
'ನಾನು ನಿಮ್ಮ ಮಗ, ರೈತನ ಮಗ, ನನಗೊಂದು ಅವಕಾಶ ಕೊಡಿ', ಒಕ್ಕಲಿಗ ಪ್ಲೇ ಕಾರ್ಡ್ ಬಳಸಿದ ಡಿಕೆಶಿ
ನಾನು ನಿಮ್ಮ ಮನೆಯ ಮಗ ನನಗೆ ಒಂದು ಅವಕಾಶ ಕೊಡಿ ಎನ್ನುವ ಮೂಲಕ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಪ್ಲೇ ಕಾರ್ಡ್ ನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಸಿದ್ದಾರೆ.
ನಾನು ನಿಮ್ಮ ಮನೆಯ ಮಗ ನನಗೆ ಒಂದು ಅವಕಾಶ ಕೊಡಿ ಎನ್ನುವ ಮೂಲಕ ಒಕ್ಕಲಿಗ ಪ್ಲೇ ಕಾರ್ಡ್ ನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಸಿದ್ದಾರೆ .ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಬೇವಿನಹಳ್ಳಿಯಲ್ಲಿ ನಡೆದಿರುವ ಪ್ರಜಾಧ್ವನಿ ಯಾತ್ರೆಗಳ ವೇಳೆ ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ. ದೇವೇಗೌಡರನ್ನು ಪ್ರಧಾನಿ ಮಾಡಿ ಆಯ್ತು, ಕುಮಾರಸ್ವಾಮಿ ಅವರನ್ನ ಎರಡು ಬಾರಿ ಸಿಎಂ ಮಾಡಿಯೂ ಆಗಿದೆ. ನಾನು ನಿಮ್ಮ ಮನೆ ಮಗ, ನಾನು ರೈತನ ಮಗನಿದ್ದೇನೆ, ನನಗೆ ಒಂದು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ನಿಂದ ಏನು ಅಭಿವೃದ್ದಿಯಾಗಿಲ್ಲ, ಇಲ್ಲಿ ಎಷ್ಟು ಕೆಲಸವಾಗಿದೆ ಎಂದು ಗಮನದಲ್ಲಿ ಇಟ್ಟುಕೊಂಡು ನನಗೆ ಮತ ಕೋಡಿ ಎಂದು ಹೇಳಿದ್ದಾರೆ.
Add Asianetnews Kannada as a Preferred Source
