ನಾನು ಹಿಂದುಳಿದ ವರ್ಗದಿಂದ ಗೆದ್ದಿರುವ ಶಾಸಕ, ಸಚಿವ ಸ್ಥಾನ ಖಚಿತ: ಶಾಸಕ ಪುಟ್ಟರಂಗಶೆಟ್ಟಿ

ನಾನು ನಾಲ್ಕು ಬಾರಿ ಗೆದ್ದಿದ್ದೇನೆ, ಚಾಮರಾಜನಗರ ಜಿಲ್ಲೆಯಯಲ್ಲಿ ನಾನೇ ಸೀನಿಯರ್. ನನಗೆ ಸಚಿವ ಸ್ಥಾನ ಸಿಗುವುದು ಪಕ್ಕಾ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಚಾಮರಾಜನಗರ: ನನಗೆ ಸಚಿವ ಸ್ಥಾನ ಸಿಗುವುದು ಖಚಿತ. ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಚಾಮರಾಜನಗರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ. ನಾನು ನಾಲ್ಕು ಬಾರಿ ಗೆದ್ದಿದ್ದೇನೆ, ಚಾಮರಾಜನಗರ ಜಿಲ್ಲೆಯಯಲ್ಲಿ ನಾನೇ ಸೀನಿಯರ್. ಹಿಂದುಳಿದ ವರ್ಗದಿಂದ ಗೆದ್ದಿರುವ ಶಾಸಕ ನಾನು. ನಿನ್ನೆಯೇ 28 ಮಂದಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದ್ರೆ ಹೈಕಮಾಂಡ್ ಆದೇಶದ ಹಿನ್ನೆಲೆಯಲ್ಲಿ ನಿನ್ನೆ 8 ಜನರ ಪ್ರಮಾಣ ವಚನ ಸ್ವೀಕಾರ ಆಗಿದೆ. ಇನ್ನು 25 ರಿಂದ 28 ಸಚಿವ ಸ್ಥಾನ ಭರ್ತಿ ಆಗಬೇಕು. ಅಧಿವೇಶನ ಬಳಿಕ ಆ ಕೆಲಸವೂ ಸುಗಮವಾಗಿ ಆಗುತ್ತದೆ. ನಾನು ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಚಾಮರಾಜನಗರದಲ್ಲಿ ಶಾಸಕ ಸಿ.ಪುಟ್ಟಗಶೆಟ್ಟಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಮನೆ, ನನ್ನ ಮನೆ ಸುತ್ತುತ್ತ ಇರಬೇಡಿ: ಡಿಸಿಎಂ ಆಗ್ತಿದ್ದಂತೆ ಡಿಕೆಶಿ ಫುಲ್‌ ವೈಲೆಂಟ್‌ !

Related Video