ಮಗು ಇರುವೆಯನ್ನು ಚುಚ್ಚಿ ಸಾಯಿಸುತ್ತೆ, ಅದು ಕ್ರೌರ್ಯ: ರಾಜ್ ಬಿ ಶೆಟ್ಟಿ ಹೀಗೆ ಹೇಳಿದ್ಯಾಕೆ?
ರಾಜ್ ಬಿ ಶೆಟ್ಟಿ ಮೈಕೈ ಕೊಡವಿ ಎದ್ದು ನಿಂತು ಒಂದು ಕೈ ನೋಡಿಯೇ ಬಿಡೋಣ ಎಂಬಂತೆ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿರುವ ಸಿನಿಮಾ ‘ಟೋಬಿ’. ತುಂಬಾ ಕಡಿಮೆ ದಿನಗಳಲ್ಲಿ ಚಿತ್ರೀಕರಣ ಮಾಡಿ, ಸಾಧ್ಯವಾದಷ್ಟು ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮುಗಿಸುವುದು ರಾಜ್ ಬಿ ಶೆಟ್ಟಿ ತಂಡದ ಶೈಲಿ.

ರಾಜ್ ಬಿ ಶೆಟ್ಟಿ ಮೈಕೈ ಕೊಡವಿ ಎದ್ದು ನಿಂತು ಒಂದು ಕೈ ನೋಡಿಯೇ ಬಿಡೋಣ ಎಂಬಂತೆ ಅದ್ದೂರಿಯಾಗಿ ಬಿಡುಗಡೆ ಮಾಡುತ್ತಿರುವ ಸಿನಿಮಾ ‘ಟೋಬಿ’. ತುಂಬಾ ಕಡಿಮೆ ದಿನಗಳಲ್ಲಿ ಚಿತ್ರೀಕರಣ ಮಾಡಿ, ಸಾಧ್ಯವಾದಷ್ಟು ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮುಗಿಸುವುದು ರಾಜ್ ಬಿ ಶೆಟ್ಟಿ ತಂಡದ ಶೈಲಿ. ಆದರೆ ಈ ಸಲ ಮಾತ್ರ ಸಿನಿಮಾ ಮಾಡಿ ಅಲ್ಲಿಗೆ ಬಿಡಲಿಲ್ಲ. ಖುದ್ದು ರಾಜ್ ಬಿ ಶೆಟ್ಟಿ ರಾಜ್ಯದಾದ್ಯಂತ ತಿರುಗಾಡಿದ್ದಾರೆ. ಇದ್ದ ಬದ್ದ ವೇದಿಕೆಗಳಲ್ಲಿ ಹುಲಿ ಡಾನ್ಸ್ ಮಾಡಿದ್ದಾರೆ. ಕೇಳಿದ ಪ್ರಶ್ನೆಗಳಿಗೆಲ್ಲಾ ಮನಸ್ಸು ಬಿಚ್ಚಿ ಉತ್ತರ ಕೊಟ್ಟಿದ್ದಾರೆ. ಅದಕ್ಕೆಲ್ಲಾ ಕಾರಣ ಮನಸ್ಸಿಗಾದ ಒಂದು ನೋವು.
ರಾಜ್ ಬಿ ಶೆಟ್ಟಿಯವರನ್ನು ಯಾರೋ ಯಾವುದೋ ಕಾರಣಕ್ಕೆ ನೋಯಿಸಿದ್ದಾರೆ. ನೋಯಿಸಿದವರಿಗೆ ಸಿನಿಮಾದಲ್ಲಿಯೇ ಉತ್ತರ ಕೊಡುತ್ತೇನೆ ಎಂದುಕೊಂಡ ರಾಜ್ ಟೋಬಿ ಮಾಡಿದ್ದಾರೆ. ಅದನ್ನು ತನ್ನ ಶಕ್ತಿಮೀರಿ ಜನರಿಗೆ ತಲುಪಿಸಲು ಯತ್ನಿಸಿದ್ದಾರೆ. ಗೆಟಪ್‌ನಿಂದ, ಟ್ರೇಲರ್‌ನಿಂದ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರುವ ಟೋಬಿ ಇಂದು ಬಿಡುಗಡೆಯಾಗುತ್ತಿದೆ.
ಪುನೀತ್ ಅಭಿಮಾನಿಗಳಲ್ಲಿ ನಾನು ದೊಡ್ಡ ಅಭಿಮಾನಿ: ರಾಜ್ ಬಿ. ಶೆಟ್ಟಿ
ಈ ಸಿನಿಮಾ ಕುರಿತು ರಾಜ್ ಬಿ ಶೆಟ್ಟಿ ಆಡಿ ಮಾತುಗಳು ಇಲ್ಲಿವೆ-
- ಮಾತನಾಡಲಿಕ್ಕೆ ಬರುತ್ತಾ ಅಂತ ಕೇಳಿದವರಿಗೆ ಟೋಬಿ ಸಿನಿಮಾದ ಮೂಲಕ ಹಾಡು ಹಾಡಿ ತೋರಿಸಿದ್ದೇನೆ.
- ನೋವುಂಡ ಮನುಷ್ಯನ ಎಕ್ಸ್‌ಪ್ರೆಶನ್ ಸಿನಿಮಾ. ನನ್ನೊಳಗಿನ ಗೋಳಾಟ, ಸಿಟ್ಟು, ಹತಾಶೆ ಕಥೆ ಆಗುತ್ತೆ, ಸಿನಿಮಾದಲ್ಲಿರುತ್ತೆ. ಆದರೆ ಅಲ್ಲಿ ನಾನು ನನ್ನನ್ನು ಕಟ್ಟಿಕೊಳ್ಳುತ್ತೇನೆಯೇ ಹೊರತು ನನ್ನ ನೋವು, ಹತಾಶೆಗೆ ಕಾರಣರಾದವರನ್ನು ಸರ್ವನಾಶ ಮಾಡಲ್ಲ.
- ಟಿ ಕೆ ದಯಾನಂದ ಅವರ ‘ಟೋಬಿ’ ಕಥೆಯಿಂದ ಪಾತ್ರವನ್ನು ಮಾತ್ರ ಆಯ್ಕೆ ಮಾಡಿದೆ. ಆ ಪಾತ್ರ ಸಾಮಾನ್ಯವಾಗಿತ್ತು. ಆ ಸಾಮಾನ್ಯದಲ್ಲೊಂದು ಚಂದ ಇದೆ. ಅದು ಟೋಬಿಯಲ್ಲಿತ್ತು. ಆತ ಯಾವುದನ್ನೂ ಸೀರಿಯಸ್ ಆಗಿ ತಗೊಳ್ಳದ ಒಳ್ಳೆಯ ಹಾಗೂ ಕೆಟ್ಟ ವ್ಯಕ್ತಿ. ಆ ಕೆಟ್ಟತನ ಒಳ್ಳೆತನ ಸರಳವಾಗಿ ಬಂದಾಗ ಮುಗ್ಧವಾಗಿ ಕಾಣಿಸುತ್ತೆ. ಅದರಲ್ಲೊಂದು ಕ್ಯೂಟ್‌ನೆಸ್ ಇರುತ್ತೆ.
- ಮಗು ಇರುವೆಯನ್ನು ಚುಚ್ಚಿ ಸಾಯಿಸುತ್ತೆ. ಅದು ಕ್ರೌರ್ಯ. ಆದರೆ ಮಗುವಿಗೆ ಅದು ಕ್ರೌರ್ಯ ಅಂತ ಗೊತ್ತಿಲ್ಲ. ಇರುವೆ ಕಾಣಿಸದಿದ್ದರೆ ಮಗು ಕ್ಯೂಟ್. ಅದು ಟೋಬಿ. ಅವನಲ್ಲಿರುವ ಮಗು ನನಗೆ ಇಷ್ಟ.
- ನಮ್ಮೆಲ್ಲರಲ್ಲೂ ಒಬ್ಬ ಟೋಬಿ ಇರ್ತಾನೆ. ಕೆಲವೊಮ್ಮೆ ಕಳ್ಕೊಂಡಿರ್ತೀವಿ. ಕೆಲವು ಕಡೆ ಉಳಿಸಿಕೊಂಡಿರ್ತೀವಿ. ಇನ್ನೊಂದಿಷ್ಟು ಜನರಲ್ಲಿ ಆತ ಮಲಕ್ಕೊಂಡಿರ್ತಾನೆ.
- ನಾನು ಎಷ್ಟೇ ಕ್ರೂರಿಗಳಾದರೂ ನಮಗೆ ನಾವು ತುಳಿತಕ್ಕೊಳಗಾದವರು ಅಂತ ಅನಿಸುತ್ತಾ ಇರುತ್ತೆ. ಆದರೆ ನಾವೇ ತುಳೀತಾ ಇರ್ತೀವಿ. ಅದು ಹೇಗೆ ಅನ್ನೋದು ಸಿನಿಮಾದಲ್ಲಿ ಗೊತ್ತಾಗುತ್ತೆ.
ಟೋಬಿ ಚಿತ್ರದ ವಿತರಣೆ ಹಕ್ಕು ತೆಗೆದುಕೊಂಡ ಕೆವಿಎನ್ ಪ್ರೊಡಕ್ಷನ್
- ಟೋಬಿ ಕನಸಲ್ಲಿ ಕಾಣೋ ಹೀರೋಯಿನ್ ಜೊತೆ ಡ್ಯಾನ್ಸ್ ಮಾಡಲ್ಲ. ಅವನು ನಮಗಿಂತ ಕೆಳಗಿದ್ದಾನೆ. ಅಂಥವನಿಗೆ ಚಿಯರ್ ಮಾಡಬಹುದಾ? ಯಾವತ್ತೂ ಮನೆಯೊಳಗೆ ಸೇರಿಸಿಕೊಳ್ಳದ ಪಾತ್ರವನ್ನು ಹೃದಯದೊಳಗೆ ಸೇರಿಸಿಕೊಳ್ಳುವುದು ಸಿನಿಮಾದ ಸಾಧ್ಯತೆ. ಆಮೇಲೆ ಬಹುಶಃ ನಾವು ಮನೆಯೊಳಗೂ ಸೇರಿಸಿಕೊಳ್ಳಬಹುದು.
- ಟೋಬಿ ಸಿನಿಮಾ ಕೆಥಾರ್ಸಿಸ್ ಥರ ಕೆಲಸ ಮಾಡುತ್ತೆ. ನಾವು ಏನು ಮಾಡಲ್ವೋ ಅದನ್ನು ಟೋಬಿ ಮಾಡ್ತಾನೆ. ಅವನು ಬಿದ್ದಲ್ಲಿಂದ ಎದ್ದು ಬರುವುದೇ ನಮ್ಮಲ್ಲೂ ಎದ್ದು ಬರುವ ಉತ್ಸಾಹ ತುಂಬುತ್ತೆ.