ಡಾರ್ಲಿಂಗ್ ಪ್ರಭಾಸ್ ಫ್ಯಾನ್ಸ್‌ಗೆ ಮತ್ತೊಂದು ಸರ್ಪ್ರೈಸ್: ನಿಮ್ಮ ಮುಂದೆ ಬರಲಿದೆ ಆದಿಪುರುಷ್ ಆಕ್ಷನ್ ಟ್ರೈಲರ್..!

ಆದಿಪುರುಷ್‌ನಲ್ಲಿ ಪ್ರಭಾಸ್ ರಾಮನಾಗಿ ನಟಿಸಿದ್ರೆ, ರಾವಣನಾಗಿ ಸೈಫ್ ಅಲಿ ಖಾನ್ ಆರ್ಭಟಿಸುತ್ತಾರೆ. ಈ ರಾಮ-ರಾವಣ ನಡುವಿನ ಕಾಳಗ ಹೇಗಿರುತ್ತೆ ಅಂತ ಹೇಳಲು 2ನೇ ಟ್ರೇಲರ್ ಬರ್ತಿದೆ. 
 

Share this Video
  • FB
  • Linkdin
  • Whatsapp

ಡಾರ್ಲಿಂಗ್ ಪ್ರಭಾಸ್ ಬಾಹುಬಲಿ ಇಮೇಜ್ ಇನ್ನೂ ಮಾಸಿಲ್ಲ. ಆ ಇಮೇಜ್‌ನಿಂದಲೇ ಇಂಡಸ್ಟ್ರಿಯಲ್ಲಿ ಪ್ರಭಾಸ್ ದರ್ಬಾರ್ ಮಾಡುತ್ತಿದ್ದಾರೆ. ಈಗ ಬಾಹುಬಲಿ ನೇಮ್ನಿಂದ ಆದಿಪುರುಷ್ ಆಗಿ ಬದಲಾಗೋ ಟೈಂ ಬಂದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಈಗಾಗ್ಲೆ ಬಿಡುಗಡೆ ಆಗಿರೋ ಆದಿಪುರುಷ್ ಟ್ರೈಲರ್. ಆದಿಪುರುಷ್ ಟೀಸರ್ ಬಂದಾಗ ಗ್ರಾಫಿಕ್ಸ್ ನೋಡಿ ಪ್ರಭಾಸ್ ಫ್ಯಾನ್ಸ್ ಚಿತ್ರತಂಡಕ್ಕೆ ಹಿಗ್ಗಾಮುಗ್ಗ ಕ್ಲಾಸ್ ತಗೊಂಡಿದ್ರು. ಅಷ್ಟೊಂದು ಕೆಟ್ಟದಾಗಿ ಟೀಸರ್ ಮೂಡಿತ್ತು. ಆದ್ರೆ ಈಗ ಆದಿಪುರುಷ್ ಟ್ರೈಲರ್ ಸಿನಿಮಾದ ಮೇಲೆ ಬೇರೆಯದ್ದೇ ಹೈಪ್ ಸೃಷ್ಟಿಸಿದೆ. ರಿಲೀಸ್ ಆಗಿರೋ ಟ್ರೈಲರ್ ಸೂಪರ್ ಹಿಟ್ ಆಗಿದೆ. ಹೀಗಾಗಿ ಆದಿಪುರುಷ್ ನೋಡೋಕೆ ಪ್ರಭಾಸ್ ಫ್ಯಾನ್ಸ್ ಕಾಯ್ತಿದ್ದಾರೆ. ಇದರ ಮಧ್ಯೆ ಇದೀಗ ಆದಿಪುರಷ್ ಆಕ್ಷನ್ ಟ್ರೈಲರ್ ರಿಲೀಸ್ ಆಗ್ತಿದೆ. ಜೂನ್ 6ರಂದು ತಿರುಪತಿಯಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಅಂದು ‘ಆದಿಪುರುಷ್’ ಚಿತ್ರದ 2ನೇ ಟ್ರೇಲರ್ ಬಿಡುಗಡೆ ಆಗಲಿದೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ: ಸಾಲದಿಂದಲೇ ಸಿದ್ಧವಾಗಿತ್ತು ಬಾಹುಬಲಿ ಸಿನಿಮಾ: 300 ರಿಂದ 400 ಕೋಟಿ ಸಾಲಕ್ಕೆ ಮೌಳಿ ಕಾರಣ !

Related Video