ಎರಡನೇ ವಾರವೂ ಭರ್ಜರಿ ಪ್ರದರ್ಶನದಲ್ಲಿ ಕೆರೆಬೇಟೆ !ಸಿನಿಮಾ ನೋಡಿ ಖುಷಿ ಪಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ..!

ಕೆರೆಬೇಟೆ ಸದ್ಯ ಸ್ಯಾಂಡಲ್‌ವುಡ್‌ ಬೆಳ್ಳಿತೆರೆ ಮೇಲೆ ಟ್ರೆಂಡಿಂಗ್‌ನಲ್ಲಿರೋ ಸಿನಿಮಾ. ಕಳೆದ ವಾರ ಬಿಡುಗಡೆ ಅಗಿದ್ದ ಅಪ್ಪಟ ಮಲೆನಾಡ ಕತೆಯ ಕೆರೆಬೇಟೆ ಸಿನಿಮಾ ನೋಡಿದ ಮಂದಿಯಿಂದ ಬೆಸ್ಟ್ ರಿವ್ಯೂ ಸಿಕ್ಕಿದೆ. ಇದೇ ಕಾರಣಕ್ಕೆ ಕೆರೆಬೇಟೆ ರಿಲೀಸ್ ಆದ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಾಗಿದೆ.
 

Share this Video
  • FB
  • Linkdin
  • Whatsapp

ಈ ಕೆರೆಬೇಟೆ ಸಿನಿಮಾ ಎರಡನೇ ವಾರವೂ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಕೆರೆಬೇಟೆ(Kerebete Movie) ಬಗ್ಗೆ ಜನ ಮಾತಾಡಿಕೊಂಡಿದ್ದನ್ನ ಕೇಳಿ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಕೂಡ ಥಿಯೇಟರ್ಗೆ ಬಂದು ಸಿನಿಮಾ ನೋಡಿದ್ದಾರೆ. 'ಮಾರ್ಟಿನ್' ಸಿನಿಮಾದ ನಿರ್ದೇಶಕ ಎ ಪಿ ಅರ್ಜುನ್ ಹಾಗೂ ಧ್ರುವ ಸರ್ಜಾ ಇಬ್ಬರೂ ಜೊತೆಯಾಗಿ ಸಿನಿಮಾವನ್ನು ನೋಡಿದ್ದಾರೆ. ಬಳಿಕ ಮಾಧ್ಯಮಗಳಿಗೆ 'ಕೆರೆಬೇಟೆ' ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಕೆರೆಬೇಟೆ ಅದ್ಭುತ ಕಂಟೆಂಟ್ ಸಿನಿಮಾ. ಸಿನಿಮಾದ ಕತೆ ಸ್ಕ್ರೀನ್ ಪ್ಲೇ ಹಾಡುಗಳು ನಟನೆ ಮಜವಾಗಿದೆ. ಈ ಸಿನಿಮಾವನ್ನ ಎಲ್ಲರೂ ಚಿತ್ರಮಂದಿರಲ್ಲೇ ನೋಡಿ ಎಂದಿದ್ದಾರೆ. ಕೆರೆಬೇಟೆ ಸಿನಿಮಾ ಧ್ರುವ ಮನಸ್ಸು ಮಾತ್ರ ಗೆದ್ದಿಲ್ಲ. ನಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ವಿಕ್ರಂ ರವಿಚಂದ್ರನ್, ನಿರ್ದೇಶಕ ಸಿಂಪಲ್ ಸುನಿ ಕೂಡ ಈ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಗೌರಿಶಂಕರ್ ನಾಯಕನಾಗಿ ನಟಿಸಿರೋ 'ಕೆರೆಬೇಟೆ' ಸಿನಿಮಾ ಅಪ್ಪಟ ದೇಸಿ ಸಿನಿಮಾ. ಮಲೆನಾಡಿನ ಭಾಗದ ಸುಂದರ ತಾಣಗಳ ಜೊತೆ ಮನಕಲುಕುವ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ರಾಜ್‌ಗುರು ನಿರ್ದೇಶನದ ಕೆರೆಬೇಟೆಯಲ್ಲಿ ಗೌರಿಶಂಕರ್ಗೆ ನಾಯಕಿಯಾಗಿ ಬಿಂದು ನಟಿಸಿದ್ದಾರೆ. ಸಧ್ಯ ಪ್ರೇಕ್ಷಕರಿಂದ ಒಳ್ಳೆ ಪ್ರಶಂಸೆ ಪಡೆಯುತ್ತಿರೋ ಕೆರೆಬೇಟೆ ಸಿನಿಮಾವನ್ನ ಈಗ ಕನ್ನಡ ಚಿತ್ರರಂಗದ ತಾರೆಯರೂ ನೋಡಿ ಖುಷಿ ಪಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಮೂಲ ಬೇರು ಮರೆತಿಲ್ಲ ಅಣ್ಣಾವ್ರ ಮೊಮ್ಮಗ..!ಗಾಜನೂರಿನ ಅಣ್ಣಾವ್ರ ಮನೆಯಲ್ಲಿ ಯುವ ಸಂದರ್ಶನ..!

Related Video