Asianet Suvarna News Asianet Suvarna News

ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: 'ಯಜಮಾನ'ನ ನೂರೊಂದು ನೆನಪು ಅಮರ

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಆಗಿದ್ದು, ಯಜಮಾನರ ಅಭಿಮಾನಿಗಳು ಸಂತಸಗೊಂಡಿದ್ದಾರೆ

ಮೈಸೂರಿನ ಹೆಚ್.ಡಿ ಕೋಟೆಯ ಹಾಲಾಳು ಗ್ರಾಮದಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಆಗಿದೆ. ಈ ಭವ್ಯವಾದ ಸ್ಮಾರಕವನ್ನು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದಾರೆ. ಈ ಸ್ಮಾರಕಕ್ಕೆ ಸರ್ಕಾರ ಒಟ್ಟು ಐದು ಎಕರೆ ಜಾಗ ಕೊಟ್ಟಿದೆ. ಅದರಲ್ಲಿ ಈಗ ಮೂರು ಎಕರೆ ಪ್ರದೇಶದಲ್ಲಿ ಸ್ಮಾರಕ ತಲೆ ಎತ್ತಿದೆ. 11 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಆಗಿದೆ. ಈ ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ 700 ಫೊಟೋಗಳ ಗ್ಯಾಲರಿ, ವಿಶಾಲವಾದ ಉಧ್ಯಾನವನ, ನೀರಿನ ಕಾರಂಜಿ, 250 ಜನ ಕೂರುವಂತಹ ಸಭಾಂಗಣ, ಹಾಗೂ ನಟನಾ ಶಾಲೆ‌ ಇದೆ. ಎರಡು ಎಕರೆಯಲ್ಲಿ ನೆಲಮಹಣಿ, ತಳಮಹಡಿ ಸೇರಿ ಒಟ್ಟು 27 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ವೃತ್ತಾಕಾರದಲ್ಲಿ ಸ್ಮಾರಕ ತಲೆ ಎತ್ತಿದೆ. ಸ್ಮಾರಕ ಎರಡು ಗೋಡೆಗಳಲ್ಲಿ ವಿಷ್ಣುವರ್ಧನ್ ಅವರ ರಾಜ್ ಕುಮಾರ್, ಶಿವಾಜಿ ಗಣೇಶನ್, ಎಂಜಿಆರ್, ರಜನಿಕಾಂತ್, ಅಂಬರೀಶ್, ಅನಂತ್ ನಾಗ್ ಅವರೊಂದಿಗಿನ ಅಪರೂಪದ ಚಿತ್ರಲೋಕವಿದೆ. ಮತ್ತೊಂದು ವಿಶೇಷ ಅಂದ್ರೆ ಸ್ಮಾರಕದ ಒಳಾಂಗಣದಲ್ಲಿ ಒಂದು ಕೊಳವನ್ನು ನಿರ್ಮಾಣ ಮಾಡಿದ್ದು, ಆ ಕೊಳದ ಮಧ್ಯೆ ವಿಷ್ಣು ತೊಡುತ್ತಿದ್ದ ಬೆಳ್ಳಿ ಕಡ್ಗದ ದೊಡ್ಡ ಕಲಾಕೃತಿ ಇದೆ. ಇದರ ಜೊತೆಗೆ ಕೃಷ್ಣಶಿಲೆಯಲ್ಲಿ ಕೆತ್ತಿರೋ ವಿಷ್ಣುವರ್ಧನ್ ಅವರ 6.5 ಅಡಿ ಎತ್ತರದ ಪ್ರತಿಮೆ ಇಟ್ಟಿದ್ದಾರೆ. ಸ್ಮಾರಕದ ಗೋಡೆಗಳ ಮೇಲೆ ವಿಷ್ಣುದಾದನ ಸಿನಿಮಾ ಡೈಲಾಗ್'ಗಳ ಬರವಣಿಗೆ ಇವೆ. ಹೀಗಾಗಿ ಈ ಸ್ಮಾರಕ ಅಭಿಮಾನಿಗಳಲ್ಲಿ ನೆನಪುಗಳ ಅಲೆ ಎಬ್ಬಿಸಲಿದೆ.

Video Top Stories