ಸಿಡಿದಿದ್ದೇಕೆ ಡಿಕೆಶಿ ? ರೊಚ್ಚಿಗೆದ್ದಿದ್ದೇಕೆ ಎಚ್‌ಡಿಕೆ ? ಮತ್ತೆ ನೆನಪಾದ “ಶಿವ”ತಾಂಡವ.. “ಕುಮಾರ” ದ್ವೇಷದ ಕಥೆ..!

"ಮಹಿಳೆಯರ ಮಾನ ಹರಾಜಿಟ್ಟವರು ರಣಹೇಡಿಗಳು"- ಎಚ್.ಡಿ.ಕೆ
"ಕುಮಾರಸ್ವಾಮಿಗೆ ಮಾನ ಮರ್ಯಾದೆ ಇದ್ಯಾ.." ಅಂದಿದ್ದೇಕೆ ಡಿಕೆ..?
ಡಿಕೆಶಿ ಚರಿತ್ರೆಯನ್ನು ಕೆದಕಿ ಕುಮಾರಸ್ವಾಮಿ ಕೊಟ್ಟದ್ದೆಂಥಾ ಡಿಚ್ಚಿ..?
"ಗೌಡರ ಕುಟುಂಬದ ಮೂವರೂ ಸೋಲ್ತಾರೆ" ಡಿಕೆ ಸ್ಫೋಟಕ ಭವಿಷ್ಯ

Share this Video
  • FB
  • Linkdin
  • Whatsapp

ಅದು 25 ವರ್ಷಗಳ ದ್ವೇಷ, ದುಷ್ಮನಿ. ಅಲ್ಲಿ ದುಷ್ಮನಿಯ ಅಖಾಡದಲ್ಲಿ ನಡೆದದ್ದು ಅಕ್ಷರಶಃ ರಾಜಕೀಯ ಹಗೆತನದ ರೋಚಕ ಕಥೆ. ಒಬ್ಬ ಬೆಂಕಿಯಾದ್ರೆ, ಮತ್ತೊಬ್ಬ ಬಿರುಗಾಳಿ. ಒಬ್ಬ ಸುನಾಮಿಯಾದ್ರೆ, ಮತ್ತೊಬ್ಬ ಸುಂಟರಗಾಳಿ. ಶಿವತಾಂಡವ, ಕುಮಾರ ದ್ವೇಷದ ಚರಿತ್ರೆಯಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗಿದೆ ಈ ಲೋಕಸಭಾ ಚುನಾವಣೆ(Lok Sabha elections 2024). ರಾಜಕೀಯ ದ್ವೇಷದ ಕಥೆಯಲ್ಲಿ ಇಲ್ಲಿಯವರೆಗಿನದ್ದು ಒಂದು ಲೆಕ್ಕವಾದ್ರೆ, ಇಲ್ಲಿಂದ ಮತ್ತೊಂದು ಲೆಕ್ಕ. ಯಾರನ್ನು ತಮ್ಮ ಜೋಡೆತ್ತು ಅಂತ ಕುಮಾರಸ್ವಾಮಿ(HD Kumaraswamy) ಕರೆದಿದ್ರೋ, ಯಾರನ್ನು ಅಣ್ಣ ನನ್ನಣ್ಣ ಅಂತ ಡಿಕೆ ಶಿವಕುಮಾರ್(DK Shivakumar) ಹೇಳಿದ್ರೋ. ಅವ್ರಿಬ್ರೂ ಈಗ ಮತ್ತೆ ತಮ್ಮ ಹಳೇ ವರಸೆ ತೋರಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ ಮಧ್ಯೆ ಮತ್ತದೇ ಮದಗಜ ಗುದ್ದಾಟದಂತಾ ದುಷ್ಮನಿ ಕಾಳಗ ಶುರುವಾಗಿದೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಹೊತ್ತಿಕೊಂಡಿದ್ದ ಆ ದುಷ್ಮನಿಯ ಕಿಡಿಯೀಗ ಅಕ್ಷರಶಃ ಜ್ವಾಲಾಗ್ನಿಯಂತೆ ಧಗಧಗಿಸ್ತಾ ಇದೆ.

ಇದನ್ನೂ ವೀಕ್ಷಿಸಿ: ಕಲ್ಯಾಣ ಕರ್ನಾಟಕ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲು ರಣತಂತ್ರ! ಡಿಕೆಶಿ ಮಾಸ್ಟರ್ ಪ್ಲ್ಯಾನ್‌ ಏನು?

Related Video