Asianet Suvarna News Asianet Suvarna News

Love has no age: ಪ್ರೀತಿಗೆ ವಯಸ್ಸಿನ ಹಂಗೇಕೆ ? 58 ವರ್ಷದ ವಧು, 65 ವರ್ಷದ ವರ..! ಪ್ರೀತಿ ಗೆದ್ದಿತು

58 ವರ್ಷದ ವೃದ್ಧೆ 65 ವರ್ಷದ ವೃದ್ಧನನ್ನು ಮದುವೆಯಾಗಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ತಾನು ಪ್ರೇಮಿಸಿದ ಪ್ರಿಯತಮೆ ಸಿಗಲಿಲ್ಲವೆಂದು ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಪ್ರೇಮಿಗೆ 65ನೇ ವರ್ಷಕ್ಕೆ ತನ್ನ ಕನಸಿನ ರಾಣಿ ಸಿಕ್ಕಿದ್ದಾಳೆ. ಈ ಇಳಿ ವಯಸ್ಸಿನಲ್ಲೂ ಇವರಿಬ್ಬರ ಪ್ರೀತಿ ಚಿಗುರೊಡೆದು ಹೊಸ ಜೀವನಕ್ಕೆ ನಾಂದಿ ಹಾಡಿದೆ.

ಪ್ರೀತಿ ಕುರುಡು ಅಂತಾರೆ. ಅದೇ ರೀತಿ ಪ್ರೀತಿ ಮಾಡುವುದಕ್ಕೆ ವಯಸ್ಸಿನ ಲೆಕ್ಕವಿಲ್ಲ. ಸೆಲೆಬ್ರಿಟಿಗಳು ವಯಸ್ಸನ್ನು ಕೇರ್ ಮಾಡದೆ ಮದುವೆಯಾಗೋದು ಕಾಮನ್. ಈಗ ಜನಸಾಮಾನ್ಯರೂ ಇದನ್ನು ಒಪ್ಪಿ ಸ್ವೀಕರಿಸುತ್ತಿದ್ದಾರೆ. 58 ವರ್ಷದ ವೃದ್ಧೆ 65 ವರ್ಷದ ವೃದ್ಧನನ್ನು ಮದುವೆಯಾಗಿರುವುದು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ತಾನು ಪ್ರೇಮಿಸಿದ ಪ್ರಿಯತಮೆ ಸಿಗಲಿಲ್ಲವೆಂದು ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಪ್ರೇಮಿಗೆ 65ನೇ ವರ್ಷಕ್ಕೆ ತನ್ನ ಕನಸಿನ ರಾಣಿ ಸಿಕ್ಕಿದ್ದಾಳೆ. ಈ ಇಳಿ ವಯಸ್ಸಿನಲ್ಲೂ ಇವರಿಬ್ಬರ ಪ್ರೀತಿ ಚಿಗುರೊಡೆದು ಹೊಸ ಜೀವನಕ್ಕೆ ನಾಂದಿ ಹಾಡಿದೆ.

30 ವರ್ಷಗಳ ಪ್ರೀತಿ, 65 ರ ಇಳಿವಯಸ್ಸಿನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ!

ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಈ ಅಮರ ಪ್ರೇಮಿಗಳು ವಿವಾಹವಾಗುವುದರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಮೇಲುಕೋಟೆಯ ಯತಿರಾಜದಾಸರ ಗುರುಪೀಠದಲ್ಲಿ ಶ್ರೀನಿವಾಸ ನರಸಿಂಹನ್ ಗುರೂಜಿ ಸಮ್ಮುಖದಲ್ಲಿ ಜಯಮ್ಮರನ್ನು ತಮ್ಮ ಬಾಳಸಂಗಾತಿಯನ್ನಾಗಿ ಚಿಕ್ಕಣ್ಣ ಸ್ವೀಕರಿಸಿದರು. ಇವರ ವಿವಾಹದಲ್ಲಿ ಕೆಲವೇ ಕುಟುಂಬಸ್ಥರು ಮಾತ್ರ ಹಾಜರಿದ್ದರು. ಮೈಸೂರಿನ ಹೆಬ್ಬಾಳದ ಚಿಕ್ಕಣ್ಣ ತನ್ನ ಸೋದರತ್ತೆಯ ಮಗಳಾದ ಜಯಮ್ಮ ಅವರನ್ನು ಯೌವ್ವನ ಕಾಲದಲ್ಲೇ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಜಯಮ್ಮ ಬೇರೊಬ್ಬರನ್ನು ವಿವಾಹವಾದ ಬಳಿಕ ಬೇಸರಗೊಂಡ ಚಿಕ್ಕಣ್ಣ ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಜೀವನ ನಡೆಸುತ್ತಿದ್ದರು. ಬೇರೊಬ್ಬರನ್ನು ಮದುವೆಯಾಗಿದ್ದ ಜಯಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿಲ್ಲ. ಸಾಂಸಾರಿಕ ಕಲಹದಿಂದ ಜಯಮ್ಮ ಪತಿಯಿಂದ ದೂರವಾಗಿದ್ದರು. ಜಯಮ್ಮನವರಿಗೆ ಒಬ್ಬ ಮಗನಿದ್ದು ಆತ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿದ್ದಾನೆ. ಪತಿಯಿಂದ ದೂರವಾಗಿ ತವರು ಸೇರಿದ್ದರು. ಅಲ್ಲಿ ಮತ್ತೆ ಹಳೆಯ ಪ್ರೇಮಿ ಚಿಕ್ಕಣ್ಣನ ಭೇಟಿಯಾಯಿತು. ಮತ್ತೆ ಇಬ್ಬರ ನಡುವೆ ಪ್ರೀತಿ ಅರಳಿತು. ಇಬ್ಬರ ವಯಸ್ಸು ಮಾಗಿದ್ದರೂ ಅವರ ಪ್ರೇಮಕ್ಕೆ ಮುಪ್ಪಾಗಿರಲಿಲ್ಲ. ಸಮಾಜಕ್ಕೆ ಹೆದರದೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅದರಂತೆ ಮೇಲುಕೋಟೆಗೆ ಆಗಮಿಸಿ ಶಾಸ್ತ್ರೋಕ್ತವಾಗಿ ಮದುವೆಯಾದರು. ಸಂಧ್ಯಾಕಾಲದಲ್ಲೂ ಅವರಲ್ಲಿರುವ ಜೀವನೋತ್ಸಾಹ ಎಲ್ಲರನ್ನೂ ನಾಚಿಸುವಂತಿತ್ತು.

Video Top Stories