ವಿಜಯಲಕ್ಷ್ಮೀ ದರ್ಶನ್‌ಗೆ ಪವಿತ್ರಾ ಗೌಡ ವಾರ್ನಿಂಗ್! “ಲವ್, ಕೇರ್ ಜೊತೆ ದರ್ಶನ್ ಜೊತೆಗಿದ್ದೇನೆ” ಎಂದ ಪವಿತ್ರಾ..!

ಒಂದು ಕಡೆ ದರ್ಶನ್ ನಟನೆ ಕಾಟೇರ ಹಿಟ್ಟಾಗಿದೆ. ಮತ್ತೊಂದು ದರ್ಶನ್ ಹುಟ್ಟುಹಬ್ಬ ಬರ್ತಿದೆ ಅಂತ ಫ್ಯಾನ್ಸ್ ಖುಷಿಯಾಗಿದ್ದಾರೆ. ಆದ್ರೆ ಕಾಟೇರ ದರ್ಶನ್ ಅವರಿಗೆ ಮನಶಾಂತಿ ದೂರವಾದಂತಿದೆ. ಪವಿತ್ರಾ ಗೌಡ ವರ್ಸಸ್ ವಿಜಯಲಕ್ಷ್ಮೀ ದೊಡ್ಡ ವಾರ್ ನಡೀತಿದೆ.

First Published Jan 27, 2024, 9:03 AM IST | Last Updated Jan 27, 2024, 9:03 AM IST

ವಿಜಯಲಕ್ಷ್ಮೀ  ಫ್ಯಾಮಿಲೀ ಫೋಟೋ ಹಂಚಿಕೊಳ್ಳೋದ್ರಿಂದ ಶುರುವಾಯ್ತು ಈ ಫ್ಯಾಮಿಲೀ ವಾರ್. ವಿಜಯಲಕ್ಷ್ಮೀ(Vijayalakshmi) ಹಾಕಿದ್ದ ಫೋಟೋ ನೋಡಿ ಪವಿತ್ರಾ ಗೌಡ(Pavitra Gowda) ತಮ್ಮ ಮತ್ತು ದರ್ಶನ್(Darshan) ಅವರ ಮಗುವಿನ ಜೊತೆಗಿರೋ ಫೋಟೋಗಳ ಕೊಲೇಜ್ ಮಾಡಿ ಈ ಸಂಬಂಧಕ್ಕೆ 10 ವರ್ಷ ಎಂದು ರೀಲ್ ಒಂದನ್ನು ಪೋಸ್ಟ್ ಮಾಡಿದ್ರು . ಇದನ್ನು ನೋಡಿ ಸಿಡಿದೆದ್ದ ವಿಜಯಲಕ್ಷ್ಮೀ ದರ್ಶನ್ ಸ್ಟ್ರಾಂಗಾಗಿ ನನ್ನ ಪತಿ ಜೊತೆಗೆ ಫೋಟೋ ತೆಗೆಸಿಕೊಂಡು ಫೋಟೊ ಹಾಕೋ ಹಕ್ಕು ನಿನಗಿಲ್ಲ . ಹೀಗೆ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳ ಬೇಕಾಗುತ್ತದೆ ಎಂದು ವಿಜಯಲಕ್ಱ್ಮೀ ದರ್ಶನ್ ಪವಿತ್ರಾಗೌಡಾಗೆ ಖಡಕ್ ಎಚ್ಚರಿಕೆ ಕೊಟ್ಟು ಪೋಸ್ಟ್ ಮಾಡಿದ್ದರು. ವಿಜಯಲಕ್ಷ್ಮೀ ಪೋಸ್ಟ್‌ಗೆ ಒಂದು ದಿನವೆಲ್ಲಾ ಯೋಚಿಸಿ ಇದೀಗ ಪವಿತ್ರಾಗೌಡ ಅಷ್ಟೆ ನೇರವಾಗಿ ಉತ್ತರ ಕೊ್ಟ್ಟಿದ್ದಾರೆ. ವಿಜಯಲಕ್ಷ್ಮೀ ಎಚ್ಚರಿಕೆಗೆ ಪವಿತ್ರ ಗೌಡ ಸ್ವಲ್ಪವೂ ಅಂಜಿದಂತೆ ಕಾಣೊಲ್ಲ ಅನ್ನಿಸುತ್ತೆ. ಸದ್ಯ ವಿಜಯಲಕ್ಷ್ಮೀ ಮತ್ತು ಪವಿತ್ರಗೌಡ ಫ್ಯಾಮಿಲೀ ವಾರ್‌ನಲ್ಲಿ ದರ್ಶನ್ ಇನ್ನೂ ಎಂಟರ್ ಆದಂಗಿಲ್ಲ. ಸದ್ಯ ದರ್ಶನ್ ಕಾಟೇರ(Kaatera) ಸಕ್ಸಸ್‌ನನ್ನು ಅಭಿಮಾನಿಗಳ ಜೊತೆ ಸಂಭ್ರಮಿಸೋದ್ರಲ್ಲೇ ಬ್ಯೂಜಿಯಾಗಿದ್ದಾರೆ. ಪವಿತ್ರಾ ಪೋಸ್ಟ್‌ಗೆ ಈಗ ವಿಜಯಲಕ್ಷ್ಮೀ ಇನ್ನೋ ಒಂದು ಲೆವೆಲ್ ಮೇಲೆ ಹೋಗಿ ಜೋರಾಗೆ ಉತ್ತರ ಕೊಡ್ತಾರೆ ಅಂತ ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನಡೀತಿರೋ ಪವಿತ್ರಾಗೌಡ ಮತ್ತು ವಿಜಯಲಕ್ಷ್ಮೀ ಫ್ಯಾಮಿಲೀ ವಾರ್  ಇನ್ನೂ ಎಲ್ಲಿಹೋಗಿ ನಿಲ್ಲುತ್ತೋ ಕಾದು ನೋಡಬೇಕು.

ಇದನ್ನೂ ವೀಕ್ಷಿಸಿ:  Today Horoscope: ಇಂದು ನಾಗ ದೇವರಿಗೆ ಹಾಲು, ಎಳೆನೀರಿನ ಅಭಿಷೇಕ ಮಾಡಿ..ರೋಗಗಳಿಂದ ಮುಕ್ತಿ ಹೊಂದಿ

Video Top Stories