Karataka Damanaka movie: ಕನ್ನಡ ಸಿನಿ ಪ್ರೇಕ್ಷಕರಿಗಾಗಿ ಸಿದ್ಧವಾಗಿದೆ ಪ್ರಭುದೇವಾ-ನಿಶ್ವಿಕಾ ಡ್ಯಾನ್ಸ್‌ ಹಬ್ಬ..!

ಪ್ರಭುದೇವ ಇಂಡಿಯನ್ ಸಿನಿಮಾ ಜಗತ್ತಿನ ಮೈಕಲ್ ಜಾಕ್ಸನ್ ಅಂತಲೇ ಫೇಮಸ್. ಇವ್ರು ಕ್ಯಾಮೆರಾ ಮುಂದೆ ಡಾನ್ಸ್ ಮಾಡೋಕೆ ನಿಂತ್ರೆ ಮುಗಿದೋಯ್ತು ಅಕ್ಕ ಪಕ್ಕ ಇದ್ದವರೆಲ್ಲಾ ಶಿಳ್ಳೆ ಚಪ್ಪಾಳೆ ಹೊಡಿಬೇಕು ಹಂಗಿರುತ್ತೆ. ಇದೀಗ ಪ್ರಭುದೇವ ಡಾನ್ಸ್ ಅನ್ನ ನೋಡೋ ಚಾನ್ಸ್ ಕನ್ನಡ ಸಿನಿಮಾ ಪ್ರೇಕ್ಷಕರದ್ದಾಗುತ್ತಿದೆ. 

Share this Video
  • FB
  • Linkdin
  • Whatsapp

ಕರಟಕ ಧಮನಕ ಸಿನಿಮಾದ ಸಾಂಗ್. ಕರಟಕ ಧಮನಕ ಅಂದ್ರೆ ಗೊತ್ತಾಯ್ತು ಅಲ್ವಾ ಇದು ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಹಾಗು ಡಾನ್ಸ್ ಕಿಂಗ್ ಪ್ರಭುದೇವ ಕಾಂಬಿನೇಷನ್ ಸಿನಿಮಾ. ಈ ಸಿನಿಮಾದಲ್ಲಿ ಪ್ರಭುದೇವಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಹಾಡು ಇದು. ಉತ್ತರ ಕರ್ನಾಟಕದ ಜವಾರಿ ಭಾಷೆಯ ಹಾಡಿನಲ್ಲಿ ನಿಶ್ವಿಕಾ ಪ್ರಭುದೇವ ಮಸ್ತ್ ಆಗಿ ಸೊಂಟ ಬಳುಕಿಸಿದ್ದಾರೆ. 
ಕರಟಕ ಧಮನಕ ಎರಡು ಕುತಂತ್ರ ನರಿಗಳನ್ನ ಕಥೆಯನ್ನ ಇನ್ಸ್ ಪೈರ್ ಆಗಿ ಮಾಡಿರೋ ಸಿನಿಮಾ. ಇಲ್ಲಿ ಕರಟಕ ಪ್ರಭುದೇವ. ಧಮನಕ ನಮ್ ಶಿವಣ್ಣ. ಈ ವಿಭಿನ್ನ ಕಥೆ ಹೆಣೆದಿರೋದು ಡೈರೆಕ್ಟರ್ ಯೋಗರಾಜ್ ಭಟ್. ಅವ್ರ ಸಿನಿಮಾ ಅಂದಮೇಲೆ ಅರದ್ದೇ ಸ್ಟೈಲ್ ನ ಒಂದ್ ಸಾಂಗ್ ಇಲ್ಲದೆ ಇರುತ್ತಾ.? ಯೆಸ್ ಜವಾರಿ ಭಾಷೆಯ ಈ ಹಾಡು ಬರೆದಿರೋದು ನಿರ್ದೇಶಕ ಯೋಗರಾಜ್ ಭಟ್. ಹಾಡಿರೋದು ಉತ್ತರ ಕರ್ನಾಟಕ ಪ್ರತಿಭೆ ಮಲ್ಲು ನಿಪ್ಪಾಣ್ ಮತ್ತು ಶ್ರುತಿ ಪ್ರಹ್ಲಾದ್ ಟ್ಯೂನ್ ಹಾಕಿದ್ದು ವಿ ಹರಿಕೃಷ್ಣ. ಈ ಹಿಂದೆ ಕರಟಕ ದಮಕನ ಸಿನಿಮಾದ ಶಿವಣ್ಣ ಪ್ರಿಯಾ ಆನಂದ್ ಕಾಂಬಿನೇಷನ್ ಸಾಂಗ್ ಬಂದಿತ್ತು. ಈ ಹಾಡಿನಲ್ಲಿ ಶಿವಣ್ಣ ಪ್ರಿಯಾ ಆನಂದ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ರು. ಈ ಲವ್ ಸಾಂಗ್ ಕೂಡ ಯೋಗರಾಜ್ ಪದ ಪುಂಜದಲ್ಲೇ ಮೂಡಿ ಬಂದಿದೆ.

ಇದನ್ನೂ ವೀಕ್ಷಿಸಿ: ಮಲೆನಾಡ ಕಥೆ 'ಕೆರೆಬೇಟೆ'ಟೈಟಲ್ ಟ್ರ್ಯಾಕ್ ರಿಲೀಸ್..! ಚಿತ್ರತಂಡಕ್ಕೆ ಸಾಥ್ ಕೊಟ್ಟ ಆರಗ ಜ್ಞಾನೇಂದ್ರ, ಬಿ.ವೈ. ರಾಘವೇಂದ್ರ..!

Related Video