ಸಾಹಿತಿ ಜೋಗಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮ: ಸಾಹಿತ್ಯ ಪ್ರೇಮ ತೋರಿದ ರಾಜ್ ಬಿ ಶೆಟ್ಟಿ, ಧನಂಜಯ್ !

ಸಾಹಿತಿ ಜೋಗಿಯವರು ಚಿಯರ್ಸ್, ಅಶ್ವತ್ಥಾಮನ್ ಪುಸ್ತಕ ಬರೆದಿದ್ದು, ಇವುಗಳ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಡಾಲಿ ಧನಂಜಯ್ ಮತ್ತು ನಿರ್ದೇಶಕ ರಾಜ್ ಬಿ ಶೆಟ್ಟಿ ಮುಖ್ಯ ಅಥಿತಿಗಳಾಗಿ ಬಂದಿದ್ದರು.
 

Share this Video
  • FB
  • Linkdin
  • Whatsapp

ಬೆಂಗಳೂರಿನ ಬಸವನ ಗುಡಿಯಲ್ಲಿ ಕಥೆಕೂಟ 7ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಪ್ರಭ ದಿನ ಪತ್ರಿಕೆಯ ಹಿರಿಯ ಸಂಪಾದಕರಾದ ಜೋಗಿ(Jogi) ಅವರ ಚಿಯರ್ಸ್, ಅಶ್ವತ್ಥಾಮನ್, ಕಥೆಕೂಟ ಸದಸ್ಯರ 'ಒಲವು ತುಂಬುವುದಿಲ್ಲ' ಅನ್ನೋ ಪುಸ್ತಕಗಳ ಬಿಡುಗಡೆ (book launch)ಮಾಡಲಾಗಿದೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್ (Dolly Dhananjay) ಮತ್ತು ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ(Raj B Shetty) ಮುಖ್ಯ ಅಥಿತಿಗಳಾಗಿ ಬಂದಿದ್ದು ವಿಶೇಷಾಗಿತ್ತು. ಸಾಹಿತ್ಯ ಕಾರ್ಯಕ್ರಮಗಳಿಂದ ಸಾಮಾನ್ಯವಾಗಿ ಸಿನಿಮಾ ನಟರು ದೂರ ಇರ್ತಾರೆ. ಆದ್ರೆ ಡಾಲಿ ಮತ್ತು ರಾಜ್ ಬಿ ಶೆಟ್ಟಿ ಅತಿಥಿಯಾಗಿ ಬಂದು ಪುಸ್ತಕ ರಿಲೀಸ್ ಮಾಡಿದ್ದು, ಸಾಹಿತ್ಯದ ಬಗ್ಗೆ ಅವರಿಗಿರೋ ಆಸಕ್ತಿಯನ್ನ ತೋರಿಸಿದ್ದಾರೆ. ಜೋಗಿಯವರ ಚಿಯರ್ಸ್, ಅಶ್ವತ್ಥಾಮನ್, ಹಾಗು ಕಥೆಕೂಟ ಸದಸ್ಯರ 'ಒಲವು ತುಂಬುವುದಿಲ್ಲ, ಹಾಗು ಜಗದೀಶ ಶರ್ಮ ಸಂಪ ಅವರ ದಶಕಂಠ ರಾವಣ ಕೃತಿಗಳು ಸಾವಣ್ಣ ಪ್ರಕಾಶನದಲ್ಲಿ ಸಿದ್ಧವಾಗಿದ್ದು. ಸಾಹಿತ್ಯ ಲೋಕಕ್ಕೆ ಈ ಪುಸ್ತಕಗಳು ಸೇರಿಕೊಂಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸೂಪರ್ ಸ್ಟಾರ್‌ಗಳ ವಿಲನ್‌ಗೆ ಮಿಡಿದಿದ್ದು ಮೆಗಾ ಸ್ಟಾರ್‌ ಮಾತ್ರ: ಪೊನ್ನಾಂಬಲಂ ಬದುಕಿದ್ದೆ ರೋಚಕ ಕಥೆ..!

Related Video