Asianet Suvarna News Asianet Suvarna News

Chikkanna: 'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಸಿಕ್ತು ವಾರ್ಮ್ ವೆಲ್‌ಕಮ್..! ಸಿನಿಮಾ ನೋಡಿ ಖುಷಿ ಪಟ್ಟ ಸಿನಿ ಪ್ರೇಕ್ಷಕ..!

ನಟ ಚಿಕ್ಕಣ್ಣ ಕಂಡ ಕನಸು ಈಡೇರಿದೆ. ಇಷ್ಟು ದಿನ ಹೀರೋಗಳ ಜೊತೆ ಸಪೋರ್ಟಿಂಗ್ ರೋಲ್ ಮಾಡಿಕೊಂಡು ಬರುತ್ತಿದ್ದ ಚಿಕ್ಕಣ್ಣ ಈಗ ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗಿ ಲಾಂಚ್ ಆದ್ದಾರೆ.

ಇನ್ಮುಂದೆ ಚಿತ್ರರಂಗದ ಚಿಕ್ಕಣ್ಣನ ಹೊಸ ಎರಾ ಇರುತ್ತೆ. ಯಾಕಂದ್ರೆ ಚಿಕ್ಕಣ್ಣ(Chikkanna) ನಾಯಕನಾಗಿ ನಟಿಸಿರೋ ಉಪಾಧ್ಯಕ್ಷ ಸಿನಿಮಾ(Upadhyaksha Movie) ಸಿನಿ ಪ್ರೇಕ್ಷಕರಿಗೆ ಮಸ್ತ್ ಮನೊರಂಜನೆಯ ಹಬ್ಬದೂಟ ಹಾಕಿದೆ. ಈ ಸಿನಿಮಾ ನೋಡಿ ಸಿನಿ ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ. ಅನೀಲ್ ಕುಮಾರ್ ನಿರ್ದೇಶನದ ಹಳ್ಳಿ ಸೊಗಡಿನ ಅಪ್ಪಟ ಕಾಮಿಡಿ ಸಿನಿಮಾ ಉಪಾಧ್ಯಕ್ಷ. ನಟ ಚಿಕ್ಕಣ್ಣನಗೆ ಮಲೈಕಾ(Malaika) ನಾಯಕಿಯಾಗಿ ನಟಿಸಿದ್ದಾರೆ. ಶರಣ್ ಗೆಸ್ಟ್ ರೋಲ್ ಮಾಡಿದ್ದಾರೆ. ಈ ಸಿನಿಮಾ ಶರಣ್ ಹಾಗು ಚಿಕ್ಕಣ್ಣ ನಟನೆಯ ಅಧ್ಯಕ್ಷ ಸಿನಿಮಾದ ಸೀಕ್ಚೆಲ್. ಹೀಗಾಗಿ ಉಪಾಧ್ಯಕ್ಷ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತು. ಹಳ್ಳಿ ಕಟ್ಟೆಯಲ್ಲಿ ಉಪಾಧ್ಯಕ್ಷ ನ ಕಾಮಿಡಿ ಕಲಾಮ್ ನೋಡಿ ಸಿನಿ ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ. ಸಾಧು ಕೋಕಿಲಾ, ಕರಿ ಸುಬ್ಬು, ಧರ್ಮಣ್ಣ ಕಡೂರ್, ವೀಣಾ ಸುಂದರ್, ತಬಲಾ ನಾಣಿಯಂತಹ ದೊಡ್ಡ ಕಲಾವಿಧರ ದಂಡೇ ಈ ಸಿನಿಮಾದಲ್ಲಿದೆ ಸ್ಮಿತಾ ಉಪಾಪತಿ ನಿರ್ಮಾಣ ಮಾಡಿರೋ ಈ ಸಿನಿಮಾ ಗೆಲ್ಲುವ ಎಲ್ಲಾ ಸಾಧ್ಯತೆಯೂ ಇದೆ. 

ಇದನ್ನೂ ವೀಕ್ಷಿಸಿ:  ವಿಜಯಲಕ್ಷ್ಮೀ ದರ್ಶನ್‌ಗೆ ಪವಿತ್ರಾ ಗೌಡ ವಾರ್ನಿಂಗ್! “ಲವ್, ಕೇರ್ ಜೊತೆ ದರ್ಶನ್ ಜೊತೆಗಿದ್ದೇನೆ” ಎಂದ ಪವಿತ್ರಾ..!

Video Top Stories