ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?

ಬಿಗ್ ಬಾಸ್ ಮನೆಯಲ್ಲಿ ಈ ವಾರ ಗಿಲ್ಲಿ ನಟ ಕ್ಯಾಪ್ಟನ್ ಆಗಿರೋದು ಗೊತ್ತೇ ಇದೆ. ಬೇರೆಯವರು ಕ್ಯಾಪ್ಟನ್ ಆಗಿದ್ದಾಗ ಕಿತಾಪತಿ ಮಾಡ್ತಾ ಇದ್ದ ಗಿಲ್ಲಿಗೆ, ಈಗ ಎಲ್ಲರೂ ತನ್ನ ಮಾತು ಕೇಳುವಂತೆ ಮಾಡೋದು ದೊಡ್ಡ ಸವಾಲೇ ಆಗಿದೆ. ಅಂತೆಯೇ ಕಿತಾಪತಿ ಕ್ಯಾಪ್ಟನ್ ಜೊತೆ ಮನೆಮಂದಿಯ ಜಟಾಪಟಿ ಶುರುವಾಗಿದೆ.

Share this Video
  • FB
  • Linkdin
  • Whatsapp

ಬಿಗ್ ಬಾಸ್ ಮನೆಯಲ್ಲಿ ಈ ವಾರ ಗಿಲ್ಲಿ ಕ್ಯಾಪ್ಟನ್ ಆಗಿದ್ದಾನೆ. ಸೀಸನ್ ಕೊನೆಗೆ ಬಂದ್ರೂ ಕ್ಯಾಪ್ಟನ್ ಆಗೋ ಚಾನ್ಸ್ ಸಿಕ್ಕಿಲ್ಲ ಅಂತ ಬೇಸರಿಸಿಕೊಂಡಿದ್ದ ಗಿಲ್ಲಿಗೆ ಕೊನೆಗೂ ಕ್ಯಾಪ್ಟನ್ ಆಗೋ ಯೋಗ ಬಂದಿದೆ. ಅಸಲಿಗೆ ಗಿಲ್ಲಿ ಕ್ಯಾಪ್ಟನ್ ಆಗಿದ್ದನ್ನ ಎಲ್ಲರೂ ಸಂಭ್ರಮಿಸಿದ್ರು. ಅಶ್ವಿನಿ ಗೌಡ ಗಿಲ್ಲಿ ತಿಲಕ ಇಟ್ಟಿದ್ರು. ಅದನ್ನ ನೋಡಿ ಎಲ್ಲರೂ ರಾಜಮಾತೆ-ಬಾಹುಬಲಿ ಜೊತೆಗೆ ಹೋಲಿಕೆ ಮಾಡಿದ್ರು. ಆದ್ರೆ ಇದರ ಮರುದಿನವೇ ರಾಜಮಾತೆ-ಬಾಹುಬಲಿ ನಡುವೆ ದೊಡ್ಡ ಕದನ ನಡೆದಿದೆ. ಅಡುಗೆ ಮನೆ ಕ್ಲೀನ್ ಮಾಡು ಅಂತ ಗಿಲ್ಲಿ ಹೇಳಿದಾಗ ಅಶ್ವಿನಿ ನಾನು ಮಾಡಲ್ಲ ಅಂದಿದ್ದಾರೆ. ಮಾಡದೇ ಹೋದ್ರೆ ನಿದ್ದೆ ಮಾಡೋದಕ್ಕೆ ಬಿಡಲ್ಲ ಅಂತ ಗಿಲ್ಲಿ, ಪಾತ್ರೆ-ತಟ್ಟೆ ಸೌಂಡ್ ಮಾಡಿ ಅಶ್ವಿನಿಗೆ ರಾತ್ರಿಯಿಡಿ ಕಾಟ ಕೊಟ್ಟಿದ್ದಾನೆ.

Related Video