ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಜೈಲು ಕಹಾನಿ! ಜೈಲಿನಲ್ಲಿ ಪ್ರಜ್ವಲ್-ದರ್ಶನ್ ದೋಸ್ತಿ ಮಾತುಕತೆ!

ನಟ ದರ್ಶನ್‌ ಅನಾರೋಗ್ಯದ ನೆಪವೊಡ್ಡಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದು, ನನಗೆ ಜೈಲೂಟ ಸೇರ್ತಿಲ್ಲ. ಹಾಸಿಗೆ ಬೇಕು, ಪುಸ್ತಕ ಬೇಕು ಅಂತೆಲ್ಲ ಬೇಡಿಕೆ ಇಟ್ಟು ದರ್ಶನ್ ಹೈಕೋರ್ಟ್‌ಗೆ ಹೋಗಿದ್ದಾರೆ. ನಿನ್ನೆ ವಿಚಾರಣೆ ನಡೆಸಿದ ಹೈಕೋರ್ಟ್ ದರ್ಶನ್‌ಗೆ ಶಾಕ್ ಕೊಟ್ಟಿದೆ.

First Published Jul 20, 2024, 11:00 AM IST | Last Updated Jul 20, 2024, 11:01 AM IST

ಸದ್ಯಕ್ಕೆ ದರ್ಶನ್‌ಗೆ ಜೈಲೂಟವೇ ಫಿಕ್ಸ್ ಆಗಿದೆ. ಹೈಕೋರ್ಟ್ ನ್ಯಾ.ಕೃಷ್ಣ ಕುಮಾರ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಿದೆ. ವಾದ ಪ್ರತಿವಾದ ಆಲಿಸಿದ ಜಡ್ಜ್, ಜುಲೈ 26ರೊಳಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆ ಮುಗಿಸಬೇಕು ಎಂದು ಜುಲೈ 29ಕ್ಕೆ ವಿಚಾರಣೆ ಮುಂದೂಡಿದೆ. ನಟ ದರ್ಶನ್ (Darshan)ಜೈಲು ಡೈರಿ ಕಹಾನಿ ಒಂದೊಂದೇ ಬಯಲಾಗುತ್ತಿವೆ. ಅತ್ಯಾಚಾರ ಕೇಸ್‌ನಲ್ಲಿ ದರ್ಶನ್‌ಗೂ ಮುನ್ನವೇ ಜೈಲು ಸೇರಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಹಾಗೂ ದರ್ಶನ್, ಜೈಲಿನಲ್ಲಿ ಭೇಟಿಯಾಗಿದ್ರಂತೆ. ಮಧ್ಯಾಹ್ನ ಊಟದ ವೇಳೆ ದರ್ಶನ್, ಜೈಲು ಕೊಠಡಿಗೆ ತೆರಳಿ ಪ್ರಜ್ವಲ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರಂತೆ. ಜತೆಗೆ ಒಟ್ಟಿಗೆ ಇಬ್ಬರು ಊಟ ಮಾಡುತ್ತಾ, ತಮ್ಮ ಕೇಸ್‌ಗಳ ಬಗ್ಗೆ ಚರ್ಚೆ ನಡೆಸಿದ್ದಾರಂತೆ. ಆದ್ರೆ, ದರ್ಶನ್ ಹಾಗೂ ಪ್ರಜ್ವಲ್ ಒಟ್ಟಿಗೆ ಇರೋದನ್ನ ನೋಡಿದ ಜೈಲು ಸಿಬ್ಬಂದಿ, ಪರಸ್ಪರ ಭೇಟಿಯಾಗದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ಲ್ಲಿ(Renukaswamy murder case) ಜೈಲು ಸೇರಿರುವ ದರ್ಶನ್ ಗ್ಯಾಂಗ್‌ನಲ್ಲೇ ಭಿನ್ನಾಭಿಪ್ರಾಯ ಮೂಡಿದೆ. ನಿನ್ನನ್ನ ನಂಬಿ ಮೋಸ ಹೋದೆ ಎಂದು ಪ್ರದೂಷ್ (Pradush) ವಿರುದ್ಧ ಕೂಗಾಡಿ ದರ್ಶನ್ ರಂಪಾಟ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಿಭಾಯಿಸೋದಾಗಿ ಭರವಸೆ ಕೊಟ್ಟಿದ್ದೆ. ನನಗೆ ಪ್ರಭಾವಿಗಳ ಪರಿಚಯವಿದೆ ಎಂದಿದ್ದೆ. ಎಲ್ಲವನ್ನೂ ನಿಭಾಯಿಸುತ್ತೇನೆ ಎಂದು ಈ ಸ್ಥಿತಿಗೆ ಸಿಲುಕಿಸಿದೆ. 

ಇದನ್ನೂ ವೀಕ್ಷಿಸಿ:  ಗೆಳೆಯರ ಭೇಟಿಗೆ ಬ್ರೇಕ್ ಹಾಕಿದ್ರಾ ಜೈಲಾಧಿಕಾರಿಗಳು..? ದರ್ಶನ್‌ಗೆ ಪ್ರದೂಷ್ ಹೇಳಿದ್ದೇನು..? ಮಾಡಿದ್ದೇನು..?