ದಕ್ಷಿಣ ಕನ್ನಡದಲ್ಲಿ ಬಿಜೆಪಿಯಿಂದ ಗುಪ್ತ ಸರ್ವೆ: ಸೂಕ್ತ ಅಭ್ಯರ್ಥಿಗಳಾಗಿ ಹುಡುಕಾಟ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯು ಗುಪ್ತ ಸರ್ವೆ ನಡೆಸಿದ್ದು, ಆಯಾ ಕ್ಷೇತ್ರಗಳಲ್ಲಿ ವಿಸ್ತಾರಕರ ಮೂಲಕ ಜನರ ನಾಡಿಮಿಡಿತ ಸಂಗ್ರಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯು ಸರ್ವೆ ನಡೆಸಿದ್ದು, ಪುತ್ತೂರು, ಸುಳ್ಯ ಮತ್ತು ಉಳ್ಳಾಲ ಕ್ಷೇತ್ರದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಯಾವ ಅಭ್ಯರ್ಥಿ ಸೂಕ್ತ ಎಂದು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದು, ಹಿಂದೂ ಸಂಘಟನೆ ಮುಖಂಡರ ಹೆಸರಿನಲ್ಲೂ ಅಭಿಪ್ರಾಯ ಕೇಳಲಾಗಿದೆ. ಕಡಲ ತಡಿಯಲ್ಲಿ ಗೊಂದಲ ನಿವಾರಣೆಗೆ ಸಂಘ ಪರಿವಾರ ಫೀಲ್ಡ್‌ಗಿಳಿದಿದ್ದು, ಈ ತಿಂಗಳ ಅಂತ್ಯಕ್ಕೆ ವಿಸ್ತಾರಕ ತಂಡ ವರದಿ ಸಿದ್ಧಪಡಿಸಲಿದೆ. ಮೂರು ಕ್ಷೇತ್ರಗಳಲ್ಲಿ ತಳಮಟ್ಟದ ರಿಪೋರ್ಟ್ ತಯಾರಿಸಲಾಗುತ್ತಿದ್ದು, ಯಾವ ಕ್ಷೇತ್ರಗಳಲ್ಲಿ ಶಾಸಕರ ಆಡಳಿತ ವಿರೋಧ ಅಲೆ ಇದೆ ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ.