Kaatera Collection: ರಿಲೀಸ್ ಆದ 18 ದಿನಕ್ಕೆ 200 ಕೋಟಿ ಕ್ಲಬ್ ಸೇರಲು ಸಿದ್ಧನಾದ ಕಾಟೇರ..!

ಕಾಟೇರ ನಟ ದರ್ಶನ್ ಕರಿಯರ್‌ನ ದಿ ಬೇಸ್ಟ್ ಸಿನಿಮಾ. ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿರೋ ಕಾಟೇರ, ರಿಲೀಸ್ ಆಗಿದ್ದ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದಿತ್ತು. ಈಗಾಗಲೇ, ಲಕ್ಷಗಟ್ಟಲೇ ಟಿಕೆಟ್ ಸೋಲ್ಡ್ಔಟ್, ಕೋಟಿ ಕೋಟಿ ಕಲೆಕ್ಷನ್ ಮಾಡಿರೋ ಕಾಟೇರ, ಇನ್ನೇನು 200 ಕೋಟಿ ಕ್ಲಬ್ ಕೂಡ ಸೇರೇ ಬಿಡುತ್ತೆ ಅನ್ನೊ ಲೆಕ್ಕಾಚಾರ ಶುರುವಾಗಿದೆ. 

Share this Video
  • FB
  • Linkdin
  • Whatsapp

ನಟ ದರ್ಶನ್ ಫ್ಯಾನ್ಸ್ ಫುಲ್ ಥ್ರಿಲ್ ಆಗ್ಹೋಗಿದ್ದಾರೆ. ಕಾಟೇರ(Kaatera movie) ರಿಲೀಸ್ ಆಗಿದ್ದ ದಿನದಿಂದಲೂ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗಿ 18 ದಿನ ಕಳೆದಿದೆ. ಆದರೂ ಭರ್ಜರಿ ಪ್ರದರ್ಶನ ಕಾಣ್ತಿದೆ. ಒಂದು ಮಾಹಿತಿ ಪ್ರಕಾರ, ಕಾಟೇರ ಕಲೆಕ್ಷನ್(Collection) ಪ್ರಕಾರ 190 ಕೋಟಿ ದಾಟಿ ಹೋಗಿದೆಯಂತೆ. ಅಲ್ಲಿಗೆ 200 ಕ್ಲಬ್ ಸೇರುವ ದಿನವೂ ದೂರದಲ್ಲಿಲ್ಲ. ಸಿನಿ ವೀಕ್ಷಕರ ಪ್ರಕಾರ, ಕಾಟೇರ ಚಿತ್ರವನ್ನ ಎಲ್ಲ ವರ್ಗದವರೂ ನೋಡುತ್ತಿದ್ದಾರೆ. ಸಿನಿಮಾ ಚೆನ್ನಾಗಿದೆ ಅನ್ನುವ ರಿಪೋರ್ಟ್ ಬರ್ತಿದ್ದಂತೇನೆ ಚಿತ್ರದ ಬಗ್ಗೆ ಕುತೂಹಲ ಜಾಸ್ತಿ ಆಗಿದೆ. ಹಾಗಾಗಿಯೇ ಥಿಯೇಟರ್‌ಗೆ ಬರೋ ಜನರ ಸಂಖ್ಯೆಯೂ ಹೆಚ್ಚಾಗಿದೆ. ಸಿಂಗಲ್ ಥಿಯೇಟರ್‌ನಲ್ಲೂ ಶೋಗಳು ಫುಲ್ ಆಗುತ್ತಿದೆ. ಮಲ್ಟಿಪ್ಲೆಕ್ಸ್‌ನಲ್ಲೂ ಚಿತ್ರ ಸಖತ್ ಆಗಿಯೇ ಓಡುತ್ತಿವೆ. ಈ ಮೂಲಕ ಕನ್ನಡದ ಕಾಟೇರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಒಟ್ಟಿನಲ್ಲಿ ದರ್ಶನ್(Darshan) ಅಭಿನಯದ ಕಾಟೇರ ಹೊಸ ಹಿಸ್ಟರಿ ಕ್ರಿಯೇಟ್ ಮಾಡಿದ್ದಕ್ಕೆ ಅಭಿಮಾನಿಗಳು ಫುಲ್ ಖುಷ್ ಆಗ್ಹೋಗಿದ್ದಾರೆ. 

ಇದನ್ನೂ ವೀಕ್ಷಿಸಿ:  Sri Rama: ಕರ್ನಾಟಕದಲ್ಲಿ ಶ್ರೀರಾಮನ ಹೆಜ್ಜೆ ಗುರುತು! ಮರ್ಯಾದಾ ಪುರುಷೋತ್ತಮನಿಗೂ ಕೋಟೆನಾಡಿಗೂ ಇದೆ ನಂಟು!

Related Video