Asianet Suvarna News Asianet Suvarna News

ಇಸ್ರೇಲ್ ಚತುರ್ಮುಖ ವ್ಯೂಹಕ್ಕೆ ಹಮಾಸ್ ಕೌಂಟರ್..? ರಣರೋಚಕವಾಗಿರಲಿದೆ ಪಾತಾಳ ಯುದ್ಧ..!

ಇಸ್ರೇಲ್ ದಾಳಿಗೆ ಪ್ರತಿದಾಳಿ.. ವ್ಯೂಹಕ್ಕೆ ಪ್ರತಿವ್ಯೂಹ!
ಸುರಂಗದಲ್ಲಿ ಜಮಾವಣೆಯಾದ 40,000 ಉಗ್ರರು..!
ಔಷಧಗಳನ್ನ ಸ್ಟಾಕ್ ಮಾಡಿಕೊಂಡಿರೋ ಹಮಾಸ್‌..!

ಇಸ್ರೇಲ್ ಮೇಲೆ  ಹಮಾಸ್ ದೊಡ್ಡದೊಂದು ಪ್ಲಾನ್ ಮಾಡಿಕೊಂಡು ಸುರಂಗ ನುಗ್ಗಿದೆ. ಹಮಾಸ್(Hamas) ಜೊತೆ ಒಟ್ಟು  ಮೂರು ಉಗ್ರ ಪಡೆಗಳು ಸಾಥ್ ನೀಡಿವೆ. ಈ ಉಗ್ರರನ್ನ ಸಂಪೂರ್ಣವಾಗಿ ನಾಶ ಮಾಡೋಕ್ಕಂತಲೇ ಇಸ್ರೇಲ್(Israel) ಚತುರ್ಮುಖ ವ್ಯೂಹ ಸಿದ್ಧಮಾಡಿಕೊಂಡಿತ್ತು. 500 ಕಿಲೋಮೀಟರ್ ಇರೋ ಸುರಂಗದಲ್ಲಿ ಸ್ಪಾಂಜ್ ಬಾಂಬುಗಳ(Bomb) ದಾಳಿಗೆ  ಹಮಾಸ್ ಉಗ್ರರು ಸಿದ್ಧವಾಗಿದ್ದಾರೆ. ಕಳೆದ ಅಕ್ಟೋಬರ್ 7ರಂದು ಆರಂಭವಾದ ಯುದ್ಧ, ಇಷ್ಟು ದಿನಗಳಲ್ಲಿ ಮಾಡಿದ್ದೇನು ಗೊತ್ತಾ..? ಎರಡೂ ಕಡೆಯಲ್ಲಿ ಬರೋಬ್ಬರಿ 9 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಆ ಪೈಕಿ 3ವರೆ ಸಾವಿರಕ್ಕೂ ಅಧಿಕ ಮಂದಿ, ಪುಟ್ಟ ಮಕ್ಕಳು ಅನ್ನೋದು, ದುಃಖದ ವಿಚಾರವಾಗಿದೆ. ಅವತ್ತು ಇಸ್ರೇಲಿನೊಳಗೆ ನುಗ್ಗಿದ ಹಮಾಸ್ ಉಗ್ರರು ಬರೋಬ್ಬರಿ 1400 ಮಂದಿಯ ಪ್ರಾಣ ತೆಗೆದಿದ್ರು. ಸುಮಾರು 250 ಮಂದಿನಾ ಒತ್ತೆಯಾಳುಗಳಾಗಿ ಕದ್ದೊಯ್ದಿದ್ರು. ಇಸ್ರೇಲ್ ಈ ದಾಳಿಯ ಬಗ್ಗೆ ಎಚ್ಚೆತ್ತುಕೊಂಡು ಪ್ರತಿದಾಳಿ ಮಾಡೋ ಹೊತ್ತಿಗೆ ಸಮಯ ಕೈಮೀರಿತ್ತು. ಆದ್ರೆ, ಈ ಕ್ಷಣಕ್ಕೂ ಇಸ್ರೇಲಿನ ಯುದ್ಧೋತ್ಸಾಹ ಕಡಿಮೆಯಾಗಿಲ್ಲ. ಹಮಾಸ್ ಉಗ್ರರ ಸರ್ವನಾಶ ಮಾಡೋ ತನಕ ನಿಟ್ಟುಸಿರನ್ನೂ ಬಿಡದ ಹಾಗೆ ಕಾದಾಡೋಕೆ ಇಸ್ರೇಲ್ ಸಿದ್ಧವಾಗಿಯೇ ರಣಾಂಗಣ ಪ್ರವೇಶಿಸಿದೆ. ಇಸ್ರೇಲ್ ಸೈನ್ಯ ತುಂಬಾ ಬಲಿಷ್ಟವಾಗಿಯೇ ಉತ್ತರ ಕೊಡ್ತಾನೇ ಇದೆ. ಮೊನ್ನೆ ನಡೆಸಿದ ದಾಳಿಯಲ್ಲಿ ಕೇವಲ ಕೆಲವೇ ಗಂಟೆಗಳಲ್ಲಿ, ಒಂದಲ್ಲಾ, ಎರಡಲ್ಲ, ಬರೋಬ್ಬರಿ 130 ಮಂದಿ ಹಮಾಸ್ ಉಗ್ರರನ್ನ ಇಸ್ರೇಲ್ ಸೇನೆ ಹೊಡೆದುಹಾಕಿತ್ತು . ಅದರಲ್ಲೂ ಗಾಜಾ ಪಟ್ಟಿಯ ಉತ್ತರ ಭಾಗದಿಂದಲೇ ಆರಂಭವಾಗಿರೋ ಸಂಹಾರ ಕಾರ್ಯ, ಇಸ್ರೇಲಿಗೆ ಮತ್ತಷ್ಟು ಉಗ್ರನಾಶದ ವಿಶ್ವಾಸ ನೀಡಿತ್ತು.

ಇದನ್ನೂ ವೀಕ್ಷಿಸಿ:  ಸಚಿವರಿಗೆ ಎಲೆಕ್ಷನ್‌ ಟಾಸ್ಕ್‌ ಕೊಟ್ಟ ಸಿಎಂ: ಜವಾಬ್ದಾರಿ ಸರಿಯಾಗಿ ನಿರ್ವಹಿಸದಿದ್ದರೆ ಸಂಪುಟದಿಂದ ಕೊಕ್‌ ?

Video Top Stories