ರಾಜ್ಯಾದ್ಯಂತ ರಾಜ್ ಬಿ ಶೆಟ್ಟಿ 'ಟೋಬಿ' ರಿಲೀಸ್: ವಿಭಿನ್ನ ಕತೆ, ನಟನೆ ನಿಜಕ್ಕೂ ಹಬ್ಬ!

ರಾಜ್ ಬಿ ಶೆಟ್ಟಿ ನಟನೆಗೆ ಆಸ್ಕರ್ ಕೊಡಿ ಎಂದ ಪ್ರೇಕ್ಷಕ..!
ಮಾತಿಲ್ಲದೆ ಟೋಬಿಯಾಗಿ ಮನಸ್ಸು ಗೆದ್ದ ರಾಜ್ ಬಿ ಶೆಟ್ಟಿ..!
ಟೋಬಿಯ ಸ್ಟೋರಿ ಎಷ್ಟು ಇಂಟ್ರೆಸ್ಟಿಂಗ್ ಆಗಿದೆ ಗೊತ್ತಾ..?

Share this Video
  • FB
  • Linkdin
  • Whatsapp

ಟೋಬಿ ಮಾರಿ ಮಾರಿ ಮಾರಿಗೆ ದಾರಿ..ಇದು ಟೋಬಿ ಸಿನಿಮಾದ ತೀಮ್. ಈಗ ಬಿಡುಗಡೆ ಆಗಿರೋ ಟೋಬಿ(Toby) ಸ್ಯಾಂಡಲ್‌ವುಡ್‌ನ ಸಿನಿಮಾ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಕರೆ ತರೋದಕ್ಕೆ ಹರದಾರಿ ಮಾಡಿದೆ. ರಾಜ್ ಬಿ ಶೆಟ್ಟಿಯ ಬಹು ನಿರೀಕ್ಷಿತ ಟೋಬಿ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆಗಿದೆ. ವಿಭಿನ್ನ ಕತೆ, ಅಭಿನಯದ ಟೋಬಿ ಸಿನಿಮಾ ಕನ್ನಡದ ಸಿನಿ ಕುಲಕ್ಕೆ ಒಂದು ಹಬ್ಬದಂತೆ ಕಾಣುತ್ತಿದೆ. ಹೀಗಾಗಿ ಚಿತ್ರಮಂದಿರಗಳಲ್ಲಿ ಟೋಬಿಗೆ ಗ್ರ್ಯಾಂಡ್ ವೆಲ್ಕಮ್ ಸಿಕ್ಕಿದೆ. ರಾಜ್ ಬಿ ಶೆಟ್ಟಿ ಸ್ಯಾಂಡಲ್‌ವುಡ್‌ನ ಬ್ಯ್ರಾಂಡ್‌ನ ಟ್ರೆಂಡ್‌. ರಾಜ್ ಬಿ ಶೆಟ್ಟಿ(Raj B Shetty) ಟ್ಯಾಲೆಂಟ್ ಏನು ಅನ್ನೋದನ್ನ ಪದೇ ಪದೇ ಹೇಳ್ಬೇಕಿಲ್ಲ. ಒಂದು ಮೊಟ್ಟೆ ಕಥೆಯಲ್ಲಿ ನಿಮ್ಮನ್ನ ಪದೇ ಪದೇ ಕಿಸಕ್ ಅಂತ ನಗೋ ಹಾಗೆ ಮಾಡಿದ್ದ ಶೆಟ್ರು, ಗರುಡಾಗಮನ ರಿಷಬವಾಹನ ಸಿನಿಮಾದಲ್ಲಿ ರಕ್ತದ ಕೋಡಿ ಹರಿಸಿ ಮಾಸ್ ಆಗಿ ಮಿಂಚಿದ್ರು. ಆದ್ರೆ ಟೋಬಿ ಹಾಗಲ್ಲ. ಈ ಟೋಬಿ ವಿಭಿನ್ನ ಮತ್ತಷ್ಟು ವಿಶೇಷ. ಹಾಗಾದ್ರೆ ಹೇಗಿದೆ ಟೋಬಿ. ಮತ್ತೆ ಗೆದ್ರಾ ರಾಜ್ ಬಿ ಶೆಟ್ಟಿ..? ಅಂತ ಕೇಳಿದ್ರೆ ಅದಕ್ಕೆ ಸಿನಿಮಾ ನೋಡಿದ ಪ್ರೇಕ್ಷಕರಿಂದಲೇ ಉತ್ತರ ಸಿಕ್ಕಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಮಗು ಇರುವೆಯನ್ನು ಚುಚ್ಚಿ ಸಾಯಿಸುತ್ತೆ, ಅದು ಕ್ರೌರ್ಯ: ರಾಜ್ ಬಿ ಶೆಟ್ಟಿ ಹೀಗೆ ಹೇಳಿದ್ಯಾಕೆ?

Related Video