Martin: ಬೆಳ್ಳಿತೆರೆ ಅಖಾಡಕ್ಕೆ ಬರಲು ರೆಡಿಯಾದ ಆ್ಯಕ್ಷನ್ ಪ್ರಿನ್ಸ್..!2 ವರ್ಷದ ಬಳಿಕ ಮಾರ್ಟಿನ್ ಶೂಟಿಂಗ್ ಕಂಪ್ಲೀಟ್ ..!

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರೋ ಟೈಂ ಹತ್ತಿರವಾಗ್ತಿದೆ. ಬಹದ್ದೂರ್ ಹುಡುಗ ಧ್ರುವ ಬೆಳ್ಳಿತೆರೆ ಅಖಾಡಕ್ಕೆ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದಾರೆ. ಧ್ರುವ ಸರ್ಜಾ ನಟಿಸುತ್ತಿರೋ ಮಾರ್ಟಿನ್ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.
 

Share this Video
  • FB
  • Linkdin
  • Whatsapp

ಬರೋಬ್ಬರಿ ಎರಡೂವರೆ ವರ್ಷಗಳಿಂದ ಶೂಟಿಂಗ್ ಹಂತದಲ್ಲೇ ಇದ್ದ ಮಸ್ತ್ ಮಾಸ್ ಸಿನಿಮಾ ಮಾರ್ಟಿನ್ ಗೆ(Martin Movie) ಚಿತ್ರೀಕರಣಕ್ಕೆ ಕುಂಬಳ ಕಾಯಿ ಒಡೆಯಲಾಗಿದೆ. ಮಾರ್ಟಿನ್ ಸಿನಿಮಾ ಶೂಟಿಂಗ್(Shooting) ಯಾವಾಗ ಮುಗಿಸುತ್ತೀರಾ ಅನ್ನೋ ಬೇಡಿಕೆ ಧ್ರುವ ಅಭಿಮಾನಿಗಳಲ್ಲಿತ್ತು. ಯಾಕಂದ್ರೆ ಆಪ್ಟರ್ ಎ ಪೊಗರು ಸಿನಿಮಾ ನಂತರ ಧ್ರುವ ಸರ್ಜಾರನ್ನ(Dhruva Sarja) ಬೆಳ್ಳಿತೆರೆ ಮೇಲೆ ನೋಡಲು ಅಗಿಲ್ಲ. ಇದಕ್ಕಾಗಿ ಬರೋಬ್ಬರಿ ಮೂರು ವರ್ಷದಿಂದ ದ್ರುವ ಫ್ಯಾನ್ಸ್ ವೇಟಿಂಗ್‌ನಲ್ಲಿದ್ದಾರೆ. ಬಟ್ ಈಗ ಮಾರ್ಟಿನ್ ಶೂಟಿಂಗ್ ಪೋಸ್ಟ್ ಮಾರ್ಟಮ್ ಆಗಿದೆ. ಇನ್ನೇನಿದ್ರು ಸಿನಿಮಾವನ್ನ ಧ್ರುವ ಫ್ಯಾನ್ಸ್ ಮುಂದೆ ತಂದಿಡೋದೊಂದೆ ಬಾಕಿ ಇದೆ. ಬಾದಾಮಿಯಲ್ಲಿ(Badami) ಮಾರ್ಟಿನ್ ಚಿತ್ರದ ಟಾಕಿ ಫೋಷನ್ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಶೂಟಿಂಗ್ ಮುಗಿದಿದ್ದಕ್ಕೆ ಧ್ರುವ ಸರ್ಜಾರ ಸಣ್ಣದೊಂದು ವಿಡಿಯೋ ತುಣುಕನ್ನ ಚಿತ್ರತಂಡ ರಿವೀಲ್ ಮಾಡಿದೆ.

ಧ್ರುವ ಸರ್ಜಾ ಆಂಜನೇಯನ ಭಕ್ತ. ಎಲ್ಲೇ ಹೋದ್ರು ಜೈ ಅಂಜನೇಯ ಅಂತ ಜೈಕಾರ ಹಾಕೋ ಅದ್ದೂರಿ ಹುಡುಗ ಬಾದಮಿಯಲ್ಲಿ ಮಾರ್ಟಿನ್ ಶೂಟಿಂಗ್ ಮುಗಿಯುತ್ತಿದ್ದಂತೆ ಅಲ್ಲಿದ್ದ ಆಂಜನೇಯನ ತದ್ರೂಪಿ ಮಂಗಗಳಿಗೆ ಒಂದು ದೊಡ್ಡ ಕೊನೆ ಬಾಳೆಹಣ್ಣುಗಳನ್ನ ಹಂಚಿದ್ದಾರೆ. ಧ್ರುವ ಬಾಳೇಹಣ್ಣು ಕೊಡುತ್ತಿದ್ದಂತೆ ಅಕ್ಕ ಪಕ್ಕದಲ್ಲಿರೋ ಮಂಗಗಳೆಲ್ಲಾ ಧ್ರುವ ಸರ್ಜಾರನ್ನ ಸುತ್ತಿಕೊಂಡಿವೆ. ಈ ವೀಡಿಯೋ ಈಗ ರಿವೀಲ್ ಆಗಿದೆ.

ಇದನ್ನೂ ವೀಕ್ಷಿಸಿ: Karataka Damanaka movie: ಕನ್ನಡ ಸಿನಿ ಪ್ರೇಕ್ಷಕರಿಗಾಗಿ ಸಿದ್ಧವಾಗಿದೆ ಪ್ರಭುದೇವಾ-ನಿಶ್ವಿಕಾ ಡ್ಯಾನ್ಸ್‌ ಹಬ್ಬ..!

Related Video