Deepika Das: ಕರಿಮಣಿ ಮಾಲೀಕನ ಪರಿಚಯಿಸಿದ BIG BOSS ಬ್ಯೂಟಿ..! ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದೀಪಿಕಾ ದಾಸ್..!

ನಟಿ ದೀಪಿಕಾ ದಾಸ್ ಕನ್ನಡ ಬಿಗ್ ಬಾಸ್ ಸೀಸನ್ 7ರ ಹಾಟ್ ಬಾಂಬ್ ಸ್ಪರ್ಧಿ. ಯಾವ್ ಬಿಗ್ ಬಾಸ್ ಶುರುವಾದ್ರು ದೀಪಿಕಾ ದಾಸ್‌ರಷ್ಟು ಮುದ್ದಾದ ಹಾಟ್ ಆಗಿ ಕಾಣಿಸಿರೋ ನಟಿಯನ್ನ ನಾವ್ ನೋಡಿಲ್ಲ ಅಂತ ಬಿಗ್‌ಬಾಸ್ ಫಾಲೋವರ್ಸ್ ದೀಪಿಕಾ ದಾಸ್‌ರನ್ನೇ ಟ್ರೋಲ್ ಮಾಡ್ತಾರೆ.

Share this Video
  • FB
  • Linkdin
  • Whatsapp

ಇಷ್ಟು ದಿನ ಸಿಂಗಲ್ ಆಗಿದ್ದ ದೀಪಿಕಾ ದಾಸ್(Deepika Das​​) ಈಗ ತನ್ನ ಅರ್ಧಾಂಗಿಯನ್ನ ಹುಡುಕಿಕೊಂಡಿದ್ದು, ಆ ಕರಿಮಣಿ ಮಾಲೀಕನನ್ನ ಪರಿಚಯಿಸಿದ್ದಾರೆ. ದೀಪಿಕಾ ದಾಸ್ ಮದುವೆ(Marriage) ವಿಡಿಯೋ ಫೋಟೋಗಳು ವೈರಲ್ ಆಗುತ್ತಿವೆ. ನಟಿ ದೀಪಿಕಾ ದಾಸ್‌ರದ್ದು ಸೀಕ್ರೆಟ್ ಮ್ಯಾರೇಜ್. ತನ್ನ ಮದುವೆ ಗುಟ್ಟನ್ನ ಎಲ್ಲೂ ಬಿಟ್ಟುಕೊಡದೇ ಗೋವಾದ(Goa) ಕಡಲ ತೀರದಲ್ಲಿ ಹಸೆಮಣೆ ಏರಿದ್ದಾರೆ. ನಾಗಿಣಿ ಸೀರಿಯಲ್‌ನ ಈ ನಟಿಯ ಕೈ ಹಿಡಿದ ಕರಿಮಣಿ ಮಾಲೀಕ ಯಾರು ಗೊತ್ತಾ..? ಕರ್ನಾಟಕ ಮೂಲದವರೇ ಆದ ದುಬೈನ ಉದ್ಯಮಿ ದೀಪಕ್. ಇವರಿಬ್ಬರದ್ದು ಲವ್ ಮ್ಯಾರೇಜ್ ಅಂತಲೂ ಹೇಳಲಾಗ್ತಿದೆ. ಯಾಕಂದ್ರೆ ದೀಪಿಕಾ ದಾಸ್ ಆಗಾಗ ದುಬೈಗೆ ಹಾರುತ್ತಿದ್ರು. ಅಲ್ಲಿನ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ರು. ಹೀಗಾಗಿ ಇಬ್ಬರ ಮಧ್ಯೆ ಪ್ರೀತಿ ಬೆಳೆದು ಈಗ ಹಸೆಮಣೆ ಏರಿ ಕರಿಮಣಿ ಕಟ್ಟಿ ಸಂಸಾರ ಶುರು ಮಾಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Martin: ಬೆಳ್ಳಿತೆರೆ ಅಖಾಡಕ್ಕೆ ಬರಲು ರೆಡಿಯಾದ ಆ್ಯಕ್ಷನ್ ಪ್ರಿನ್ಸ್..!2 ವರ್ಷದ ಬಳಿಕ ಮಾರ್ಟಿನ್ ಶೂಟಿಂಗ್ ಕಂಪ್ಲೀಟ್ ..!

Related Video