Loksabha Eection 2024: ಬೆಳಗಾವಿ, ಉತ್ತರಕನ್ನಡದಲ್ಲಿ MES ಟೆನ್ಷನ್..! ಎರಡೂ ಪಕ್ಷಗಳಿಗೆ ಶುರು ಮತ ವಿಭಜನೆ ಸಂಕಷ್ಟ!

ಮರಾಠ ಮತ ಗಮನದಲ್ಲಿಟ್ಟು ಉತ್ತರಕನ್ನಡಕ್ಕೆ ಅಂಜಲಿ ನಿಂಬಾಳ್ಕರ್‌‌ಗೆ ಟಿಕೆಟ್
MES ಅಭ್ಯರ್ಥಿ ನಿರಂಜನ್ ಸ್ಪರ್ಧೆಯಿಂದ ‌ಕಾಂಗ್ರೆಸ್ ‌ಲೆಕ್ಕಾಚಾರ ಉಲ್ಟಾ ಪಲ್ಟಾ
ಬಿಜೆಪಿ ಅಭ್ಯರ್ಥಿಗೂ ಮರಾಠ ಮತ ಮೂಲಕ ಹಿಂದೂ ಮತ ವಿಭಜನೆ ಆತಂಕ

Share this Video
  • FB
  • Linkdin
  • Whatsapp

ಮೊದಲ ಬಾರಿ ಲೋಕಸಭೆ ಚುನಾವಣೆಗೆ(Loksabha Eection) MES ಇಳಿಯುತ್ತಿದೆ. ಹೀಗಾಗಿ ಬೆಳಗಾವಿ(Belagavi), ಉತ್ತರಕನ್ನಡದಲ್ಲಿ(Uttara Kannada) ಎಂಇಎಸ್ ಟೆನ್ಷನ್‌ ಶುರುವಾಗಿದ್ದು, ಎರಡೂ ಕ್ಷೇತ್ರಗಳಿಗೆ MES ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿದೆ. ಬೆಳಗಾವಿ ಲೋಕಸಭಾ ‌ಕ್ಷೇತ್ರಕ್ಕೆ ಮಹಾದೇವ ಪಾಟೀಲ ಸ್ಪರ್ಧೆ ಮಾಡುತ್ತಿದ್ದು, ಉತ್ತರ ಕನ್ನಡ ಕ್ಷೇತ್ರಕ್ಕೆ ನಿರಂಜನ ಸರದೇಸಾಯಿ ಕಣಕ್ಕೆ ಇಳಿಯಲಿದ್ದಾರೆ. 51 ವರ್ಷಗಳಿಂದ MES ಕಾರ್ಯಕರ್ತರಾಗಿರುವ ಮಹಾದೇವ ಪಾಟೀಲ, 15 ವರ್ಷಗಳಿಂದ ಸಮಿತಿಯಲ್ಲಿರುವ ನಿರಂಜನ್ ಸರದೇಸಾಯಿ. ಎರಡೂ ಕ್ಷೇತ್ರಗಳ ಕಾಂಗ್ರೆಸ್(Congress)-ಬಿಜೆಪಿ(BJP) ಅಭ್ಯರ್ಥಿಗಳಿಗೆ ಮತ ವಿಭಜನೆ ಆತಂಕ ಇದೀಗ ಶುರುವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮರಾಠ ‌ಸಮುದಾಯ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ಬೆಳಗಾವಿ ಕ್ಷೇತ್ರದ ಮರಾಠ ಭಾಗದಲ್ಲಿ ಪ್ರಭಾವ ಹೊಂದಿರುವ ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿಯಲ್ಲಿ ಶೆಟ್ಟರ್, ಮೃಣಾಲ್‌ಗೆ ಮರಾಠಾ ಮತಗಳ ವಿಭಜನೆ ಆತಂಕ ಎದುರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  Raj Thackeray: ಮಹಾರಾಷ್ಟ್ರದಲ್ಲೂ ಬಿಜೆಪಿ 'ಮಹಾ' ಮೈತ್ರಿ ಗೇಮ್‌! ಉದ್ಧವ್‌ ಠಾಕ್ರೆಗೆ ಟಕ್ಕರ್‌ ಕೊಡಲು ರಾಜ್‌ ಠಾಕ್ರೆ ಅಸ್ತ್ರ !

Related Video