ಜೆಡಿಎಸ್ ಭದ್ರಕೋಟೆ ಪುಡಿ ಮಾಡಲು ಬಿಜೆಪಿ ಪ್ಲಾನ್: 'ಕೇಸರಿ' ತ್ರಿಶೂಲ ವ್ಯೂಹದ ರಹಸ್ಯ ಏನು?

ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕೇಸರಿ ಪತಾಕೆ ಹಾರಿಸಲು ಬಿಜೆಪಿ ಪ್ಲಾನ್ ಮಾಡ್ತಿದೆ. ಈ ಹಾದಿನಲ್ಲಿ ಬಿಜೆಪಿಗೆ ಎದುರಾಗಲಿರೋ ಸವಾಲುಗಳು ಯಾವುವು ಎಂಬ ಡೀಟೇಲ್ಸ್ ಇಲ್ಲಿದೆ...

Share this Video
  • FB
  • Linkdin
  • Whatsapp

ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯ, ಹಾಸನ ಹಾಗೂ ರಾಮನಗರ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿವೆ. ದಳಪತಿಗಳ ಉಕ್ಕಿನ ಕೋಟೆಯನ್ನು ಕುಟ್ಟಿ ಕೆಡಲು ಕೇಸರಿ ಪಡೆ ಹೊರಟಿದೆ. ಇದಕ್ಕಾಗಿ ತ್ರಿಶೂಲ ವ್ಯೂಹವನ್ನು ಹೆಣೆದು ಅಖಾಡಕ್ಕಿಳಿದಿದೆ. ಮಂಡ್ಯದಲ್ಲಿ ರಾಜಾಹುಲಿ ಪುತ್ರ, ರಾಮನಗರದಲ್ಲಿ ಮಲ್ಲೇಶ್ವರಂ ಮಗಧೀರ, ಹಾಸನದಲ್ಲಿ ಬಿಜೆಪಿಯ ರಾಷ್ಟ್ರಾಧ್ಯಕ್ಷ. ಹೀಗೆ 3 ಕೋಟೆಗಳ ಕೈವಶಕ್ಕೆ ಬಿಜೆಪಿ ತಂತ್ರ ರೂಪಿಸಿದೆ. ರಾಮನಗರದಲ್ಲಿ ಸಚಿವ ಅಶ್ವತ್ಥನಾರಾಯಣ್ ರಾಮಾಸ್ತ್ರ, ಸಕ್ಕರೆನಾಡಿನಲ್ಲಿ ವಿಜಯೇಂದ್ರ ಅವರ ಮಂಡ್ಯಾಸ್ತ್ರ. ಜೆಡಿಎಸ್ ಭದ್ರಕೋಟೆಯ ಮತ್ತೊಂದು ಅಖಾಡದಲ್ಲಿ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಂದ್ಲೇ ರಣಕಹಳೆ ಮೊಳಗಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಗುಪ್ತ ಸರ್ವೆ: ಸೂಕ್ತ ಅಭ್ಯರ್ಥಿಗಳಾಗಿ ಹುಡುಕಾಟ

Related Video