ಸಿದ್ದು ಸರ್ಕಾರದ ನಡೆಯ ಹಿಂದಿದ್ಯಾ I.N.D.I.A. ಋಣ..? ವಿರೋಧದ ಮಧ್ಯೆಯೂ ರಾಜ್ಯ ಸರ್ಕಾರ ನೀರು ಬಿಟ್ಟದ್ದೇಕೆ..?

ಮತ್ತೆ ಧಗ ಧಗಿಸಿತು ಕಾವೇರಿ ಜಲಯುದ್ಧದ ಕಿಚ್ಚು..!
ಲೋಕಸಭಾ ಚುನಾವಣೆಗಾಗಿ ಈ ನಿರ್ಧಾರನಾ..?
ಕಾವೇರಿ ನೀರಿಗಾಗಿ ಬೀದಿಗಿಳಿದ ಕೇಸರಿ ಕಲಿಗಳು..!

Share this Video
  • FB
  • Linkdin
  • Whatsapp

ಕೆಆರ್‌ಎಸ್‌ ಡ್ಯಾಮ್‌ನಲ್ಲಿ ನೀರಿನ ಕೊರತೆಯ ನಡುವೆಯೂ ತಮಿಳುನಾಡಿಗೆ(Tamilnadu) ನೀರು ಬಿಟ್ಟಿರೋದನ್ನು ವಿರೋಧಿಸಿ ಸಕ್ಕರೆ ನಾಡಿನಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಒಂದ್ಕಡೆ ಬಿಜೆಪಿ(BJP) ನಾಯಕರ ಪ್ರತಿಭಟನೆ, ಮತ್ತೊಂದ್ಕಡೆ ರೈತ ಸಂಘ, ಕನ್ನಡ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸುತ್ತಿವೆ. ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ನಿರ್ಧಾರವನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ತಮಿಳುನಾಡು ಸರ್ಕಾರ ಕಳೆದ 14ನೇ ತಾರೀಕಿನಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಬೆಳೆಗಳ ರಕ್ಷಣೆಗಾಗಿ ಪ್ರತಿ ದಿನ 24 ಸಾವಿರ ಕ್ಯೂಸೆಕ್ ಕಾವೇರಿ(Cauvery) ನದಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಅಂತ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಇದಕ್ಕೂ ಮೊದಲು ನಡೆದ ಕಾವೇರಿ ಪ್ರಾಧಿಕಾರದ ಸಭೆಯಲ್ಲೂ ಕ್ಯಾತೆ ತೆಗೆದಿದ್ದ ತಮಿಳುನಾಡು, 15 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕ(Karnataka) ಸರ್ಕಾರಕ್ಕೆ ಆದೇಶ ನೀಡುವಂತೆ ಪ್ರಾಧಿಕಾರವನ್ನು ಆಗ್ರಹಿಸಿತ್ತು. ಆದರೆ ಕಾವೇರಿ ನದಿಪಾತ್ರದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಕಾರಣ ನೀರು ಹರಿಸಲು ಸಾಧ್ಯವಿಲ್ಲ ಅಂತ ಪ್ರಾಧಿಕಾರದ ಮುಂದೆ ಕರ್ನಾಟಕ ಸರ್ಕಾರ ವಾದ ಮಂಡಿಸಿತ್ತು. ಇದಾದ ನಂತರ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರಿಂದ 12,631 ನೀರು ಬಿಡಲಾಗಿದೆ.

Add Asianetnews Kannada as a Preferred SourcegooglePreferred

ಇದನ್ನೂ ವೀಕ್ಷಿಸಿ:  ಪ್ರವಾಸದ ಹೊತ್ತಲ್ಲಿ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ: ಲಡಾಖ್ ಪ್ರವಾಸದ ಹಿಂದಿದೆಯಾ ರಾಜಕಾರಣ?

Related Video