ಮೂಲ ಬೇರು ಮರೆತಿಲ್ಲ ಅಣ್ಣಾವ್ರ ಮೊಮ್ಮಗ..!ಗಾಜನೂರಿನ ಅಣ್ಣಾವ್ರ ಮನೆಯಲ್ಲಿ ಯುವ ಸಂದರ್ಶನ..!

ನಮ್ಮೂರು ನಮ್ ಹಳ್ಳಿ ನಮ್ ಜನಾನ ಯಾವತ್ತು ಮರೆಯೋಕೆ ಆಗಲ್ಲ. ಅದರಲ್ಲೂ ನಾವು ಬೆಳೆದು ಬಂದ ಬೇರು ಎಂದೆಂದೂ ಖುಷಿ ಕೊಡೋ ವಿಷಯ. ಈಗ ಸ್ಯಾಂಡಲ್‌ವುಡ್‌ ಅಣ್ಣಾವ್ರ ಮೊಮ್ಮಗ ಯುವ ಕೂಡ ತನ್ನ ಮೂಲ ಬೇರು ಮರೆತಿಲ್ಲ. ತಾತ ರಾಜ್‌ಕುಮಾರ್ ಹುಟ್ಟಿದ ಮನೆಗೆ ಯುವ ಹೋಗಿದ್ದಾರೆ.
 

Share this Video
  • FB
  • Linkdin
  • Whatsapp

ಅಣ್ಣಾವ್ರ ಮೊಮ್ಮಗ ಯುವ ರಾಜ್‌ಕುಮಾರ್(Yuvaraj kumar) ನಟನೆಯ ಯುವ ಸಿನಿಮಾ ಮಾರ್ಚ್ 29ಕ್ಕೆ ಬಿಡುಗಡೆ ಆಗುತ್ತಿದೆ. ಹೀಗಾಗಿ ತನ್ನ ಮೂಲ ಬೇರನ್ನ ಮರೆಯದ ಯುವ ಅಣ್ಣಾವ್ರು ಹುಟ್ಟಿ ಬೆಳೆದ ಚಾಮರಾಜನಗರದಲ್ಲಿರೋ(Chamarajanagar) ಗಾಜನೂರು ಮನೆಗೆ ಭೇಟಿ ಕೊಟ್ಟಿದ್ದಾರೆ. ಅಷ್ಟೆ ಅಲ್ಲ ಯುವ ಸಿನಿಮಾ(Yuva Movie) ನಿರ್ದೇಶಕ ಅಲ್ಲೇ ಅದೇ ಮನೆಯಲ್ಲಿ ಅಣ್ಣಾವ್ರು ಓಡಾಡಿದ ಜಾಗದಲ್ಲಿ ಯುವನ ಸಂದರ್ಶನ ಮಾಡಿದ್ದಾರೆ. ಯುವ ರಾಜ್‌ಕುಮಾರ್ ದೊಡ್ಮನೆಯ ನಾಲ್ಕನೇ ಜನರೇಷನ್. ಅಣ್ಣಾವ್ರ ತಂದೆ ನಟಕಗಳಲ್ಲಿ ಬಣ್ಣ ಹಚ್ಚಿದ್ದವರು. ಆ ನಂತರ ಅಣ್ಣಾವ್ರು ಬಳಿಕ ಅಣ್ಣಾವ್ರ ಮಕ್ಕಳು ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದಾರೆ. ಈಗ ಅಣ್ಣಾವ್ರ ಮೊಮ್ಮಕ್ಕಳ ಕಾಲ. ಈ ನಾಲ್ಕು ಜನರೇಷನ್ ಬಗ್ಗೆ ಮಾತನಾಡಿರೋ ಯುವ ತನ್ನ ತಂದೆ ಜೊತೆಗಿನ ಪ್ರೀತಿ ಬಾಂಧವ್ಯದ ಬಗ್ಗೆಯೂ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ: 'ಯುವ' ಅಸಲಿ ಆಟ ಈಗ ಆರಂಭ..! ದೊಡ್ಮನೆ ಫ್ಯಾನ್ಸ್‌ಗೆ ಕಿಕ್ಕು ಹೆಚ್ಚಿಸಿ ಟ್ರೈಲರ್!

Related Video