ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ

ಬಿಗ್ ಬಾಸ್ ಮನೆಯಿಂದ ಕಳೆದ ವಾರ ಹೊರಬಂದಿರೋದು ಗಾಯಕ ಮಾಳು ನಿಪನಾಳ. ಉತ್ತರ ಕರ್ನಾಟಕ ಮಂದಿಯ ದೊಡ್ಡ ಬೆಂಬಲದ ನಡುವೆನೂ ಮಾಳು ದೊಡ್ಮನೆಯಿಂದ ಹೊರಬಂದಿದ್ದಾರೆ. ಎಲಿಮಿನೇಟ್ ಆದ ಮಾಳು ಹೊರಬರ್ತಾನೆ ಒಂದಿಷ್ಟು ಬಾಂಬ್ ಸಿಡಿಸಿದ್ದಾರೆ.

Share this Video
  • FB
  • Linkdin
  • Whatsapp

ಕಳೆದ ವಾರ ಸೂರಜ್ ಮತ್ತು ಮಾಳು ನಿಪನಾಳ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ರು. ಸೂರಜ್ ಎಲಿಮಿನೇಟ್ ಆಗಿದ್ರಲ್ಲಿ ವಿಶೇಷ ಏನಿಲ್ಲ. ಆದ್ರೆ ಉತ್ತರ ಕರ್ನಾಟಕ ಅಭಿಮಾನಿಗಳ ಭರಪೂರ ಬೆಂಬಲ ಇದ್ರೂ ಮಾಳು ಔಟ್ ಆಗಿದ್ದು ಅನೇಕರಿಗೆ ಶಾಕ್ ಆಗಿತ್ತು. ಇದೀಗ ಖುದ್ದು ಮಾಳು ಹೊರಗಡೆ ಬಂದು ಒಂದಿಷ್ಟು ಬಾಂಬ್ ಸಿಡಿಸಿದ್ದಾರೆ. ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ.. ಗಿಲ್ಲಿ ನನ್ನ ಮುಂದೆ ಸಿಲ್ಲಿ ಅಂದಿದ್ದಾರೆ. ಹೌದು, ಗಿಲ್ಲಿ ಒಂದು ಟಾಸ್ಕ್ ಕೂಡ ನೆಟ್ಟಗೇ ಆಡಿಲ್ಲ. ಗೆಲ್ಲಬೇಕು ಅನ್ನೋ ಹುರುಪು ಗಿಲ್ಲಿಯಲ್ಲಿಲ್ಲ. ಕಾಮಿಡಿ ಬಿಟ್ರೆ ಗಿಲ್ಲಿಯಲ್ಲಿ ಮತ್ತೇನೂ ಇಲ್ಲ ಅಂತಾರೆ ಮಾಳು. ಇನ್ನೂ ಸ್ಪಂದನಾಗಿಂತ ನಾನೇನೂ ಕಮ್ಮಿಯಿಲ್ಲ. ಆದ್ರೂ ನಾನೂ ಆಚೆ ಬಂದಿದ್ದು ಶಾಕ್ ಆಗಿದೆ ಅಂತಾರೆ ಮಾಳು.

Related Video