ಪ್ರವಾಸದ ಹೊತ್ತಲ್ಲಿ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ: ಲಡಾಖ್ ಪ್ರವಾಸದ ಹಿಂದಿದೆಯಾ ರಾಜಕಾರಣ?
ಲಡಾಖ್ನಲ್ಲಿ ರಾಹುಲ್ ಗಾಂಧಿ ಪ್ರವಾಸ!
KTM 390 ಮೇಲೆ ರಾಹುಲ್ ವಿಹಾರ!
ಪ್ಯಾಂಗಾಂಗ್ ಸರೋವರದಲ್ಲಿ ರಾಗಾ!
ಜಮ್ಮು ಮತ್ತು ಕಾಶ್ಮೀರದಲ್ಲಿ ರಾಹುಲ್ ಗಾಂಧಿ(Rahul Ghandhi ) ವೀರ ವಿಹಾರ ನಡೆಸಿದ್ದಾಯ್ತು. ಚೀನಾ ಭಾರತದ ನೆಲವನ್ನ ಆಕ್ರಮಿಸಿಕೊಂಡಿದೆ ಎಂದು ರಾಹುಲ್ ಗಾಂಧಿ ಒಂದು ಸ್ಟೇಟ್ಮೆಂಟ್ ಕೊಟ್ರು. ಈ ಮಾತನ್ನ ಕೇಳಿ, ಕೇಸರಿ ಪಡೆ ಹಸ್ತ ಪಾಳಯದ ಮೇಲೆ ಮುಗಿಬಿದ್ದಿದೆ. 2024ರಲ್ಲಿ ನಡೆಯಲಿರೋ ಲೋಕಸಭಾ ಸಂಗ್ರಾಮದಲ್ಲಿ ಒಂದು ಕಡೆ ಮೋದಿ(Modi) ಪಡೆ ಇನ್ನೊಂದುಕಡೆ ಐಎನ್ಡಿಐಎ ಸೇನೆ, ಯುದ್ಧ ಸನ್ನದ್ಧವಾಗಿ ನಿಂತಿದ್ದಾವೆ. ಸದ್ಯಕ್ಕಂತೂ ಬರೀ ಲೀಡರ್‌ಗಳೇ ತುಂಬಿತುಳುಕ್ತಾ ಇರೋ ಮಹಾಮೈತ್ರಿಯಲ್ಲಿ, ಯಾರು ನೇತೃತ್ವ ವಹಿಸಿಕೊಳ್ತಾರೆ ಅನ್ನೋದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹೀಗಿರುವಾಗ್ಲೇ, ಕಾಂಗ್ರೆಸ್ ನಾಯಕ, ರಾಹುಲ್ ಗಾಂಧಿ, ಮೋದಿ ಅಶ್ವಮೇಧಕ್ಕೆ ಟಕ್ಕರ್ ಕೊಡೋದಕ್ಕೆ ದೊಡ್ಡ ಮಟ್ಟದಲ್ಲೇ ಸಜ್ಜಾಗ್ತಾ ಇದಾರೆ. ಕಾಂಗ್ರೆಸ್(Congress) ನಾಯಕ ರಾಹುಲ್ ಗಾಂಧಿ ಲಡಾಖ್ ಪ್ರವಾಸ ಕೈಗೊಂಡಿದಾರೆ. ಬೈಕ್ ರೈಡಿಂಗ್‌ಗೆ ಅಂತಲೇ ಫೇಮಸ್ ಆಗಿರೋ ಲಡಾಖ್‌ನಲ್ಲಿ ಶನಿವಾರ ಬೈಕ್ ಓಡಿಸಿ ರಾಹುಲ್ ಗಮನ ಸೆಳೆದರು. ಕಳೆದ ಶನಿವಾರ ಬೈಕ್ ರೈಡ್(Bike Ride) ಮೂಲಕ ಪ್ಯಾಂಗಾಂಗ್ ಸರೋವರಕ್ಕೆ ತೆರಳಿದ್ದಾರೆ. ಸಧ್ಯಕ್ಕೆ ರಾಹುಲ್ ಗಾಂಧಿ ಅವರ ಈ ಬೈಕ್ ರೈಡ್ ಫೋಟೋಗಳು ಎಲ್ಲಾ ಕಡೆ ವೈರಲ್ ಆಗ್ತಿದಾವೆ.
ಇದನ್ನೂ ವೀಕ್ಷಿಸಿ: 'ನಮ್ಮೂರ ನಾಗರ ಪಂಚಮಿ' ಕಾರ್ಯಕ್ರಮ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾಗಿ