Old Couple Get Married: 65ರ ಅಜ್ಜಿಯ ವರಿಸಿದ 85ರ ಅಜ್ಜ
ಅಜ್ಜ-ಅಜ್ಜಿ ಸತಿಪತಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಉದಯಗಿರಿಯ ಗೌಸಿಯಾ ನಗರದಲ್ಲಿ ಘಟನೆ ನಡೆದಿದ್ದು ಇದೀಗ ಈ ಇಳಿಜೋಡಿಯ ಮದುವೆ ವೈರಲ್ ಆಗಿದೆ.
ಅಜ್ಜ-ಅಜ್ಜಿ ಸತಿಪತಿಯಾದ ಘಟನೆ ಮೈಸೂರಿನಲ್ಲಿ(Mysuru) ನಡೆದಿದೆ. ಮೈಸೂರಿನ ಉದಯಗಿರಿಯ ಗೌಸಿಯಾ ನಗರದಲ್ಲಿ ಘಟನೆ ನಡೆದಿದ್ದು ಇದೀಗ ಈ ಇಳಿಜೋಡಿಯ ಮದುವೆ ವೈರಲ್(Viral Wedding) ಆಗಿದೆ. ಗೌಸಿಯಾ ನಗರದ ಮುಸ್ತಫಾ ಅವರು ಎರಡು ವರ್ಷಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ಹಾಗಾಗಿ ಅವರು ಒಂಟಿಯಾಗಿಯೇ ಬದುಕುತ್ತಿದ್ದರು.
ಪ್ರೀತಿಗೆ ವಯಸ್ಸಿನ ಹಂಗೇಕೆ ? 58 ವರ್ಷದ ವಧು, 65 ವರ್ಷದ ವರ..! ಪ್ರೀತಿ ಗೆದ್ದಿತು
ಹಾಗಾಗಿಯೇ ಅವರು ಸಂಗಾತಿಯನ್ನು ಹೊಂದುವ ಬಯಕೆ ವ್ಯಕ್ತಪಡಿಸಿದ್ದರು. 85 ವರ್ಷದ ಮುಸ್ತಫಾ ಅವರು 65 ವರ್ಷದ ಫಾತಿಮಾ ಬೇಗಂ ಅವರನ್ನು ವರಿಸಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಅಜ್ಜ-ಾಜ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಸ್ತಫಾ ಮದುವೆ ಪ್ರಪೋಸಲ್ ಒಪ್ಪಿಕೊಂಡ ಫಾತಿಮಾ ಎಲ್ಲರ ಸಮ್ಮುಖದಲ್ಲಿ ಸತಿಪತಿಗಳಾಗಿದ್ದಾರೆ. ತಂದೆಯ ಆಸೆಗೆ ಮಕ್ಕಳು ಸಾಥ್ ಕೊಟ್ಟು ಮದುವೆಗೆ ಸಮ್ಮತಿಸಿದ್ದಾರೆ.