ಸಿಎಂ ಬ್ರೇಕ್‌ಫಾಸ್ಟ್‌ ಮೀಟಿಂಗ್.. ಸಚಿವರಿಗೆ 6 ಖಡಕ್ ವಾರ್ನಿಂಗ್..!

ಕಂಟ್ರೋಲ್ ತಪ್ಪಿದ್ರೆ ಹುಷಾರ್.. ಕೈ ಸಚಿವರಿಗೆ ಟಾಸ್ಕ್..!
ಸಚಿವರಿಗೆ ಎಲೆಕ್ಷನ್ ಟಾಸ್ಕ್ ಕೊಟ್ಟ ಸಿಎಂ ಸಿದ್ದರಾಮಯ್ಯ..!
‘ಲೋಕ’ ಗೆಲ್ಲುವ ಗುರಿ..! ಸಚಿವರಿಗೆ ‘ಕೈ’ ಜವಾಬ್ದಾರಿ..!

Share this Video
  • FB
  • Linkdin
  • Whatsapp

ಕಾಂಗ್ರೆಸ್‌ ಸಾಮ್ರಾಜ್ಯದಲ್ಲಿ ಈಗ ಮತ್ತೆ ಸಿಎಂ ಯಾರು ಅನ್ನೊ ಪ್ರಶ್ನೆ ಎದ್ದಿದೆ. ಕಾಂಗ್ರೆಸ್‌ನ(Congress) ಎರಡೂ ಬಣಗಳಲ್ಲೂ ಸಿಎಂ ಕುರ್ಚಿ ಕಾದಾಟ ತಾರಕಕ್ಕೇರಿದೆ. ಆದ್ರೆ ಕುರ್ಚಿ ಕುಸ್ತಿಯ ಮಧ್ಯೆ ಸಿಎಂ, ಡಿಸಿಎಂ ಬ್ರೇಕ್‌ಸ್ಪಾಟ್‌ ಮೀಟಿಂಗ್‌ನಲ್ಲಿ(Meeting) ದೋಸ್ತಿಗಳಾಗಿದ್ದಾರೆ. ಸಿಎಂ ಕುರ್ಚಿ ವಿಚಾರವಾಗಿ ಅನಗತ್ಯ ಮಾತುಗಳಿಗೆ ಬ್ರೇಕ್ ಹಾಕೋಕೆ, 16 ಸಚಿವರ ಮೀಟಿಂಗ್ ಕರೆದಿದ್ರು. ಒಂದು ಕಡೆ ಲೋಕ(lokasabha) ಗೆಲ್ಲುವ ಗುರಿ. ಇನ್ನೊಂದು ಕಡೆ ಒಳಗೊಳಗೆ ಕುದಿಯುತ್ತಿರುವ ಬೇಗುದಿ. ಇಂದರಿಂದ ಪಾರಾಗೋಕೆ ಕೈ ಪಡೆ 20 ಗುರಿ. 6 ವಾರ್ನಿಂಗ್ ಅಸ್ತ್ರ ಪ್ರಯೋಗಿಸಿದೆ. ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕಾಳಗದ ಅಂತರ್ಯುದ್ಧ ತಾರಕಕ್ಕೇರುತ್ತಿದ್ದಂತೆ ಮಹಾ ದಂಡನಾಯಕ ಸಿದ್ದರಾಮಯ್ಯ(Siddaramaiah) ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಮನೆಯಲ್ಲೇ ಮಂತ್ರಿಗಳ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದು ಕದನ ವಿರಾಮ ಘೋಷಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಇಸ್ರೇಲ್ ಚತುರ್ಮುಖ ವ್ಯೂಹಕ್ಕೆ ಹಮಾಸ್ ಕೌಂಟರ್..? ರಣರೋಚಕವಾಗಿರಲಿದೆ ಪಾತಾಳ ಯುದ್ಧ..!

Related Video