ಈಗ ಬದಲಾಗುತ್ತಾ ರಾಜ್ಯ ರಾಜಕೀಯದ ಲೆಕ್ಕಾಚಾರ..? 28 ಕ್ಷೇತ್ರ ಗೆಲ್ಲಲು ಸಿದ್ಧವಾಗಿದೆ ಪದ್ಮದಳ ವ್ಯೂಹ!
ಮೋದಿಗೆ ಪಟ್ಟಕಟ್ಟಿಸಲು ಅಖಾಡಕ್ಕೆ ಹೊಸ ಅಣ್ಣ-ತಮ್ಮ..!
ವಿಜಯ ಪತಾಕೆ ಹಾರಿಸಲು ಇಂದ್ರನ ಜೊತೆ ಸೇರಿದ ದಳಪತಿ!
ಗೆಲ್ಲಿಸಿಕೊಡೊ ಹೊಣೆಗಾರಿಕೆ ಬಿಜೆಪಿ ಯುವನಾಯಕರ ಹೆಗಲಿಗೆ!
ಮೋದಿಗೆ ಪಟ್ಟಕಟ್ಟಿಸಲು ಅಖಾಡಕ್ಕೆ ಕಾಲಿಟ್ಟಿದ್ದಾರೆ ಹೊಸ ಅಣ್ಣ-ತಮ್ಮ..ವಿಜಯ ಪತಾಕೆ ಹಾರಿಸಲು ಇಂದ್ರನ ಜೊತೆ ಸೇರಿ ದಳಪತಿ ನಡೆಸಲಿದ್ದಾರೆ ದಂಡಯಾತ್ರೆ. ಲೋಕಸಭಾ(Loksabha) ಸಂಗ್ರಾಮ ಶುರುವಾಗೋಕೆ ಕ್ಷಣಗಣನೆ ಶುರುವಾಗಿದೆ. ದೇಶದಾದ್ಯಂತ ರಾಜಕೀಯ ಪಕ್ಷಗಳು, ಇನ್ನಿಲ್ಲದಂತೆ ಸಮರಾಭ್ಯಾಸ ನಡೆಸ್ತಾ ಇದಾವೆ. ಒಂದೆಡೆ ಮೂರನೇ ಬಾರಿಗೆ ಅಧಿಕಾರ ಗಳಿಸಬೇಕು ಅಂತ ದಂಡಯಾತ್ರೆ ಹೊರಟಿರೋ ಮೋದಿ(Narendra Modi) ಪಡೆ ಇದೆ. ಇನ್ನೊಂದೆಡೆ ಮೋದಿ ನಾಗಾಲೋಟಕ್ಕೆ ಬ್ರೇಕ್ ಹಾಕೋಕೆ, ವಿಪಕ್ಷಗಳೆಲ್ಲಾ ಪಣತೊಟ್ಟು ನಿಂತಿದ್ದಾವೆ. ಇದೆಲ್ಲದರ ಮಧ್ಯೆ, ಕರ್ನಾಟಕ ರಾಜಕೀಯ ರಣಾಂಗಣ ಮಾತ್ರ ಕ್ಷಣಕ್ಷಣಕ್ಕೂ ರೋಚಕವಾಗ್ತಾ ಇದೆ. ಕರ್ನಾಟಕದಲ್ಲಿ ಭರ್ಜರಿ ದಿಗ್ವಿಜಯ ಸಾಧಿಸಿರೋ ಹಸ್ತಪಾಳಯ ಮುಂದಿನ ಲೋಕಸಭೆಯಲ್ಲೂ ಕಮಾಲ್ ಮಾಡ್ತೀವಿ.ಅತಿಹೆಚ್ಚು ಕ್ಷೇತ್ರಗಳನ್ನ ಗೆಲ್ಲೋ ಮೂಲಕ ಹೊಸ ಚರಿತ್ರೆ ಬರೀತೀವಿ ಅಂತ ಹೇಳ್ತಾ ಇದೆ. ಕಾಂಗ್ರೆಸ್(Congress) ಭರ್ಜರಿಯಾಗಿ ಗೆದ್ದಿದೆ-ನಿಜ. ಆ ಗೆಲುವು ಕೈಪಾಳಯಕ್ಕೆ ಎಲ್ಲೇ ಹೋದ್ರೂ ಜೈಕಾರ ಸಿಗೋ ಹಾಗೆ ಮಾಡಲಿದೆ ಅನ್ನೋ ನಂಬಿಕೆ ಮೂಡಿರೋದೂ-ನಿಜ.. ಅದೇ ಗೆಲುವಿನ ಹುಮ್ಮಸ್ಸಿನಲ್ಲಿ ಲೋಕಸಭೆಯಲ್ಲೂ ಮ್ಯಾಜಿಕ್ ಮಾಡೋಕೆ ಹೊರಟಿದೆ ಅನ್ನೋದೂ ನಿಜ. ಆದ್ರೆ, ಕಾಂಗ್ರೆಸ್ ಗೆ ವಿಧಾನಸಭೆ ಗೆದ್ದಷ್ಟು ಸುಲಭವಿಲ್ಲ, ಲೋಕಸಭಾ ಸಮರ ಗೆಲ್ಲೋದು, ಅದಕ್ಕೆ ಕಾರಣ, ಮೋದಿ ಅನ್ನೋ ಮೋಡಿಗಾರ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ, ಈ ಬಾರಿ ಕರ್ನಾಕವನ್ನ ಸೀರಿಯಸ್ಸಾಗೇ ತಗೊಂಡಿದಾರೆ. ದಕ್ಷಿಣದ ಏಕಮಾತ್ರ ಭದ್ರಕೋಟೆಗೆ ಮತ್ತೊಬ್ಬರು ಲಗ್ಗೆ ಇಡೋಕೆ ಬಡಬಾರದು ಅಂತ ಡಿಸೈಡ್ ಆಗಿದಾರೆ. ಹಾಗಾಗಿನೇ, ರಾಜಕೀಯ ಚತುರತೆ ಮೆರೆಯೋಕೆ ನೋಡ್ತಿದ್ದಾರೆ.. ಕರ್ನಾಟಕ ಬಿಜೆಪಿಲಿ ನಡೀತಿರೋ ಒಂದೊಂದು ಬೆಳವಣಿಗೆ ನೋಡಿದ್ರೂ, ಇದರ ಹಿಂದಿರೋ ಅಸಲಿಯತ್ತು ಅರ್ಥವಾಗುತ್ತೆ.
ಇದನ್ನೂ ವೀಕ್ಷಿಸಿ: ಕುತೂಹಲ ಮೂಡಿಸಿದ ಕದಂಬರ ಕಾಲದ ಕಥೆ..! ಮತ್ತೆ ಸದ್ದು ಮಾಡುತ್ತಿದೆ ಅಬ್ಬರದ ಕಾಂತಾರ..!