ಮಾನವ ಸಹಿತ ರಾಕೆಟ್ ಉಡಾವಣೆಗೆ ಇಸ್ರೋ ಪ್ಲ್ಯಾನ್: ಪ್ರಯೋಗಿಕ ‘ವ್ಯೂಮಮಿತ್ರ’ ಆಕ್ಟೋಬರ್‌ಗೆ ಆಗಸಕ್ಕೆ..!

ಆಗಸ್ಟ್ 23ಕ್ಕೆ ಚಂದ್ರಲೋಕಕ್ಕೆ ಯಶಸ್ವಿ ಪ್ರಯಾಣದಿಂದ ಜಗತ್ತನ್ನೇ ಗೆದ್ದ ಇಸ್ರೋ ವಿಜ್ಞಾನಿಗಳು, ಈಗ ಇನ್ನಷ್ಟು ಸಾಧನೆ ಮಾಡಲು ಸಜ್ಜಾಗಿದ್ದಾರೆ.  ಭಾರತದ ಮೊದಲ ಮಾನವಸಹಿತ ಗಗನಯಾನ ಎಚ್ 1 ಉಡಾವಣೆಗೆ ತಯಾರಿ ಶುರುವಾಗಿದೆ.
 

Share this Video
  • FB
  • Linkdin
  • Whatsapp

ಗಗನಯಾನ ಮಿಷನ್‌ಗೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಪರಿಕ್ಷಾರ್ಥ ಉಡಾವಣೆಗಳನ್ನು ಇಸ್ರೋ ವಿಜ್ಞಾನಿಗಳು ಮಾಡುತ್ತಿದ್ದಾರೆ. ಯೋಜನೆ ಯಶಸ್ವಿಯಾದ್ರೆ ಭಾರತ ಗಗನಯಾನ ಯಶಸ್ವಿಗೊಳಿದ 4ನೇ ದೇಶವಾಗಲಿದೆ. ಚಂದ್ರನ(Moon) ಅಂಗಳಕ್ಕೆ ಇಳಿದ ಭಾರತ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಈಗ ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನ ಅಂಗಳದಿಂದ ಪಿನ್ ಟು ಪಿನ್ ರಿಪೋರ್ಟ್ ಕಳುಹಿಸುತ್ತಿವೆ. ಪ್ರಗ್ಯಾನ್(Pragyan) ಓಡಾಡಿದಲ್ಲೆಲ್ಲ ಚಂದ್ರನ ಮೇಲೆ ನಮ್ಮ ಅಶೋಕ ಸ್ಥಂಭದ ಮುದ್ರೆ ಕೂಡ ಬಿಳುತ್ತಿದೆ. ಚಂದ್ರಯಾನ 3 ಯಶಸ್ವಿಯಾಗ್ತಿದ್ದಂತೆ ಬೆಂಗಳೂರಿನ ಪೀಣ್ಯ ಇಸ್ರೋ ಸೆಂಟರ್‌ನಲ್ಲಿ ವಿಜ್ಞಾನಿಗಳು ಕುಣಿದು ಕುಪ್ಪಳಿಸಿದ್ರು. ಇದೇ ಸಂಭ್ರಮದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮುಂದಿನ ಯೋಜನೆಗಳೇನು ಅನ್ನೋ ಬಗ್ಗೆಯೂ ಹೇಳಿದ್ರು. ಚಂದ್ರಯಾನ(Chandrayaan) ಸಕ್ಸಸ್ ನಮಗೆ ಮುಂದೆ ಮಂಗಳಯಾನ, ಭವಿಷ್ಯದಲ್ಲಿ ಶುಕ್ರಯಾನ ಸೇರಿದಂತೆ ಮಾನವ ಸಹಿತ ಗಗನಯಾನ ಮಾಡಲು ಯೋಚನೆ ಮಾಡುವಂತೆ ಮಾಡಿದೆ. ಇಸ್ರೋದ(ISro) ಮುಂದಿನ ಮಹತ್ವಕಾಂಕ್ಷೆಯ ಯೋಜನೆ ಮಾನವ ಸಹಿತ ಗಗನಯಾನ ಮಿಷನ್‌ಗೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ವಿಜ್ಞಾನಿಗಳು ಬಾರೀ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ: ಅದ್ಭುತ ಕಲೆ..ಅಮೋಘ ಪ್ರಾವಿಣ್ಯತೆ..ಯಾರೂ ಮಾಡಲಾಗದ ಸಾಹಸ ಇವರು ಮಾಡ್ತಾರೆ !

Related Video