Asianet Suvarna News Asianet Suvarna News

ಉಚಿತ.. ಖಚಿತ.. ನಿಶ್ಚಿತ.. ಖಂಡಿತಕ್ಕೆ ಕೌಂಟ್‌ಡೌನ್..! : ಶುಕ್ರವಾರವೇ ಫೈನಲ್.. ಸದ್ಯಕ್ಕೆ 3 ಗ್ಯಾರಂಟಿ.. ಏನೇನು ಕಂಡಿಷನ್ಸ್...?

ಪಂಚ ಪ್ರತಿಜ್ಞೆಗಳ ಪೈಕಿ ಯಾವೆಲ್ಲಾ ಗ್ಯಾರಂಟಿಗಳಿಗೆ ಶುಕ್ರದೆಸೆ..?
ಸಿಎಂ ಸಿದ್ದರಾಮಯ್ಯ ಹೆಣೆದ ಗ್ಯಾರಂಟಿ ಸೂತ್ರದ ಗುಟ್ಟೇನು..?
ಉಚಿತ ಖಚಿತ ಅಂದ ಜೋಡೆತ್ತು ಸರ್ಕಾರ ಅಚ್ಚರಿ ಕೊಡುತ್ತಾ..? 

ರಾಜ್ಯದ ಮೂಲೆ ಮೂಲೆಗಳಲ್ಲೂ ಸದ್ಯ ಐದು ಗ್ಯಾರಂಟಿಗಳದ್ದೇ ಸದ್ದು. ಚುನಾವಣೆಗೂ ಮೊದ್ಲು ಕಾಂಗ್ರೆಸ್ ಘೋಷಿಸಿದ್ದ ಪಂಚ ಗ್ಯಾರಂಟಿ ಸ್ಕೀಮ್‌ಗಳ ಅನುಷ್ಠಾನ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಸಿಗೋ ಸಮಯ ಹತ್ತಿರ ಬಂದೇ ಬಿಟ್ಟಿದೆ. ಜೋಡೆತ್ತು ಸರ್ಕಾರದ ಐದು ಗ್ಯಾರಂಟಿಗಳು ಜನರಿಗೆ ಸಿಗೋದು ಯಾವಾಗ ಅನ್ನೋ ಪ್ರಶ್ನೆಗೆ ಶುಕ್ರವಾರವೇ ಉತ್ತರ ಸಿಗಲಿದೆ. ರಾಜ್ಯದ ಜನರಿಗೆ ಶುಕ್ರದೆಸೆ ಗ್ಯಾರಂಟಿ ಅಂತಿದೆ ಸರ್ಕಾರ. ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಗ್ಯಾರಂಟಿ ಘೋಷಣೆಗಳ ಅನುಷ್ಠಾನದ ಬಗ್ಗೆ ಅಲ್ಲೇ ನಿರ್ಧಾರವಾಗಲಿದೆ. 

ಇದನ್ನೂ ವೀಕ್ಷಿಸಿ: ಮೋದಿ ವಿರುದ್ಧ ಕಾಂಗ್ರೆಸ್ ನಿಗೂಢ ಖೆಡ್ಡಾ..?! : 50 ವರ್ಷದ ಹಿಂದೆ ಕೈ ಬತ್ತಳಿಕೆಯಲ್ಲಿತ್ತಂತೆ ಆ ಅಸ್ತ್ರ..!