ಸಂಗೊಳ್ಳಿ ರಾಯಣ್ಣನ ಕಥೆ ಹೇಳಿ ಹಿತಶತ್ರುಗಳ ಸಂಚು ಬಯಲಿಗೆಳೆದ ಸಿಎಂ ಸಿದ್ದರಾಮಯ್ಯ!

ಸಿಎಂ ಸಿದ್ದರಾಮಯ್ಯನವರು ಅಪ್ರತಿಮ ಸ್ವಾತಂತ್ರ್ಯ ಯೋಧ ಸಂಗೊಳ್ಳಿ ರಾಯಣ್ಣನ ಕಥೆ ಹೇಳುವ ಮೂಲಕ ತಮಗೂ ಮೋಸ, ಸಂಚು, ಷಡ್ಯಂತ್ರ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Share this Video
  • FB
  • Linkdin
  • Whatsapp

ದೇಶದ ಅಪ್ರತಿಮ ಸ್ವಾತಂತ್ರ್ಯ ಯೋಧ, ಬ್ರೀಟೀಷರ ನಿದ್ದೆಗೆಡಿಸಿದ ವೀರ ಸಂಗೊಳ್ಳಿ ರಾಯಣ್ಣನ ಕಥೆ ನಿಮಗೆ ಗೊತ್ತೇ ಇರುತ್ತದೆ. ರಕ್ತ ಸಂಬಂಧಿಯ ಸಂಚಿಗೆ ಬಲಿಯಾಗಿ ಬ್ರಿಟಿಷರಿಗೆ ಸೆರೆಯಾಗಿದ್ದ ಸಂಗೊಳ್ಳಿ ರಾಯಣ್ಣನ ಕಥೆಯನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ತಮಗೂ ಹಿತ ಶತ್ರುಗಳ ಕಾಟವಿದೆ ಎಂಬುದರ ಸುಳಿವು ನೀಡಿದ್ದಾರೆ. ಜೊತೆಗೆ, ಹಿತಶತ್ರುಗಳಿಗೂ ನೇರವಾಗಿ ಎಚ್ಚರಿಕೆ ರವಾನಿಸಿದ್ದಾರೆ. 

Add Asianetnews Kannada as a Preferred SourcegooglePreferred

ಮುಡಾ ಚಕ್ರವ್ಯೂಹ ಎದ್ದು ನಿಂತಿರೋ ಹೊತ್ತಲ್ಲಿ ಸಿದ್ದು ಬಾಯಲ್ಲಿ ಮೋಸ, ಸಂಚು, ಷಡ್ಯಂತ್ರದ ಮಾತು ಕೇಳಿಬಂದಿದೆ. ಐದು ದಿನಗಳಲ್ಲಿ ಎರಡು ಬಾರಿ ರಾಯಣ್ಣನಿಗಾದ ಮೋಸದ ಕಥೆ ಹೇಳಿದ ಸಿಎಂ ಹೇಳಿದರು. ಜೊತೆಯಲ್ಲಿದ್ದವರಿಂದಲೇ ಸಿದ್ದರಾಮಯ್ಯನವರಿಗೆ ಮುಡಾ ಸಂಕಷ್ಟ ಎದುರಾಗಿದೆ ಎಂಬ ಸುಳಿವನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಮುಡಾ ಸಂಕಷ್ಟ ಎದುರಾಗಿರೋ ಹೊತ್ತಲ್ಲಿ ಸಂಗೊಳ್ಳಿ ರಾಯಣ್ಣನಿಗೆ ಜೊತೆಗಾರರಿಂದಲೇ ಆದ ಮೋಸದ ಕಥೆಯನ್ನು ಹೇಳಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯಗೂ ಅಂಥದ್ದೇ ಮೋಸವಾಯ್ತಾ.? ಸಿದ್ದು ವಿರುದ್ಧ ತೆರೆಯ ಹಿಂದೆ ನಡೀತಾ ಮುಡಾ ಸಂಚು, ಅಷ್ಟಕ್ಕೂ ಏನದು ತೆರೆಯ ಹಿಂದಿನ ರಾಜಕಾರಣ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರು 'ಪರದೆ ಕೇ ಪೀಚೆ' ಆಡ್ತಿರೋ ಆಟ ಅದೆಷ್ಟು ರೋಚಕವಾಗಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಇದನ್ನೂ ಓದಿ: ಗಣೇಶ ಹಬ್ಬದಲ್ಲಿ ಪ್ರಸಾದ ವಿತರಣೆಗೆ FSSAI ಲೈಸೆನ್ಸ್ ಕಡ್ಡಾಯ; ಹಿಂದೂ ವಿರೋಧಿ ಸರ್ಕಾರವೆಂದ ಬಿಜೆಪಿ!

ರಾಜ್ಯದಲ್ಲಿ ತಮಗೆ ಹಿತ ಶತ್ರುಗಳ ಕಥೆ ಹೇಳಿದ ಸಿದ್ದರಾಮಯ್ಯ, ಶತ್ರು ಕಾಟದಿಂದ ಪಾರಾಗಲು ನಾಡದೇವತೆ ಚಾಮುಂಡೇಶ್ವರಿಯ ಮೊರೆ ಹೋಗಿದ್ದಾರೆ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈಡುಗಾಯಿ ಒಡೆದಿದ್ದಾರೆ. ತಮ್ಮ ಸುತ್ತಲೂ ಶತ್ರು ಕೋಟೆಯೇ ಎದ್ದು ನಿಂತಿದೆ. ಶತ್ರುಕಾಟದಿಂದ ಪಾರು ಮಾಡುವಂತೆ ದೇವಿಗೆ ಮೊರೆ ಇಟ್ಟಿದ್ದಾರೆ.

Related Video