ಸಿಂಹಪ್ರಿಯಾ ಆರತಕ್ಷತೆ ಜೋರು: ಮೆರುಗು ತಂದ 'ಚಂದನವನ'ದ ತಾರೆಯರು

ಬೆಂಗಳೂರಿನಲ್ಲಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರತಕ್ಷತೆ ಅದ್ದೂರಿಯಾಗಿ ನಡೆದಿದೆ. ಅನೇಕ ಗಣ್ಯರು ಆಗಮಿಸಿದ್ದರು.
 

Share this Video
  • FB
  • Linkdin
  • Whatsapp

ಮೈಸೂರಿನ ಗಣಪತಿ ಸಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆ ನಡೆದಿದ್ದು, ಬೆಂಗಳೂರಿನ ಹೊರವಲಯದ ರೆಸಾರ್ಟ್ ಒಂದರಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಸಿಂಹಪ್ರಿಯಾ ಆರತಕ್ಷತೆಯಲ್ಲಿ ಸ್ಯಾಂಡಲ್ ವುಡ್ ತಾರೆಯರ ಕಲರವ ಜೋರಾಗಿತ್ತು. ಕನ್ನಡದ ಬಿಗ್ ಸ್ಟಾರ್ಸ್ ಹಾಗೂ ಹಿರಿಯ ಕಲಾವಿದರು ಈ ಲವ್ ಬರ್ಡ್ಸ್ ಆರತಕ್ಷತೆಗೆ ಬಂದು ಆಶೀರ್ವದಿಸಿದ್ದಾರೆ. ರಿಷಬ್ ಶೆಟ್ಟಿ, ಗಣೇಶ್, ಅಮೂಲ್ಯ ದಂಪತಿ, ಮಾಲಾಶ್ರೀ, ಶ್ರುತಿ, ಶರಣ್, ಉಪೇಂದ್ರ ದಂಪತಿ, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಮಾಳವೀಕ ಅವಿನಾಶ್, ನೆನಪಿರಲಿ ಪ್ರೇಮ್ ದಂಪತಿ, ಸಚಿವ ಅಶ್ವತ್ಥ್ ನಾರಾಯಣ್, ಡಾ. ಕೆ ಸುಧಾಕರ್ ಸೇರಿ ಅನೇಕ ಗಣ್ಯರು ಆಗಮಿಸಿದ್ದರು.

Related Video