'ಬಿಲ್ಲ ರಂಗ ಬಾಷಾ' Big ಅಪ್‌ಡೇಟ್‌! ಯಾವಾಗಿನಿಂದ ಚಿತ್ರೀಕರಣ ಆರಂಭ ಗೊತ್ತಾ?

ಬಿಗ್ ಬಾಸ್ ಕೊನೆಯ ಮುಕ್ತಾಯದ ಹಂತಕ್ಕೆ ಬಂದಿದೆ. ಇದೇ ವೇಳೆ ಕಿಚ್ಚ ಸುದೀಪ್ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿರೋ ಆ ಸಿನಿಮಾದ ಬಗ್ಗೆ ಇದೀಗ ಹೊಸ ಅಪ್ಡೇಟ್ ಒಂದು ಸಿಕ್ಕಿದೆ. 

First Published Jan 19, 2024, 11:43 AM IST | Last Updated Jan 19, 2024, 11:43 AM IST

ಕಿಚ್ಚ ಸುದೀಪ್ ಸದ್ಯ 'ಮ್ಯಾಕ್ಸ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆರಡು ಸಿನಿಮಾಗಳನ್ನು ಕೂಡ ಘೋಷಣೆ ಮಾಡಿದ್ದಾರೆ. ಇದೆಲ್ಲದರ ನಡುವೆ ಬಹಳ ಹಿಂದೆ ಘೋಷಣೆ ಆಗಿದ್ದ 'ಬಿಲ್ಲ ರಂಗ ಬಾಷಾ' ಸಿನಿಮಾ ಬಗ್ಗೆ ಕಿಚ್ಚ ಕ್ರೇಜಿ ಅಪ್ಡೇಟ್ ನೀಡಿದ್ದಾರೆ. ಇದೇ ವರ್ಷ ಸಿನಿಮಾ ಶುರುವಾಗುವುದಾಗಿ ಇತ್ತೀಚೆಗೆ ಅಭಿಮಾನಿಗಳ ಜೊತೆ ನಡೆಸಿದ ಟ್ವಿಟರ್ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ಅನೂಪ್ ಭಂಡಾರಿ ಹಾಗೂ ಸುದೀಪ್(Sudeep) ಕಾಂಬಿನೇಷನ್ನಲ್ಲಿ ಐದಾರು ವರ್ಷಗಳ ಹಿಂದೆ 'ಬಿಲ್ಲ ರಂಗ ಬಾಷಾ'(Billa Ranga Baashaa) ಸಿನಿಮಾ ಘೋಷಣೆ ಆಗಿತ್ತು. 'ಅಶ್ವತ್ಥಾಮ' ಎನ್ನುವ ಮತ್ತೊಂದು ಚಿತ್ರವನ್ನು ಈ ಜೋಡಿ ಘೋಷಿಸಿತ್ತು. 'ರಂಗಿತರಂಗ' ಸೂಪರ್ ಹಿಟ್ ಬೆನ್ನಲ್ಲೇ ಸುದೀಪ್ ಜೊತೆ ಅನೂಪ್ ಕೈ ಜೋಡಿಸುತ್ತಾರೆ ಎನ್ನುವ ಸುದ್ದಿಯೇ ಸಖತ್ ಥ್ರಿಲ್ ಕೊಟ್ಟಿತ್ತು. ಕಾರಣಾಂತರಗಳಿಂದ ಅದು ತಡವಾಗುತ್ತಾ ಬಂತು. ಈ ನಡುವೆ ಇವೆರಡು ಸಿನಿಮಾಗಳನ್ನು ಬಿಟ್ಟು 'ವಿಕ್ರಾಂತ್ ರೋಣ' ಚಿತ್ರ ಮೂಡಿ ಬಂತು. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ 'ಮ್ಯಾಕ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಲೈಪುಲಿ ಎಸ್. ತನು ಜೊತೆ ಸೇರಿ ಸುದೀಪ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತಮಿಳಿನ ಚೇರನ್ ನಿರ್ದೇಶದಲ್ಲಿ ಒಂದು ಸಿನಿಮಾ, ಆರ್. ಚಂದ್ರು ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಇದೆಲ್ಲದರ ಜೊತೆಗೆ ತಮ್ಮದೇ ನಿರ್ದೇಶನದಲ್ಲಿ ಸುದೀಪ್ ನಟಿಸೋ ಲೆಕ್ಕಾಚಾರದಲ್ಲಿದ್ದಾರೆ.

ಇದನ್ನೂ ವೀಕ್ಷಿಸಿ:  Kaatera Collection: ರಿಲೀಸ್ ಆದ 18 ದಿನಕ್ಕೆ 200 ಕೋಟಿ ಕ್ಲಬ್ ಸೇರಲು ಸಿದ್ಧನಾದ ಕಾಟೇರ..!

Video Top Stories