊಳ್ತಾರೆ. ಈಗ ಯಶ್ ತನ್ನ 19ನೇ ಸಿನಿಮಾ(Yash 19 movie) ಅನೌನ್ಸ್ ಮಾಡ್ತಿರೋದು ಇದೇ ಲಕ್ಕಿ ಮಂತ್ ಡಿಸೆಂಬರ್ 8ರಂದು. ಯಶ್ ಫ್ಯಾನ್ಸ್‌ಗೆ ಡಿಸೆಂಬರ್ ಅಂದ್ರೆ ಒಂದ್ ರೀತಿ ಹಬ್ಬ. ಯಶ್ ಕೈ ಹಿಡಿದಿರೋದು ಇದೇ ಡಿಸೆಂಬರ್(December) ಲಕ್ಕಿ ಫ್ಯಾಕ್ಟರ್. ಸ್ಯಾಂಡಲ್‌ವುಡ್‌ನ ರಾಕಿಗೆ ಡಿಸೆಂಬರ್ ಲಕ್ಕಿ ಅಂತ ಸಾಕಷ್ಟು ಭಾರಿ ಪ್ರ್ಯೂ ಆಗಿದೆ. ಯಶ್ ಡಿಸೆಂಬರ್ ತಿಂಗಳಲ್ಲಿ ಕೊಟ್ಟ ಸರ್ಪ್ರೈಸ್‌ಗಳು ಸೂಪರ್ ಹಿಟ್ ಆಗಿವೆ. ರಾಕಿಂಗ್ ಸ್ಟಾರ್ ಯಶ್ ತನ್ನ ಕಟೌಟ್ ಬರೀ ಗಾಂಧಿನಗರದಲ್ಲಾ. ಇಡೀ ದೇಶಾದ್ಯಂತ ತಲೆ ಎತ್ತಿ ನಿಲ್ಲ ಬೇಕು ಅಂತ ಪಣ ತೊಟ್ಟಿದ್ರು. ಆ ಹಟದಲ್ಲೇ ಆದ ಸಿನಿಮಾ ಕೆಜಿಎಫ್(KGF) ಚಾಪ್ಟರ್ ಒನ್. ಇಂಟ್ರೆಸ್ಟಿಂಗ್ ಏನ್ ಗೊತ್ತಾ.? ಈ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿದ್ದು, ಯಶ್ ನಂಬೋ ಲಕ್ಕಿ ತಿಂಗಳು ಡಿಸೆಂಬರ್ 21ರಂದು. 80 ಕೋಟಿಯಲ್ಲಾದ ಕೆಜಿಎಫ್ ಪಾರ್ಟ್ ಒನ್ ಸಿನಿಮಾ ಬರೋಬ್ಬರಿ  250 ಕೋಟಿ ಗಳಿಸ್ತು. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು. ಇದಕ್ಕೆ ಕಾರಣ ಯಶ್ ಡಿಸೆಂಬರ್ ಲಕ್ಕಿ ಫ್ಯಾಕ್ಟರ್ ಅನ್ನೋದು ಅಭಿಮಾನಿಗಳ ವಾದ.

ಯಶ್ ವೃತ್ತಿ ಬದುಕಿನಲ್ಲಿ ಪ್ರಚಂಡ ದಾಖಲೆ ಬರೆದ ಮೊದಲ ಸಿನಿಮಾ ಮಿಸ್ಟರ್ & ಮಿಸೆಸ್ ರಾಮಾಚಾರಿ. ಈ ಸಿನಿಮಾ 2014ರ ಡಿಸೆಂಬರ್‌ 25ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಆ ಕಾಲಕ್ಕೆ 50 ಕೋಟಿ ಕಲೆಕ್ಷನ್ ಮಾಡಿತ್ತು. ನಂತ್ರ ಯಶ್ ನಟನೆಯ ಮೊದಲ ಬಿಗ್ ಬಜೆಟ್ ಸಿನಿಮಾ 'ಮಾಸ್ಟರ್ ಪೀಸ್‌' ಸಿನಿಮಾ ಡಿಸೆಂಬರ್‌ನಲ್ಲೇ ರಿಲೀಸ್ ಆಗಿತ್ತು. ಯಶ್ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ 'ರಾಕಿ' ತೆರೆಕಂಡಿದ್ದು ಡಿಸೆಂಬರ್ 25ರಂದು. ಅಷ್ಟೆ ಅಲ್ಲ ಕಳ್ಳರ ಸಂತೆ, ಮೊದಲ ಸಲ ಸಿನಿಮಾಗಳು ಕೂಡ ಡಿಸೆಂಬರ್ ತಿಂಗಳಿನಲ್ಲೇ ರಿಲೀಸ್ ಆಗಿವೆ. ಇದೆಲ್ಲಾ ಯಶ್ ಸಿನಿಮಾಗೂ ಡಿಸೆಂಬರ್ಗು ಇರೋ ಕನೆಕ್ಷನ್ ಆದ್ರೆ. ಯಶ್ ಪರ್ಷನಲ್ ಲೈಫ್ಗೂ ಡಿಸೆಂಬರ್ ಕನೆಕ್ಷನ್ ಇದೆ ಅಂದ್ರೆ ನೀವ್ ನಂಬಲೇ ಬೇಕು. ಕನ್ನಡದ ಲಕ್ಕಿ ಸ್ಟಾರ್ ಯಶ್ ವೈಯಕ್ತಿಕ ಜೀವನಕ್ಕೂ ಡಿಸೆಂಬರ್ ತಿಂಗಳಗೂ ನಂಟಿದೆ. ಯಶ್ ಡಿಸೆಂಬರ್ ತಿಂಗಳನ್ನ ಎಷ್ಟು ಬಿಲೀವ್ ಮಾಡ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ. ಯಶ್ ತನ್ನ ಜೀವನದ ಅಮೂಲ್ಯ ಘಟ್ಟ ಸಂಸಾರ ಅನ್ನೋ ಸಾಗರಕ್ಕೆ ಕಾಲಿಟ್ಟಿದ್ದು ಕೂಡ ಡಿಸೆಂಬರ್‌ನಲ್ಲಿ. 2016 ಡಿಸೆಂಬರ್ 9 ರಂದು ಯಶ್ ರಾಧಿಕಾ ಹಸೆಮಣೆ ಏರಿದ್ರು.

ಇದನ್ನೂ ವೀಕ್ಷಿಸಿ:  Today Horoscope: ಮಂಗಲ ಕಾರ್ಯಗಳಿಗೆ ಈ ದಿನ ಯೋಗ್ಯವಾಗಿದ್ದು, ಗುರುವಿನ ಆರಾಧನೆ ಮಾಡಿ..