Asianet Suvarna News Asianet Suvarna News

ಕಲ್ಯಾಣ ಕರ್ನಾಟಕ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲು ರಣತಂತ್ರ! ಡಿಕೆಶಿ ಮಾಸ್ಟರ್ ಪ್ಲ್ಯಾನ್‌ ಏನು?

ಲೋಕಸಭಾ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಬಾಕಿ ಉಳಿದಿರುವ 14 ಕ್ಷೇತ್ರಗಳ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಂಚಿಕೆ ಮಾಡಿದ್ದಾರೆ. 14 ಲೋಕಸಭಾ ಕ್ಷೇತ್ರಗಳಿಗೆ 14 ಸಚಿವರ ನಿಯೋಜನೆ ಮಾಡಲಾಗಿದ್ದು, ಈಗಿರುವ ಉಸ್ತುವಾರಿಗಳ ಜೊತೆಗೆ ಮತ್ತೊಬ್ಬ ಸಚಿವರನ್ನ ಡಿಕೆಶಿ ನೇಮಕ ಮಾಡಿದ್ದಾರೆ.  
 

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ (Lok Sabha Elections 2024) ಮೊದಲ ಹಂತ ಮುಗಿದಿದೆ. ಈಗ ಕಾಂಗ್ರೆಸ್(Congress) ಪಾಲಿಗೆ ಎರಡನೇ ಹಂತ ಅತ್ಯಂತ ನಿರ್ಣಾಯಕವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ನಿರೀಕ್ಷೆ ಇದೆ. ಮೊದಲಾರ್ಧ ಮುಗಿದಿರುವ ಕಾರಣ ನಾಯಕರ ಪೂರ್ಣ ಪ್ರಮಾಣದ ಬಳಕೆಗೆ ಕಾಂಗ್ರೆಸ್‌ ಮುಂದಾಗಿದೆ. ಬಾಕಿ ಉಳಿದಿರುವ 14 ಕ್ಷೇತ್ರಗಳ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹಂಚಿಕೆ ಮಾಡಿದ್ದಾರೆ. ಅದರಂತೆ 14 ಲೋಕಸಭಾ ಕ್ಷೇತ್ರಗಳಿಗೆ(14 Lok Sabha Constituencies) 14 ಸಚಿವರ ನಿಯೋಜನೆ ಮಾಡಲಾಗಿದ್ದು,  ಈಗಿರುವ ಉಸ್ತುವಾರಿಗಳ ಜೊತೆಗೆ ಮತ್ತೊಬ್ಬ ಸಚಿವರನ್ನ ಡಿಕೆಶಿ ನೇಮಕ ಮಾಡಿದ್ದಾರೆ. ಅದರಂತೆ ನಾಳೆಯಿಂದಲೇ ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದ ತಂತ್ರಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೆ ಈಗ ಮುಕ್ತಾಯ ಆಗಿರುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೈ ಶಾಸಕರಿಗೂ ಈ ಜವಾಬ್ದಾರಿ ನೀಡಲಾಗಿದೆ. ಇದರ ಜೊತೆಗೆ ಸಮುದಾಯವಾರು, ಪ್ರಭಾವಿ ನಾಯಕರನ್ನೂ ಸಹ ಮತ ಸೆಳೆಯಲು ಬಳಕೆ ಮಾಡಿಕೊಳ್ಳಲಾಗಿದೆ. ಆಯಾ ಸಮುದಾಯಗಳ ಮತ ಸೆಳೆಯಲು ಅದೇ ಸಮುದಾಯ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಬಾಕಿ ಉಳಿದಿರುವ 14 ಲೋಕಸಭಾ ಕ್ಷೇತ್ರದಲ್ಲಿ ರಣತಂತ್ರ ರೂಪಿಸಲಾಗಿದೆ.

ಇದನ್ನೂ ವೀಕ್ಷಿಸಿ:  Lok Sabha elections 2024: 14 ಲೋಕಸಭಾ ಕ್ಷೇತ್ರದಲ್ಲಿನ ಮತದಾನ ಅಂತ್ಯ, ಮತಯಂತ್ರಗಳಲ್ಲಿ 247 ಅಭ್ಯರ್ಥಿಗಳ ಭವಿಷ್ಯ ಭದ್ರ!

Video Top Stories