ಬರ್ಲಿನ್ ಕನ್ನಡ ಬಳಗದಿಂದ ಜರ್ಮನಿಯಲ್ಲಿ ಕನ್ನಡಿಗರ ಕ್ರೀಡಾ ಸ್ಪೂರ್ತಿ !

ಬರ್ಲಿನ್ ಕನ್ನಡ ಬಳಗದಿಂದ ಜರ್ಮನಿಯಲ್ಲಿ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಸುಮಾರು 200 ಕನ್ನಡಿಗರು ಭಾಗವಹಿಸಿದ್ದರು.
 

First Published Oct 2, 2023, 1:19 PM IST | Last Updated Oct 2, 2023, 1:19 PM IST

ಇತ್ತಿಚೆಗಷ್ಟೇ ಬರ್ಲಿನ್ ಕನ್ನಡ ಬಳಗ 3ನೇ ವಾರ್ಷಿಕ 5 ಕಿ.ಮೀ ಓಟವನ್ನು ಆಯೋಜಿಸಿತ್ತು. ಬರ್ಲಿನ್ ಕನ್ನಡ ಬಳಗ(Berlin Kannada group) ಸಂಸ್ಥೆ ಜರ್ಮನಿಯ ಬರ್ಲಿನ್ ನಗರ ಮತ್ತು ಸುತ್ತಮುತ್ತಲಿನ ಕನ್ನಡಿಗರನ್ನು(Kannadigas) ಒಂದೆಡೆ ಸೇರಿಸಿ, ನಮ್ಮ ನಾಡಿನ ಭಾಷೆ, ಸಂಸ್ಕ್ರತಿಯನ್ನು ಜೀವಂತವಾಗಿಡುವ ಜೊತೆಗೆ ಸಾಮಾಜಿಕ ಕಾರ್ಯಕ್ರಮವನ್ನು ಮಾಡುತ್ತಿದೆ. ಬಿಕೆಬಿಯಲ್ಲಿ ನಡೆಸಿದ ಈ ಓಟದಲ್ಲಿ ಸುಮಾರು 200 ಕನ್ನಡಿಗರು ಭಾಗವಹಿಸಿದ್ದರು. ಇಲ್ಲಿ ಸಂಗ್ರಹವಾದ  ಹಣವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಸಲ್ಲಿಸುವಂತೆ, ಈ ಕಾರ್ಯಕ್ರಮದಲ್ಲಿ ಭಾಗಿಯಾದ  ಭಾರತೀಯ  ರಾಯಭಾರಿ ಶ್ರೀ ಹರೀಶ್ ಪರ್ವತನೇನಿಯವರಿಗೆ ನೀಡಿ ಸಾಮಾಜಿಕ ಕಳಕಳಿ ಮೆರೆದಿದೆ.

ಇದನ್ನೂ ವೀಕ್ಷಿಸಿ:  ಮುಸ್ಲಿಮರ ರಕ್ಷಣೆಯೇ ಕಾಂಗ್ರೆಸ್‌ ಸರ್ಕಾರದ ಆರನೇ ಗ್ಯಾರಂಟಿ: ಚಕ್ರವರ್ತಿ ಸೂಲಿಬೆಲೆ