ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಉಚಿತಾಯುಧ: ಆ ಅಸ್ತ್ರ ಕೈಗೆತ್ತಿಕೊಳ್ಳುತ್ತಾ ಕೇಸರಿ ಪಾಳಯ..?

ಮೋದಿ ವಿರುದ್ಧ ಗುಡುಗಲು I.N.D.I.A ಸಿದ್ಧ!
ಎಲ್ಲೆಲ್ಲೂ ಸದ್ದು ಮಾಡುತ್ತಿದೆ ಉಚಿತಾಯುಧ!
ಆ ಅಸ್ತ್ರ ಕೈಗೆತ್ತಿಕೊಳ್ಳುತ್ತಾ ಕೇಸರಿ ಪಾಳಯ..?

Share this Video
  • FB
  • Linkdin
  • Whatsapp

ಕರ್ನಾಟಕದಲ್ಲಿ ಹುಟ್ಟಿಕೊಂಡ ರಾಜಕೀಯ ಅಲೆಯೊಂದು, ಈಗ ಸುನಾಮಿಯಂತೆ ಇಡೀ ದೇಶವನ್ನೇ ಆವರಿಸಿಕೊಳ್ಳೋ ಲಕ್ಷಣಗಳು ಕಾಣಿಸ್ತಿದ್ದಾವೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರೋ ಲೋಕಸಂಗ್ರಾಮದಲ್ಲಿ, ಮಹಾವಿಜಯ ಸಾಧಿಸೋಕೆ, ಕರ್ನಾಟಕದಲ್ಲಿ ಬಳಸಿದ ಅಸ್ತ್ರವನ್ನೇ ಪ್ರಯೋಗಿಸೋ ಸಾಧ್ಯತೆ ಎದ್ದು ಕಾಣ್ತಾ ಇದೆ. ಕರ್ನಾಟಕದಲ್ಲಿ ನಡೆದ ವಿಧನಸಭಾ ಚುನಾವಣೆ ವೇಳೆ, ಕಾಂಗ್ರೆಸ್(Congress) ಪಕ್ಷ 5 ಉಚಿತ ಗ್ಯಾರಂಟಿಗಳನ್ನ(guarantees) ನಾವು ರಾಜ್ಯದ ಜನರಿಗೆ ಕೊಡ್ತೀವಿ ಅನ್ನೋ ಘೋಷಣೆಯನ್ನ ಮಾಡಿತ್ತು. ಚುನಾವಣೆಯಲ್ಲಿ(Election) ಭರ್ಜರಿಯಾಗಿ ಗೆದ್ದು ಬೀಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಗೆಲುವಿನ ಕಾರಣಗಳಲ್ಲಿ ಪ್ರಮುಖವಾಗಿ ಇದ್ದಿದ್ದೇ ಉಚಿತ ಯೋಜನೆಗಳು.ಇವುಗಳಿಂದಲೇ ಭರ್ಜರಿಯಾಗಿ ಗೆಲುವನ್ನೂ ಕಂಡಿತ್ತು. ಈಗ ಹಂತಹಂತವಾಗಿ ಆ ಯೋಜನೆಗಳನ್ನೆಲ್ಲಾ ಪೂರೈಸ್ತಾ, ಜನರ ಮನಸ್ಸಲ್ಲಿ ದೊಡ್ಡದೊಂದು ಪರಿಣಾಮ ಉಂಟುಮಾಡೋ ಸಾಧ್ಯತೆ ಎದ್ದು ಕಾಣ್ತಾ ಇದೆ. ಸಧ್ಯಕ್ಕೆ ಯುವನಿಧಿ ಮತ್ತು ಗೃಹಲಕ್ಷ್ಮಿ ಬಿಟ್ಟು ಮಿಕ್ಕೆಲ್ಲಾ ಯೋಜನೆಗಳ ಫಲಾನುಭವಿಗಳು ರಾಜ್ಯದಲ್ಲಿದ್ದಾರೆ. ಇನ್ನೇನು ಕೆಲವು ದಿನಗಳಲ್ಲಿ ಅವೂ ಕೂಡ ಜಾರಿಯಾಗೋ ಸಾಧ್ಯತೆಯಂತೂ ಖಂಡಿತಾ ಇದೆ. ಈ ಯೋಜನೆಗಳನ್ನ ಘೋಷಣೆ ಮಾಡಿದ್ದರಿಂದಲೇ ಕಾಂಗ್ರೆಸ್‌ಗೆ ಗೆಲುವು ದಕ್ಕಿದಂತಾಗಿದೆ. ಇನ್ನು, ಈ ಯೋಜನೆಗಳು ಜಾರಿಯಾದ್ರೆ, ಅದು ಕಾಂಗ್ರೆಸ್ ಪಾಲಿಗೆ ವರವಾಗೋದ್ರಲ್ಲಿ ಅನುಮಾನವಂತೂ ಇಲ್ಲ.. ಅಷ್ಟೆ ಅಲ್ಲ, ಇದರ ಇಂಪ್ಯಾಕ್ಟ್ ಏನು ಅನ್ನೋದು, ಮುಂದಿನ ಲೋಕಸಭಾ ಚುನಾವಣೆಯಲ್ಲೇ ಗೊತ್ತಾಗಿಬಿಡುತ್ತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಮಾನವ ಸಹಿತ ರಾಕೆಟ್ ಉಡಾವಣೆಗೆ ಇಸ್ರೋ ಪ್ಲ್ಯಾನ್: ಪ್ರಯೋಗಿಕ ‘ವ್ಯೂಮಮಿತ್ರ’ ಆಕ್ಟೋಬರ್‌ಗೆ ಆಗಸಕ್ಕೆ..!

Related Video